ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಅನಾವರಣ
ಸದ್ಯ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಐದು ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾದ ನೂತನ ಏಕದಿನ ಜೆರ್ಸಿಯನ್ನು ಶುಕ್ರವಾರ ಮುಂಬೈನ ಬಿಸಿಸಿಐನ ಪ್ರಧಾನ ಕಚೇರಿಯಲ್ಲಿ ಅನಾವರಣ ಬಿಡುಗೊಳಿಸಿತು.
ಟೀಮ್ ಇಂಡಿಯಾದ ನೂತನ ಜೆರ್ಸಿಯನ್ನು ಡಿಸೆಂಬರ್ 1 ರಿಂದ ಐಸಿಸಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜಯ್ ಶಾ ಅವರು ಬಿಡುಗಡೆಗೊಳಿಸಿದರು. ಹೊಸ ಏಕದಿನ ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸಹ ಹಾಜರಿದ್ದರು.

ಟೀಂ ಇಂಡಿಯಾದ ಹೊಸ ಏಕದಿನ ಜೆರ್ಸಿ ಹಲವು ವಿಶೇಷತೆಗಳಿಂದ ಕೂಡಿದೆ. ಇದರಲ್ಲಿ ಈ ಬಾರಿ ತ್ರಿವರ್ಣ ಧ್ವಜವು ಆಟಗಾರರ ಹೆಗಲ ಮೇಲೆ ಕಾಣಿಸಿಕೊಳ್ಳಲಿದೆ. ಜೆರ್ಸಿ ಬಿಡುಗಡೆಯ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.
ಹೊಸ ಏಕದಿನ ಜೆರ್ಸಿಯ ಅನಾವರಣ ಗೊಳಿಸಿ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, ಹೊಸ ಜೆರ್ಸಿ ಅನಾವರಣವಾಗಿದ್ದು ನನಗೆ ಅತ್ಯಂತ ಗೌರವದ ಸಂಗತಿ. ಎರಡೂ ಭುಜಗಳ ಮೇಲೆ ತ್ರಿವರ್ಣ ಧ್ವಜ ಇರಲಿದ್ದು, ಅದ್ಭುತವಾಗಿದೆ. ಈ ನೂತನ ಜೆರ್ಸಿಯನ್ನು ನೋಡಿ ನನಗೆ ತುಂಬ ಖುಷಿ ಆಯಿತು ಎಂದು ತಿಳಿಸಿದ್ದಾರೆ.
ಭಾರತ ವನಿತೆಯರು ಹಾಗೂ ಆಸ್ಟ್ರೇಲಿಯಾ ವನಿತೆಯರ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ಆಡಲು ಕಾಂಗರೂ ನಾಡಿಗೆ ಹಾರಲಿದೆ. ಡಿಸೆಂಬರ್ 5 ರಿಂದ ಪಂದ್ಯ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ. ಇದಾದ ಬಳಿಕ ಟೀಮ್ ಇಂಡಿಯಾದ ಮಹಿಳಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications