For Quick Alerts
ALLOW NOTIFICATIONS  
For Daily Alerts
 

Mayank Yadav: ಟೀಮ್ ಇಂಡಿಯಾಕ್ಕೆ ಸಿಕ್ಕ ಎದುರಾಳಿಗೆ ನಡುಕ ಹುಟ್ಟಿಸುವ ಬೌಲರ್‌; ಪದಾರ್ಪಣೆ ಪಂದ್ಯದಲ್ಲಿ ವೇಗದ ಎಸೆತ

ಬೇರೆ ದೇಶದ ಸ್ಪೀಡ್‌ ಸ್ಟಾರ್‌ಗಳನ್ನು ನೋಡಿ ನಮ್ಮ ದೇಶದಲ್ಲೂ ಇಂತಹ ಒಬ್ಬ ವೇಗಿ ಇದ್ದಿದ್ದರೇ ಚೆನ್ನಾಗಿರುತ್ತಿತ್ತು ಎಂಬ ಭಾವನೆ ನಮ್ಮಲ್ಲಿ ಮೂಡುವದು ಸಹಜ. ಈ ನಿಟ್ಟನಲ್ಲಿ ಜಮ್ಮು ಕಾಶ್ಮೀರ ಹುಡುಗ ಉಮ್ರಾನ್‌ ಮಲಿಕ್‌ ಕೊಂಚ ಯಶಸ್ವಿ ಆದರು. ಆದರೆ ಬಳಿಕ ಟೀಮ್ ಇಂಡಿಯಾದಿಂದ ಕಾಣೆ ಆದರು. ಆದರೆ, ಐಪಿಎಲ್‌ 2024ರಲ್ಲಿ ಎದುರಾಳಿಗೆ ನಡುಕ ಹುಟ್ಟಿಸಬಲ್ಲ ಬೌಲರ್‌ ಒಬ್ಬ ಸಿಕ್ಕಿದ್ದಾನೆ. ಈ ಬೌಲರ್‌ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದಾನೆ.

ಆತನ ಬೌಲಿಂಗ್‌ ಕಂಡು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶಿಖರ್ ಧವನ್‌ ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವರ ವೇಗದ ದಾಳಿಯನ್ನು ಎದುರಿಸುವಲ್ಲಿ ಹಲವು ಪಂಜಾಬ್‌ ಕಿಂಗ್ಸ್ ತಂಡದ ಭರವಸೆಯ ಬ್ಯಾಟರ್‌ ತಿಣುಕಾಡಿದ್ದಾರೆ. ಎಲ್‌ಎಸ್‌ಜಿ ಕೈಯಿಂದ ಜಾರುತ್ತಿದ್ದ ಪಂದ್ಯವನ್ನು ಗೆಲ್ಲುವಂತೆ ಮಾಡಿದ ಯುವ ಪೇಸರ್‌ ಪಾತ್ರ ಬಹು ಮುಖ್ಯ. ಆತನೇ ಲಖ್ನೋ ಸೂಪರ್ ಜೈಂಟ್ಸ್ ತಂಡದ ಯಂಗ್‌ ಪೇಸರ್‌ ಮಯಾಂಕ್‌ ಯಾದವ್‌.

Team India Unveils Young Bowling Sensation Debutant Strikes Fear with Lightning-Fast Deliveries

ಯಾರು ಈ ಪೇಸರ್‌?

ಇನ್ನಿಂಗ್ಸ್‌ನ 10ನೇ ಓವರ್‌ ಬೌಲಿಂಗ್ ಮಾಡಿದ ಯುವ ವೇಗದ ಬೌಲರ್‌ ಮಯಾಂಕ್‌ ಯಾದವ್ ಕಂಡು ಎದುರಾಳಿಗಳು ಸಹ ಸ್ಟನ್‌ ಆದರು. ಆತನ ದೇಹ, ಆತನ ಬೌಲಿಂಗ್‌ ಆಕ್ಷನ್‌, ಆತನ ವೇಗಕ್ಕೆ ಎದುರಾಳಿ ಬ್ಯಾಟರ್‌ಗಳು ಕ್ಲೀನ್‌ ಬೋಲ್ಡ್‌ ಆದರು. ಇವರ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ಪಂಜಾಬ್‌ ಬೌಲರ್‌ಗಳು ಸುಸ್ತಾದರು.

ಲಕ್ನೋ ಸೂಪರ್ ಜೈಂಟ್ಸ್ ವೇಗದ ಬೌಲರ್ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಸಂಚಲನ ಮೂಡಿಸಿದ್ದಾರೆ. ಮಯಾಂಕ್ 4 ಓವರ್ ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇದೇ ಪಂದ್ಯದಲ್ಲಿ ಮಯಾಂಕ್‌ 155.6 ಕಿಲೋಮೀಟರ್ (KMPH) ವೇಗದ ಎಸೆತವನ್ನು ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

ದೆಹಲಿ ಮೂಲದ ಮಯಾಂಕ್ ಅವರು ತಮ್ಮ 24 ಎಸೆತಗಳಲ್ಲಿ 8 ಎಸೆತಗಳನ್ನು 150 KMPH ಗಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡಿದ್ದಾರೆ. ಇವರು ಎಸೆದ ಎಲ್ಲ ಎಸೆತಗಳೂ ಸಹ 140 KMPH ಮೇಲಿದ್ದವು. ಮಯಾಂಕ್‌ ಯಾದವ್ 12ನೇ ಓವರ್‌ನ ಮೊದಲ ಎಸೆತದಲ್ಲೇ ಎಲ್ಲರೂ ತಮ್ಮತ್ತ ನೋಡುವಂತೆ ಮಾಡಿದರು. ಈ ಎಸೆತವನ್ನು 155.8 ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದರು.

Team India Unveils Young Bowling Sensation Debutant Strikes Fear with Lightning-Fast Deliveries

ರಾಜಧಾನಿ ಎಕ್ಸ್‌ಪ್ರೆಸ್‌

ಮಯಾಂಕ್‌ ಯಾದವ್ ಅವರ ಬೌಲಿಂಗ್ ಕಂಡು ವೀಕ್ಷಕ ವಿವರಣೆಕಾರರು ಇವರನ್ನು ರಾಜಧಾನಿ ಎಕ್ಸ್‌ಪ್ರೆಸ್‌ ಎಂದು ಕರೆದರು. ಸಾಮಾನ್ಯವಾಗಿ ವೇಗಿಯ ಯಾವ ಉರನ್ನು ಪ್ರತಿನಿಧಿಸುತ್ತಾನೋ ಅದನ್ನು ಅವನ ಪಕ್ಕದಲ್ಲಿ ಸೇರಿಸಲಾಗುತ್ತದೆ. ಉದಾಹರಣೆಗೆ ಶೋಯೆಬ್ ಅಖ್ತರ್ ಅವರನ್ನು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ ಮತ್ತು ಉಮ್ರಾನ್ ಮಲಿಕ್ ಅವರನ್ನು ಜಮ್ಮು ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ. ದೆಹಲಿಯು ದೇಶದ ರಾಜಧಾನಿಯಾಗಿದೆ ಮತ್ತು ರಾಜಧಾನಿ ಎಕ್ಸ್‌ಪ್ರೆಸ್ ಹೆಸರಿನ ರೈಲು ಇಡೀ ದೇಶದಲ್ಲಿ ತನ್ನ ವೇಗಕ್ಕೆ ಹೆಸರುವಾಸಿ, ಆದ್ದರಿಂದ ಮಯಾಂಕ್ ಅವರನ್ನು ರಾಜಧಾನಿ ಎಕ್ಸ್‌ಪ್ರೆಸ್ ಎಂದು ಕರೆಯಲಾಯಿತು.

ಯಾವ ರಾಜ್ಯದ ಪರ ಆಡುತ್ತಾರೆ?

ಮಯಾಂಕ್‌ ಜೂನ್‌ 17, 2002ರಂದು ದೆಹಲ್ಲಿಯಲ್ಲಿ ಜನಸಿದ್ದು, ಅವರಿಗೆ ಈಗ 22 ವಯಸ್ಸು. ಮಯಾಂಕ್‌ ಯಾದವ್‌ ದೆಹಲಿ ಪರ ರಣಜಿ ಟೂರ್ನಿಗಳನ್ನು ಆಡುತ್ತಾರೆ. ಅವರ ಕೋಚ್‌ ಹೇಳುವ ಪ್ರಕಾರ ಅವರಿಗೆ ರೈಲ್ವೆ ಹಾಗೂ ದೆಹಲಿ ತಂಡದಿಂದ ಏಕಕಾಲಕ್ಕೆ ಕರೆ ಬಂದಿತ್ತು. ಆದರೆ ಅವರು ದೆಹಲಿ ತಂಡವನ್ನು ಪ್ರತಿನಿಧಿಸಲು ಇಶ್ಚೆ ಪಟ್ಟರು ಎಂದು ತಿಳಿಸಿದ್ದಾರೆ. ಇನ್ನು ಇವರು ರಿಷಭ್ ಪಂತ್‌, ಶಿಖರ್ ಧವನ್ ಆಡಿ ಬೆಳದ ಕ್ಯಾಂಪ್‌ನಿಂದಲೇ ಬಂದವರು.

ಹೇಗೀದೆ ದೇಶೀಯ ಟೂರ್ನಿಯಲ್ಲಿ ಪ್ರದರ್ಶನ

ಮಯಾಂಕ್ 17 ಲಿಸ್ಟ್-ಎ ಮತ್ತು 10 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಮಯಾಂಕ್ ಅವರು ಲಿಸ್ಟ್-ಎನಲ್ಲಿ 34 ವಿಕೆಟ್‌ ಪಡೆದಿದ್ದು, T20ಯಲ್ಲಿ, ಮಯಾಂಕ್ 6.44 ರ ಎಕನಾಮಿಯೊಂದಿಗೆ 12 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Sunday, March 31, 2024, 8:27 [IST]
Other articles published on Mar 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+