T20 World Cup 2024: ಐಪಿಎಲ್‌ನಲ್ಲಿ ಭಾರತದ ಟಾಪ್ 4 ಬ್ಯಾಟ್ಸ್‌ಮನ್‌ಗಳಿಂದ ಶತಕ; ಎದುರಾಳಿಗಳಿಗೆ ವಾರ್ನಿಂಗ್!
ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೀಮ್ ಇಂಡಿಯಾ ಆಟಗಾರರು ದಿನದಿಂದ ದಿನಕ್ಕೆ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಜೂನ್ 2 ರಿಂದ ಆರಂಭವಾಗುತ್ತಿರುವ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಈ ಆಟಗಾರರ ಹೆಸರನ್ನು ಪ್ರಕಟಿಸಿರುವುದರಿಂದ ಅಭಿಮಾನಿಗಳಿಗೆ ಖುಷಿ ತಂದಿದೆ.
ಈ ಮೆಗಾ ಟೂರ್ನಿಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ದೇಶಗಳು ಆತಿಥೇಯ ವಹಿಸಿದ್ದು, ಟೀಮ್ ಇಂಡಿಯಾ ಆಟಗಾರು ಈ ವರ್ಷದ ಮೊದಲ ಐಸಿಸಿ ಪ್ರಶಸ್ತಿ ಎತ್ತಿ ಹಿಡಿಯಲು ಸಜ್ಜಾಗಿದ್ದಾರೆ. 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಟ್ರೋಪಿಯನ್ನು ಭಾರತ ಗೆದ್ದಿರುವುದು ಬಿಟ್ಟರೆ, ಮತ್ತೆ ಯಾವುದೇ ಐಸಿಸಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ರೋಹಿತ್ ಶರ್ಮಾ ಬಳಗ ಸತಾಯಗತಾಯ ಟಿ20 ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದೆ.
17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ರೋಹಿತ್ ಶರ್ಮಾ ಹಾಗು ಸೂರ್ಯಕುಮಾರ್ ಯಾದವ್ ಸೇರಿದಂತೆ ರಾಜಸ್ತಾನ ರಾಯಲ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ ಟೀಮ್ ಇಂಡಿಯಾದ 4 ಬ್ಯಾಟರ್ಸ್ ಆಗಿದ್ದಾರೆ.

ವಿರಾಟ್ ಕೊಹ್ಲಿ
ಈ ಋತುವಿನ ಐಪಿಎಲ್‌ನಲ್ಲಿ ಮೊದಲು ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಏಪ್ರಿಲ್ 6ರ ಶನಿವಾರದಂದು, ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು.
ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ತಮ್ಮ 8ನೇ ಐಪಿಎಲ್ ಶತಕ ಗಳಿಸಿದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 9ನೇ ಶತಕವನ್ನು ಪೂರ್ಣಗೊಖಳಿಸಿದರು. ಅಂತಿಮವಾಗಿ ಕೊಹ್ಲಿ 72 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 12 ಬೌಂಡರಿಗಳಿಂದ ಅಜೇಯ 113* ರನ್ ಗಳಿಸಿದರು.

ರೋಹಿತ್ ಶರ್ಮಾ
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನೆಡೆಸುತ್ತಿರುವ ರೋಹಿತ್ ಶರ್ಮಾ ಕೂಡ ಐಪಿಎಲ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಏಪ್ರಿಲ್ 14 ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಶತಕ ಬಾರಿಸಿದ್ದರು. 63 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಅಜೇಯ 105* ರನ್ ಗಳಿಸುವ ಮೂಲಕ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ್ದರು. ಆದರೆ ಚೆನ್ನೈ ವಿರುದ್ಧ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಸೂರ್ಯಕುಮಾರ್ ಯಾದವ್
ಮತ್ತೊರ್ವ ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಮೇ 6 ಸೋಮವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶತಕ ಹೊಡೆದು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಗೆ ನಾನು ರೆಡಿ ಎಂದು ಬಿಗ್ ಮೆಸೇಜ್ ಕೊಟ್ಟಿದ್ದಾರೆ. ಸೂರ್ಯಕುಮಾರ್ ಬ್ಯಾಟಿಂಗ್ ನೊಡಿದ ಎದುರಾಳಿ ತಂಡಗಳಿಗೆ ಭಯ ಉಂಟಾಗಿರಬಹುದು. ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಸೂರ್ಯಕುಮಾರ್ ಯಾದವ್ ಅವರು ಕೇವಲ 51 ಎಸೆತದಲ್ಲಿ 12 ಫೋರ್ ಮತ್ತು 6 ಸಿಕ್ಸ್ ಮೂಲಕ 102 ರನ್ ಸಿಡಿಸಿ ಅಬ್ಬರಿಸಿದರು.

ಯಶಸ್ವಿ ಜೈಸ್ವಾಲ್
ಎಲ್ಲಾ ಮಾದರಿ ಕ್ರಿಕೆಟ್‌ನಲ್ಲೂ ತನ್ನ ಅದ್ಭುತ ಪ್ರದರ್ಶನದಿಂದಾಗಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾದ ಭರವಸೆಯ ಆಟಗಾರನಾಗಿದ್ದಾರೆ. ಎದುರಾಳಿ ಬೌಲರ್ ಯಾರೆ ಆಗಿದ್ದರೂ ಮುನ್ನುಗ್ಗಿ ರನ್ ಗಳಿಸುವ ಯಶಸ್ವಿ ಜೈಸ್ವಾಲ್ ಈ ಬಾರಿ ಚೊಚ್ಚಲ ಟಿ20 ವಿಶ್ವಕಪ್ ಆಡುತ್ತಿದ್ದಾಋಏ. ಆದರೆ ಇದಕ್ಕೂ ಮೊದಲು ಯಶಸ್ವಿ ಜೈಸ್ವಾಲ್ ನಾನು ಫಾರ್ಮಾನಲ್ಲಿದ್ದೇನೆ ಎಂದು ಶತಕ ಹೊಡೆಯುವ ಮೂಲಕ ಸಾಬೀತುಪಡಿಸಿದ್ದಾರೆ.
ಐಪಿಎಲ್‌ನ ಮಹತ್ವದ ಪಂದ್ಯದಲ್ಲಿ ಏಪ್ರಿಲ್ 22ರ ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ತಾನ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. 60 ಎಸೆತಗಳಲ್ಲಿ 9 ಬೌಂಡರಿ ಮತ್ತು 7 ಸಿಕ್ಸರ್‌ಗಳ ಮೂಲಕ 104 ರನ್ ಗಳಿಸಿದರು. ಈ ಮೂಲಕ ಯಶಸ್ವಿ ಐಪಿಎಲ್‌ನಲ್ಲಿ ಸತತ ಎರಡು ಋತುಗಳಲ್ಲಿ ನಿರ್ದಿಷ್ಟ ತಂಡದ ವಿರುದ್ಧ ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಯಶಸ್ವಿ ಶತಕ ಬಾರಿಸಿದ್ದರು. ಈ ಬಾರಿ 2024ರಲ್ಲಿಯೂ ಶತಕ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications