Team India: ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ ಟಿಮ್ ಇಂಡಿಯಾ
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ತನ್ನ ದೇಶೀಯ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವೇಳೆ ಅಂತಾರಾಷ್ಟ್ರೀಯ ಸರಣಿಗಳ ವೇಳಾಪಟ್ಟಿಯನ್ನು ಸಹ ಘೋಷಿಸಿದೆ. ಭಾರತ ಈ ವರ್ಷದಲ್ಲಿ ಆಸೀಸ್ ಪ್ರವಾಸ ಬೆಳೆಸಲಿದ್ದು, ಏಕದಿನ ಹಾಗೂ ಟಿ20 ಕ್ರಿಕೆಟ್ ಸರಣಿಯ ವೇಳಾ ಪಟ್ಟಿ ಘೋಷಣೆ ಆಗಿದೆ. ಇನ್ನು ಪ್ರತಿಷ್ಠಿತ ಆಶಸ್ ಸರಣಿಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಸರಣಿ ನವೆಂಬರ್ 21 ರಿಂದ ಆರಂಭವಾಗಲಿದೆ.
ಭಾನುವಾರ (ಮಾರ್ಚ್ 30)ರಂದು ಕ್ರಿಕೆಟ್ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಘೋಷಿಸಿದೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸವನ್ನು ಪೂರ್ಣಗೊಳಿಸಿದ ಕೆಲವು ವಾರಗಳ ನಂತರ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ 20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಇನ್ನು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಮೆಕೆಯಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಇನ್ನು ಡಾರ್ವಿನ್ 17 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಿದೆ.

ಭಾರತ ತನ್ನ ಆಸ್ಟ್ರೇಲಿಯಾ ಪ್ರವಾಸವನ್ನು ಅಕ್ಟೋಬರ್ ನಲ್ಲಿ ಆರಂಭಿಸಲಿದೆ. ಈ ವೇಳೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಇನ್ನು ಟಿ20 ಸರಣಿ ಅಕ್ಟೋಬರ್ 29 ರಂದು ಆರಂಭವಾಗಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ಅಕ್ಟೋಬರ್ 19 ರಂದು ನಡೆದರೆ, ಎರಡನೇ ಏಕದಿನ ಪಂದ್ಯ ಆಡಿಲೇಡ್‌ನಲ್ಲಿ ಅಕ್ಟೋಬರ್ 23 ರಂದು, ಮೂರನೇ ಏಕದಿನ ಪಂದ್ಯ ಸಿಡ್ನಿಯಲ್ಲಿ ಅಕ್ಟೋಬರ್ 25 ರಂದು ನಡೆಯಲಿದೆ.
ಭಾರತ, ಆಸ್ಟ್ರೇಲಿಯಾ 3 ಪಂದ್ಯಗಳ ಏಕದಿನ ಸರಣಿ
ಅ.19: ಮೊದಲ ಏಕದಿನ ಪಂದ್ಯ, ಪರ್ತ್
ಅ.23: ಎರಡನೇ ಏಕದಿನ ಪಂದ್ಯ, ಅಡಿಲೇಡ್
ಅ.25: ಮೂರನೇ ಏಕದಿನ ಪಂದ್ಯ, ಸಿಡ್ನಿ
ಭಾರತ, ಆಸ್ಟ್ರೇಲಿಯಾ 5 ಪಂದ್ಯಗಳ ಟಿ20 ಸರಣಿ
ಅ.29: ಮೊದಲ ಟಿ20, ಕ್ಯಾನ್‌ಬೆರಾ
ಅ.31: ಎರಡನೇ ಟಿ20, ಎಂಸಿಜಿ
ನ.2: 3ನೇ ಟಿ20, ಹೋಬಾರ್ಟ್
ನ.6: 4ನೇ ಟಿ20, ಗೋಲ್ಡ್ ಕೋಸ್ಟ್
ನ.8: 5ನೇ ಟಿ20, ಗಬ್ಬಾ

ನವೆಂಬರ್ 21 ರಿಂದ ಆಷಸ್
ಬಹು ನಿರೀಕ್ಷಿತ ನವೆಂಬರ್‌ನಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಪರ್ತ್ ಅಂಗಳ ಆತಿಥ್ಯ ವಹಿಸಲಿದೆ. ಈ ಪಂದ್ಯ ನವೆಂಬರ್ 21 ರಿಂದ ಆರಂಭವಾಗಲಿದ್ದು 25ರ ವರೆಗೆ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಗಬ್ಬಾ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಡಿಸೆಂಬರ್ 4ರಿಂದ ಆರಂಭವಾಗಲಿದೆ. ಎರಡನೇ ಟೆಸ್ಟ್ 8ನೇ ತಾರಿಕಿನವರೆಗೆ ನಡೆಯಲಿದೆ. ಈ ಪಂದ್ಯ ಡೇ ಆಂಡ್ ನೈಟ್ ಆಗಲಿದೆ. ಮೂರನೇ ಟೆಸ್ಟ್ ಪಂದ್ಯ ಆಡಿಲೇಡ್‌ನಲ್ಲಿ ಡಿ. 17 ರಿಂದ ಆರಂಭವಾಗಲಿದ್ದು, ನಾಲ್ಕನೇ ಟೆಸ್ಟ್ ಮೆಲ್ಬೋರ್ನ್‌ನಲ್ಲಿ ಡಿ.26 ರಿಂದ, ಸಿಡ್ನಿ ಅಂಗಳದಲ್ಲಿ ಐದನೇ ಟೆಸ್ಟ್ ಜ. 4ರಿಂದ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications