WTC ಫೈನಲ್ ಬಳಿಕ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿ ಉಳಿಯಲಿದೆ ಟೀಮ್ ಇಂಡಿಯಾ: ವರದಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಟೀಮ್ ಇಂಡಿಯಾ ಪ್ರವೇಶವನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಜೂನ್ ತಿಂಗಳ 18ರಿಂದ ಆರಂಭವಾಗುವ ಫೈನಲ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಇಂಗ್ಲೆಂಡ್‌ಗೆ ಹಾರಲಿದೆ. ಆದರೆ ಈ ಟೂರ್ನಿಗಾಗಿ ತೆರಳುವ ಭಾರತ ತಂಡವನ್ನು ಒಂದು ತಿಂಗಳುಗಳ ಕಾಲ ಇಂಗ್ಲೆಂಡ್‌ನಲ್ಲಿಯೇ ಉಳಿಸಿಕೊಂಡು ಟೆಸ್ಟ್ ಸರಣಿಗೆ ಸಜ್ಜುಗೊಳಿಸಲು ಬಿಸಿಸಿಐ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಟೀಮ್ ಇಂಡಿಯಾ ಇಂಗ್ಲೀಷ್ ನೆಲದಲ್ಲಿ ಸುದೀರ್ಘ ಸರಣಿಗಾಗಿ ಸಜ್ಜಾಗಬೇಕಾಗುವ ಸಾಧ್ಯತೆಯಿದೆ.
ಭಾರತ ಹಾಗೂ ಇಂಗ್ಲೆಂಡ್ ತವರಿನಲ್ಲಿ ಐದು ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿ ಆಗಸ್ಟ್ 4 ರಿಂದ ಆರಂಭವಾಗಲಿದ್ದು ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ. ಮೊದಲ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ಆಗಸ್ಟ್ 4-8ರವರೆಗೆ ನಿಗದಿಯಾಗಿದ್ದರೆ, ಲಂಡನ್‌ನಲ್ಲಿ ಆಗಸ್ಟ್ 12-16ರ ವರೆಗೆ ಎರಡನೇ ಪಂದ್ಯ, ಲೀಡ್ಸ್‌ನಲ್ಲಿ ಆಗಸ್ಟ್ 25-29ರವರೆಗೆ 3ನೇ ಪಂದ್ಯ, ಲಂಡನ್‌ನಲ್ಲಿ ಸೆಪ್ಟೆಂಬರ್ 2-6ರವರೆಗೆ ನಾಲ್ಕನೇ ಪಂದ್ಯ ಮತ್ತು ಮ್ಯಾಂಚೆಸ್ಟರ್‌ನಲ್ಲಿ ಸೆಪ್ಟೆಂಬರ್ 10-14ರವರೆಗೆ ಟೆಸ್ಟ್ ಪಂದ್ಯಗಳು ನಿಗದಿಯಾಗಿದೆ.

ಜೂನ್‌ನಲ್ಲಿ ಇಂಗ್ಲೆಂಡ್‌ಗೆ ಟೀಮ್ ಇಂಡಿಯಾ
ಈ ವರದಿಯ ಪ್ರಕಾರ 14ನೇ ಆವೃತ್ತಿಯ ಐಪಿಎಲ್ ಮೇ 30ರಂದು ಮುಕ್ತಾಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಬಳಗ ಜೂನ್ ಮೊದಲ ವಾರದಲ್ಲಿ ಇಂಗ್ಲೆಂಡ್‌ಗೆ ಹಾರಲಿದೆ. ಅಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಸೌಥಾಂಪ್ಟನ್‌ನಲ್ಲಿ ನಡೆದರೆ ಹಿಲ್ಟನ್ ಹೋಟೆಲ್‌ನಲ್ಲಿ ಟೀಮ್ ಇಂಡಿಯಾ ಉಳಿದುಕೊಳ್ಳುವ ಸಂಭವವಿದೆ.

ಜೂನ್‌ನಲ್ಲಿಯೇ ಏಷ್ಯಾಕಪ್
ಮತ್ತೊಂದೆಡೆ ಏಷ್ಯಾಕಪ್ ಕೂಡ ಜೂನ್‌ನಲ್ಲಿಯೇ ಆಯೋಜನೆಯಾಗಲಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಭಾಗಿಯಾಗುವ ಕಾರಣ ಆ ದಿನಾಂಕವನ್ನು ತಪ್ಪಿಸಿ ಆಯೋಜನೆ ಮಾಡುವ ಸಾಧ್ಯತೆಯಿದೆ. ಆದರೆ ಭಾರತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಅಲ್ಲಿಯೇ ಉಳಿಯುವ ನಿರ್ಧಾರವನ್ನು ತೆಗೆದುಕೊಂಡಲ್ಲಿ ಭಾರತ ಎರಡನೇ ಹಂತದ ತಂಡವನ್ನು ಏಷ್ಯಾಕಪ್‌ಗೆ ಕಳುಹಿಸಬೇಕಾದ ಅನಿವಾರ್ಯತೆಗೆ ಒಳಗಾಗಬಹುದು.

ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
ಸದ್ಯ ಇಂಗ್ಲೆಂಡ್ ತಂಡ ಭಾರತದಲ್ಲಿ ಸರಣಿಯಲ್ಲಿ ಪಾಲ್ಗೊಂಡಿದ್ದು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಕಳೆದುಕೊಂಡಿದೆ. ಇನ್ನು ಐದು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications