Ranji Trophy: ಟೆಸ್ಟ್‌ನಲ್ಲಿ ಫಾರ್ಮ್ ಇಲ್ಲದೇ ಇರುವುದುಕ್ಕೆ ರಣಜಿ ಆಡಿದ್ರು: ಇಲ್ಲು ರನ್ ಬರ ಅನುಭವಿಸಿದಕ್ಕೆ ಮುಂದಿನ ನಡೆ ಏನು
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಅವರು ಈಗ ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಬಿಸಿಸಿಐ ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನೀಡುವ ಪ್ರಾಮುಖ್ಯತೆಯನ್ನು ದೇಶೀಯ ಟೂರ್ನಿಗಳಿಗೂ ನೀಡಬೇಕು ಎಂದು ತಿಳಿಸಿತ್ತು. ಇದರಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ದೇಶೀಯ ಟೂರ್ನಿಯಲ್ಲಿ ಮೈದಾನ ಪ್ರವೇಶಿಸಿದರು.
ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಉಳಿದಂತೆ ಎಲ್ಲ ಸ್ಟಾರ್ ಆಟಗಾರರು ಈಗಾಗಲೇ ಅಂಗಳ ಪ್ರವೇಶಿಸಿದ್ದಾರೆ. ಮುಂಬೈ ಪರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಂಜಾಬ್ ಪರ ಶುಭಮನ್ ಗಿಲ್, ದೆಹಲಿ ತಂಡದ ಪರ ರಿಷಭ್ ಪಂತ್ ಮೈದಾನ ಪ್ರವೇಶಿಸಿದ್ದಾರೆ. ದೊಡ್ಡ ತಾರೆಗಳ ಬ್ಯಾಟಿಂಗ್ ನೋಡಲು ಅಂಗಳಕ್ಕೆ ಸಾವಿರಾರು ಅಭಿಮಾನಿಗಳ ದಂಡು ಜಮಾಯಿಸುತ್ತಿದೆ.

ರಣಜಿಯಲ್ಲಿ ಫ್ಲಾಪ್ ಶೋ
ರಣಜಿ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಫ್ಲಾಫ್ ಶೋ ಮುಂದುವರೆಸಿದ್ದಾರೆ. ಲೋಕಲ್ ಬೌಲರ್‌ಗಳ ಎದುರು ಸಹ ರನ್ ಕಲೆ ಹಾಕುವಲ್ಲಿ ಆಟಗಾರರು ಪರದಾಟ ನಡೆಸಿದ್ದಾರೆ. ಫಾರ್ಮ್ ಕಂಡುಕೊಳ್ಳಲು ರಣಜಿ ಟ್ರೋಫಿ ಆಡಿದರೆ, ಇಲ್ಲಿಯೂ ನಿರಾಸೆ ಆಟಗಾರರನ್ನು ಬಿಗಿದಪ್ಪಿಕೊಂಡಿದೆ. ಯಾವ ಸ್ಟಾರ್ ಆಟಗಾರನು ಸಹ ದೊಡ್ಡ ಇನಿಂಗ್ಸ್ ಕಟ್ಟಲೇ ಇಲ್ಲ. ಸಿಂಗಲ್ ಡಿಜಿಟ್‌ನಲ್ಲೇ ಆಟ ಮುಗಿಸಿದರು.
ರೋಹಿತ್ ಶರ್ಮಾ ಮಂಕು
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸಹ ಮುಂಬೈ ತಂಡದ ಪರ ಇನಿಂಗ್ಸ್ ಆರಂಭಿಸಿದರು. ಇವರು ಸಹ ರಣಜಿ ಟ್ರೋಫಿ ಪಂದ್ಯದಲ್ಲಿ ಜಮ್ಮು ಕಾಶ್ಮೀರ್ ವಿರುದ್ಧ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ರೋಹಿತ್ ಜಸ್ಟ್ 19 ಎಸೆತಗಳನ್ನು ಎದುರಿಸಿ 3 ರನ್ ಬಾರಿಸಿ ಔಟ್ ಆದರು. ಈ ಮೂಲಕ ರಣಜಿ ಟ್ರೋಫಿಯಲ್ಲೂ ನಿರಾಸೆ ಕಂಡರು.

ಶುಭಮನ್ ಅದೇ ಆಟ
ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಬರ ಎದುರಿಸಿದ್ದ ಶುಭಮನ್ ಗಿಲ್, ರಣಜಿ ಟ್ರೋಫಿಯಲ್ಲಿ ಕರ್ನಾಟಕ ವಿರುದ್ಧ ಪಂಜಾಬ್ ಪರ ಕಣಕ್ಕೆ ಇಳಿದರು. ಬ್ಯಾಟಿಂಗ್ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಚಿನ್ನಸ್ವಾಮಿ ಅಂಗಳದಲ್ಲೂ ಗಿಲ್ ಎನ್ ಕಲೆ ಹಾಕುವಲ್ಲಿ ಪರದಾಟ ನಡೆಸಿರುವುದು ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ. ಇವರು ಪಂಜಾಬ್ ಪರ ಇನಿಂಗ್ಸ್ ಆರಂಭಿಸಿ, ಕೇವಲ 8 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಬಾರಿಸಿ, ಅಭಿಲಾಶ್ ಶೆಟ್ಟಿ ತೋಡಿದ ಖೆಡ್ಡಾಗೆ ಬಲಿಯಾದರು.
ಪಂತ್ ಠುಸ್
ಸೌರಾಷ್ಟ್ರ ವಿರುದ್ಧ ದೆಹಲಿ ತಂಡ ರಣಜಿ ಟ್ರೋಫಿ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಅಂಗಳ ಪ್ರವೇಶಿಸಿದರು. ದೆಹಲಿ ತಂಡದ ಪರ ದಶಕಗಳ ಬಳಿಕ ರಣಜಿ ಟ್ರೋಫಿ ಆಡುತ್ತಿರುವ ರಿಷಭ್, ರನ್ ಕಲೆ ಹಾಕುವಲ್ಲಿ ಪರದಾಟ ನಡೆಸಿದರು. ಇವರು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ನಿರಾಸೆ ಅನುಭವಿಸಿದರು. 10 ಎಸೆತಗಳನ್ನು ಎದುರಿಸಿದ ಪಂತ್ ಕೇವಲ 1 ರನ್ ಬಾರಿಸಿ ಔಟ್ ಆದರು.
ಈ ಸ್ಟಾರ್ ಆಟಗಾರರು ರಣಜಿ ಟ್ರೋಫಿಯಲ್ಲೂ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಹಲವು ಪ್ರಶ್ನೆಗಳನ್ನು ಉದ್ಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications