T20 World Cup: ಟಾಸ್ ಗೆದ್ದ ಯುಎಸ್‌ಎ ಬೌಲಿಂಗ್ ಆಯ್ಕೆ
ಟಿ20 ವಿಶ್ವಕಪ್ ಉದ್ಘಾಟನೆ ಆಗಿದೆ. ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಶನಿವಾರ ಯುಎಸ್‌ಎ ವಿರುದ್ಧ ಆರಂಭಿಸಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವಿನ ಆರಂಭವನ್ನು ಮಾಡುವ ಕನಸು ಭಾರತ ತಂಡದ್ದಾಗಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಯುಎಸ್‌ಎ ಪಾಲಾಗಿದ್ದು, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಗೆಲುವಿನ ಜೋಶ್‌ನಲ್ಲಿ ಕಣಕ್ಕೆ ಇಳಿಯಲಿದೆ. ಅಲ್ಲದೆ ಅಭ್ಯಾಸ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಅತ್ಮವಿಶ್ವಾಸ ಸೂರ್ಯಪಡೆಯದ್ದಾಗಿದೆ. ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸುವ ಇರಾದೆ ಹೊಂದಿದೆ.

ಟಾಸ್ ಗೆದ್ದ ಮೋನಾಂಕ್ ಪಟೇಲ್, ಪಿಚ್ ಚೆನ್ನಾಗಿದೆ. ಅಲ್ಲದೆ ಗುರಿ ಏನೆಂದು ತಿಳಿಯುವುದು ನಮಗೆ ಸಹಾಕಾರಿಯಾಗಲಿದೆ. ದೊಡ್ಡ ವೇದಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಸೆ ನಮ್ಮದಾಗಿದೆ. ನಮ್ಮ ತಂಡದಲ್ಲಿರುವ ಹಲವು ಆಟಗಾರರು ಭಾರತದಲ್ಲಿ ಕ್ರಿಕೆಟ್ ಆರಂಭಿಸಿದ್ದಾರೆ. ಅನೇಕ ಆಟಗಾರರಿಗೆ ಇದು ಕನಸು ನನಸಾದ ಕ್ಷಣವಾಗಿದ್ದು, ಎಲ್ಲರೂ ಆತ್ಮವಿಶ್ವಾಸವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಸೂರ್ಯಾ ಹೇಳಿದ್ದೇನು?
ಟಾಸ್ ಸೋತ ಬಳಿಕ ಮಾತನಾಡಿರುವ ಸೂರ್ಯಕುಮಾರ್ ಯಾದವ್ ನಾವು ಸಹ ಟಾಸ್ ಗೆದ್ದಿದ್ದಲ್ಲಿ ಮೊದಲು ಬ್ಯಾಟಿಂಗ್ ಮಾಡಲಿದೆ. ಇಶಾನ್ ಕಿಶನ್ ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇನ್ನು ಸಂಜು ಸ್ಯಾಮ್ಸನ್, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿಲ್ಲ. ವಾಷಿಂಗ್ಟನ್ ಸುಂದರ್ ಚೇತರಿಕೆಯ ಹಂತದಲ್ಲಿದ್ದಾರೆ ಎಂದು ಸೂರ್ಯ ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ ಒಬ್ಬ ಸ್ಪಿನ್ ಬೌಲರ್‌ನ್ನು ಕಣಕ್ಕೆ ಇಳಿಸಿದ್ದು, ವರುಣ್ ಚಕ್ರವರ್ತಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ಧಾರೆ.
ಭಾರತ ತಂಡ: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್
ಯುಎಸ್‌ಎ ಪ್ಲೇಯಿಂಗ್ ಇಲೆವೆನ್: ಸಾಯಿತೇಜ ಮುಕ್ಕಾಮಲ್ಲ, ಆಂಡ್ರಿಸ್ ಗೌಸ್ (ವಿಕೆಟ್ ಕೀಪರ್), ಮೊನಾಂಕ್ ಪಟೇಲ್ (ನಾಯಕ), ಮಿಲಿಂದ್ ಕುಮಾರ್, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ಶುಭಂ ರಂಜಾನೆ, ಮೊಹಮ್ಮದ್ ಮೊಹ್ಸಿನ್, ಶಾಡ್ಲಿ ವ್ಯಾನ್ ಶಾಲ್ಕ್ವಿಕ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications