ಇಂಗ್ಲೆಂಡ್ ವಿರುದ್ಧ ಸರಣಿಗೆ ಈ ದಿನ ಟೀಮ್ ಇಂಡಿಯಾ ಪ್ರಕಟ:
ಟೀಮ್ ಇಂಡಿಯಾ ಐಪಿಎಲ್ ಮುಗಿದ ಬಳಿಕ ಇಂಗ್ಲೆಂಡ್ ಪ್ರವಾಸ ಬೆಳೆಸಲಿದೆ. ಈ ವೇಳೆ ಟೀಮ್ ಇಂಡಿಯಾವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕಾರಣ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರ ಸ್ಥಾನವನ್ನು ತುಂಬುವ ಆಟಗಾರ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ನೀಡಲಾಗಿಲ್ಲ. ಆದರೆ ಟೀಮ್ ಇಂಡಿಯಾದ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಈ ದಿನದಂದು ಪ್ರಕಟಿಸುವ ಸಾಧ್ಯತೆ ಇದೆ. ಹಾಗಿದ್ರೆ ಆ ದಿನ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.
ಬಿಸಿಸಿಐ ಇನ್ನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ನೂತನ ನಾಯಕನ ಪಟ್ಟಾಭಿಷೇಕವೂ ನಡೆಯುತ್ತದೆ. ಇದಕ್ಕೆ ಬಿಸಿಸಿಐ ಮೂಹುರ್ತವನ್ನು ಸಹ ಫಿಕ್ಸ್ ಮಾಡಿದೆ. ಈ ಮೂಲಕ ಟೀಮ್ ಇಂಡಿಯಾ 37ನೇ ನಾಯಕನ ಆಯ್ಕೆಯನ್ನು ಮಾಡಲಿದೆ. ಒಂದು ವೇಳೆ ಹೊಸಬರು ಆದ್ರೆ 37 ಆಗುತ್ತದೆ. ಇಲ್ಲದೆ ಇದ್ದರೆ 36ರಲ್ಲಿ ಉಳಿಯುತ್ತದೆ.

ಬಿಸಿಸಿಐ ಮೂಲಗಳ ಪ್ರಕಾರ ಇಂಗ್ಲೆಂಡ್ ಪ್ರವಾಸಕ್ಕೆ ಒಟ್ಟು 18 ಜನರ ತಂಡವನ್ನು ಪ್ರಕಟಿಸಲಾಗುತ್ತದೆ. ಇದರಲ್ಲಿ 7 ಬ್ಯಾಟರ್‌ಗಳು, 2 ವಿಕೆಟ್ ಕೀಪರ್, 2 ಆಲ್‌ರೌಂಡರ್‌ಗಳು, ಒಬ್ಬ ಸ್ಪಿನ್ ಬೌಲರ್, ಐದು ಜನ ವೇಗದ ಬೌಲರ್‌ಗಳು ಸೇರಿವೆ. ಇನ್ನು ವರದಿಗಳನ್ನು ನಂಬುವುದಾದರೆ ಶುಭಮನ್ ಗಿಲ್ ಅವರಿಗೆ ಭಾರತ ಟೆಸ್ಟ್ ತಂಡದ ನೂತನ ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಹೆಗಲಿಗೆ ಉಪನಾಯಕ ಪಟ್ಟ ಸೇರಲಿದೆ.
ಟೀಮ್ ಇಂಡಿಯಾ ಘೋಷಣೆ ಯಾವಾಗ?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಶನಿವಾರ ಅಂದರೆ, ಮೇ 24ಕ್ಕೆ ಪ್ರಕಟಿಸುವ ಸಾಧ್ಯತೆ ಇದೆ. ಇನ್ನು ಇದೇ ದಿನವೇ ಭಾರತ ತಂಡದ ನೂತನ ನಾಯಕನ ನೇಮಕ ಸಹ ಆಗಲಿದೆ. ಇನ್ನು ಬಿಸಿಸಿಐ ಆಯ್ಕೆ ಸಮಿತಿ ಯಾರಿಗೆ ನಾಯಕತ್ವದ ಹೊಣೆ ನೀಡುತ್ತದೆ ಎಂಬುದು ಕುತೂಹಲ ಹೆಚ್ಚಿದೆ. ಇನ್ನು ಯಾವೆಲ್ಲಾ ಆಟಗಾರರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗುತ್ತದೆ ಎಂಬ ಕುತೂಹಲಕ್ಕೂ ಶನಿವಾರವೇ ಉತ್ತರ ಸಿಗಲಿದೆ. ಇನ್ನು ವರದಿಗಳ ಅನುಸಾರ ಟೆಸ್ಟ್ ತಂಡಕ್ಕೆ ಕರುಣ್ ನಾಯರ್ ವಾಪಸ್ ಆಗುವ ಸಾಧ್ಯತೆ ಇದೆ. ಇನ್ನು ಶ್ರೇಯಸ್ ಅಯ್ಯರ್ ಸಹ ತಂಡಕ್ಕೆ ಮರಳಿ ಎಂಟ್ರಿ ಪಡೆಯಬಹುದು. ಇನ್ನು ರೋಹಿತ್ ಶರ್ಮಾ ಅವರಿಂದ ತೆರವಾದ ಆರಂಭಿಕ ರೋಹಿತ್ ಶರ್ಮಾ ಅವರಿಂದ ತೆರವಾದ ಸ್ಥಾನಕ್ಕೆ ಬಿ ಸಾಯಿ ಸುದರ್ಶನ್ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಇನ್ನು ಇಂಗ್ಲೆಂಡ್ ಫ್ಲೈಟ್ ಏರಲು ನಾಲ್ವರು ಕರ್ನಾಟಕದ ಸ್ಟಾರ್ ಆಟಗಾರರು ಸಿದ್ಧರಾಗಿದ್ದಾರೆ. ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣಾ, ಕೆಎಲ್ ರಾಹುಲ್, ಕರುಣ್ ನಾಯರ್ ತಂಡ ಸೇರುವ ಕನಸು ಕಾಣುತ್ತಿದ್ದಾರೆ. ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications