Hong Kong Sixs 2024: ಹಾಂಕಾಂಗ್ ಸಿಕ್ಸ್ ಟೂರ್ನಿಯಲ್ಲಿ ಆಡಲಿರುವ ಟೀಮ್ ಇಂಡಿಯಾ
ಬಹು ನಿರೀಕ್ಷಿತ ಹಾಂಕಾಂಗ್ ಸಿಕ್ಸ್ ಟೂರ್ನಿ ನವೆಂಬರ್ 1 ರಿಂದ ಆರಂಭವಾಗದೆ. ಈ ಟೂರ್ನಿಯಲ್ಲಿ
ಭಾರತ ತಂಡ ಭಾಗವಹಿಸಲಿದೆ. 7 ವರ್ಷಗಳ ನಂತರ ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ಭಾಗವಹಿಸಲಿದೆ. ಈ ಬಗ್ಗೆ ಕ್ರಿಕೆಟ್ ಹಾಂಗ್ ಕಾಂಗ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ.
1992 ರಲ್ಲಿ ಪ್ರಾರಂಭವಾದ ಈ ಟೂರ್ನಿ 2017 ರವರೆಗೆ ನಡೆಯಿತು. ಇದೀಗ 7 ವರ್ಷಗಳ ನಂತರ ಈ ಟೂರ್ನಿ ಪುನಃ ಆರಂಭವಾಗುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಭಾರತ 2005ರಲ್ಲಿ ಒಮ್ಮೆ ಈ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದಲ್ಲದೇ, 1996ರಲ್ಲಿ ಟೀಮ್ ಇಂಡಿಯಾ ರನ್ನರ್ ಅಪ್ ಆಗಿತ್ತು. ಈಗ ಟೀಮ್ ಇಂಡಿಯಾ ಪಾಕಿಸ್ತಾನ, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳನ್ನು ಎದುರಿಸಲು ಸಿದ್ಧರಾಗಿದೆ.

ಟೂರ್ನಿ ಹೇಗಿರಲಿದೆ?
20ನೇ ಆವೃತ್ತಿಯ ಹಾಂಕಾಂಗ್ ಸಿಕ್ಸ್ ಟೂರ್ನಿಯಲ್ಲಿ 12 ತಂಡಗಳು ಮುಖಾಮುಖಿಯಾಗಲಿವೆ. ಈ ಟೂರ್ನಿಯ ಪಂದ್ಯಗಳು ಟಿನ್ ಕ್ವಾಂಗ್ ರೋಡ್ ಎಂಟರ್‌ಟೈನ್‌ಮೆಂಟ್ ಗ್ರೌಂಡ್‌ನಲ್ಲಿ ನಡೆಯಲಿದೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಹಾಂಗ್ ಕಾಂಗ್, ನೇಪಾಳ, ನ್ಯೂಜಿಲೆಂಡ್, ಓಮನ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡ ಟೂರ್ನಿಯಲ್ಲಿ ಮಿಂಚಲು ಸಜ್ಜಾಗಿವೆ.
ಕ್ರಿಕೆಟ್ ದಿಗ್ಗಜರಾದ ಬ್ರಿಯಾನ್ ಲಾರಾ, ವಾಸಿಂ ಅಕ್ರಮ್, ಶೇನ್ ವಾರ್ನ್, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ಅನಿಲ್ ಕುಂಬ್ಳೆ ಅವರಂತಹ ಆಟಗಾರರು ಈ ಹಿಂದೆ ಟೂರ್ನಿಯಲ್ಲಿ ಆಡಿದ್ದಾರೆ. ಭಾರತ 2005 ರಲ್ಲಿ ಒಮ್ಮೆ ಚಾಂಪಿಯನ್ ಆದರೆ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಲಾ 5 ಪ್ರಶಸ್ತಿಗಳೊಂದಿಗೆ ಅತ್ಯಂತ ಯಶಸ್ವಿ ತಂಡಗಳಾಗಿವೆ.
ವೇಳಾಪಟ್ಟಿ
ಹಾಂಗ್ ಕಾಂಗ್ ಸೂಪರ್ ಸಿಕ್ಸ್ ಪಂದ್ಯಾವಳಿಯ 2024 ರ ಆವೃತ್ತಿಯು ನವೆಂಬರ್ 1 ರಿಂದ 3 ರವರೆಗೆ ಮೂರು ದಿನಗಳಲ್ಲಿ ನಡೆಯಲಿದೆ. ಟೂರ್ನಿಯಲ್ಲಿ 12 ತಂಡಗಳ ಭಾಗವಹಿಸಲಿದ್ದು, ಟೂರ್ನಿಗೆ ಟಿನ್ ಕ್ವಾಂಗ್ ರೋಡ್ ಕ್ರಿಕೆಟ್ ಮೈದಾನದಲ್ಲಿ ಅತಿಥ್ಯವಹಿಸಿದೆ.
ನಿಯಮಗಳು
ಈ ಟೂರ್ನಿಯ ಪ್ರತಿ ಪಂದ್ಯದಲ್ಲಿ ಪ್ರತಿ ತಂಡಕ್ಕೆ ಗರಿಷ್ಠ ಐದು ಓವರ್‌ಗಳಿರುತ್ತವೆ. ವಿಕೆಟ್‌ಕೀಪರ್ ಹೊರತುಪಡಿಸಿ ಫೀಲ್ಡಿಂಗ್ ಮಾಡುವ ತಂಡದ ಪ್ರತಿಯೊಬ್ಬ ಆಟಗಾರ ಒಂದು ಓವರ್ ಬೌಲಿಂಗ್ ಮಾಡಬೇಕು. ಬ್ಯಾಟರ್ 31 ರನ್‌ಗಳನ್ನು ತಲುಪಿದಾಗ ಆಟದಿಂದ ನಿರ್ಗಮಿಸಬೇಕು. ಆದರೆ ಕೆಳ ಕ್ರಮಾಂಕದ ಬ್ಯಾಟರ್‌ಗಳು ಔಟಾದರೆ ಅಥವಾ ಗಾಯಗೊಂಡರೆ ಬ್ಯಾಟಿಂಗ್ ನಿಲ್ಲಿಸಿದ ಆಟಗಾರ ಕ್ರೀಸ್‌ಗೆ ಹಿಂತಿರುಗಲು ಅವಕಾಶವಿದೆ. ವೈಡ್ ಮತ್ತು ನೋಬಾಲ್‌ಗಳಿಗೆ ಒಂದು ರನ್ ನೀಡುವ ಬದಲಾಗಿ ಎರಡು ಹೆಚ್ಚುವರಿ ರನ್‌ಗಳಿರುತ್ತವೆ. ಪಾಯಿಂಟ್ ಪಟ್ಟಿಯಲ್ಲಿ, ಪ್ರತಿ ತಂಡವು ಗೆದ್ದ ಪ್ರತಿ ಪಂದ್ಯಕ್ಕೆ ಎರಡು ಅಂಕಗಳನ್ನು ಪಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications