ಟಿ20 ಸರಣಿಗಾಗಿ ಆಗಸ್ಟ್‌ನಲ್ಲಿ ಆಫ್ರಿಕಾಗೆ ಟೀಮ್ ಇಂಡಿಯಾ ಪ್ರವಾಸ ? : ವರದಿ

ಕೊರೊನಾ ವೈರಸ್‌ನ ಕಾರಣದಿಂದಾಗಿ ಸಂಪೂರ್ಣ ಸ್ತಬ್ಧವಾಗಿದ್ದ ಕ್ರಿಕೆಟ್ ಮತ್ತೆ ಆರಂಭವಾಗುವ ಸಾಧ್ಯತೆಗಳು ಕಾಣಸುತ್ತಿದೆ. ಪಾಕಿಸ್ತಾನ ಇಂಗ್ಲೆಂಡ್‌ಗೆ ತೆರಳುವ ಬಗ್ಗೆ ನಿರ್ಧಾರವನ್ನು ಕೈಗೊಂಡಿದ್ದು ಅದಕ್ಕಾಗಿ ತಾತ್ವಿಕ ಒಪ್ಪಿಗೆಯನ್ನು ನೀಡಿದೆ. ಈ ಮಧ್ಯೆ ಟೀಮ್ ಇಂಡಿಯಾ ಕೂಡ ಆಗಸ್ಟ್ ತಿಂಗಳಲ್ಲಿ ಕ್ರಿಕೆಟ್ ಸರಣಿಗಾಗಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.
ಈ ಬಗ್ಗೆ ಬಿಸಿಸಿಐ ಯಾವುದೇ ಸುಳಿವು ನೀಡದಿದ್ದರೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಆನ್‌ಲೈನ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾಗಿ ಆಫ್ರಿಕಾ ಮಾಧ್ಯಮಗಳು ವರದಿ ಮಾಡಿದೆ. ಟಿ20 ಸರಣಿ ಆಯೋಜನೆ ಬಗ್ಗೆ ಬಿಸಿಸಿಐ ಜೊತೆಗೆ ಮಾತುಕತೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ಫೆಬ್ರವರಿಯಲ್ಲಿ ಸರಣಿ ಬಗ್ಗೆ ಚರ್ಚೆ
ಈ ಪ್ರವಾಸ ಈಗಾಗಲೇ ನಿರ್ಧರಿಸಿರುವ ಪ್ರವಾಸದ ಪಟ್ಟಿಯ ಭಾಗವಾಗಿಲ್ಲ. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ನಿರ್ದೇಶಕರಾಗಿರುವ ಗ್ರೇಮ್ ಸ್ಮಿತ್ ತಮ್ಮ ಅಧಿಕೃತ ಪ್ರವಾಸದ ಸಂದರ್ಭದಲ್ಲಿ ಈ ಸರಣಿಯ ಬಗ್ಗೆ ಚರ್ಚೆಯನ್ನು ನಡೆಸಿದ್ದರು. ಇದರ ಬಗ್ಗೆ ಎರಡೂ ಮಂಡಳಿಗಳು ಮಾತುಕತೆಯನ್ನು ನಡೆಸಿದ್ದು ಅಂತಿಮ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಒಪ್ಪಿಗೆ ನೀಡಿದೆ ಎರಡೂ ಮಂಡಳಿಗಳು?
ಬುಧವಾರ ದೂರವಾಣಿ ಕಾನ್ಫರೆನ್ಸ್ ಮೂಲಕ ಈ ಸರಣಿಯ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಮೂರು ಪಂದ್ಯಗಳ ಚುಟುಕು ಸರಣಿಗಾಗಿ ಎರಡೂ ಮಂಡಳಿಗಳು ಒಪ್ಪಿಗೆಯನ್ನು ನೀಡಿದೆ. ಅದರೆ ಸರ್ಕಾರದ ನಿರ್ಧಾರನ್ನು ಬಿಸಿಸಿಐ ಎದುರು ನೋಡುತ್ತಿದೆ ಎಂದು ಮಾಹಿತಿಗಳು ಲಭ್ಯವಾಗುತ್ತಿದೆ.

ಕೊರೊನಾ ವೈರಸ್ ಬಳಿಕ ಮೊದಲ ಸರಣಿ?
ಈ ವರದಿಗಳು ನಿಜವೇ ಆಗಿದ್ದರೆ ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್ ನಿಂತ ಬಳಿಕ ಭಾರತದ ಮೊದಲ ಪ್ರವಾಸವಾಗಿರಲಿದೆ. ಆದರೆ ಈ ಬಗ್ಗೆ ಬಿಸಿಸಿಐ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಸರ್ಕಾರ ಕ್ರೀಡೆಗಳ ಆಯೋಜಿಸುವ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿ ಹಸಿರು ನಿಶಾನೆ ತೋರಿದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮಾರ್ಚ್‌ನಲ್ಲಿ ಸರಣಿಗಾಗಿ ಬಂದು ವಾಪಾಸಾಗಿದ್ದ ಆಫ್ರಿಕಾ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಮಾರ್ಚ್‌ನಲ್ಲಿ ಭಾರತಕ್ಕೆ ಏಕದಿನ ಸರಣಿಯನ್ನಾಡಲು ಆಗಮಿಸಿತ್ತು. ಧರ್ಮಶಾಲಾದಲ್ಲಿ ಆಯೋಜನೆಯಾಗಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೆ ಲಕ್ನೋ ಮತ್ತು ಕೊಲ್ಕತ್ತಾದಲ್ಲಿ ನಡೆಯಬೇಕಾಗಿದ್ದ ಎರಡು ಪಂದ್ಯಗಳು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣ ಪ್ರವಾಸವನ್ನು ಮೊಟಕುಗೊಳಿಸುವ ತೀರ್ಮಾನಕ್ಕೆ ಬರಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications