Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Melbourne Test: ಅಭ್ಯಾಸ ಪಿಚ್ ಬಗ್ಗೆ ಟೀಮ್ ಇಂಡಿಯಾ ಆತೃಪ್ತಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರು ಪಂದ್ಯಗಳು ಮುಕ್ತಾಯವಾಗಿವೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ 295 ರನ್‌ಗಳಿಂದ ಸೋಲಿಸಿತ್ತು. ನಂತರ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 10 ವಿಕೆಟ್‌ಗಳ ಗೆಲುವು ದಾಖಲಿಸಿತು. ಇನ್ನು ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಉಭಯ ತಂಡಗಳು ಮೇಲ್ಬೋರ್ನ್ ಅಂಗಳದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ರೆಡಿಯಾಗಿವೆ.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಡಿಸೆಂಬರ್ 26 ರಿಂದ ಮೇಲ್ಬೋರ್ನ್ ಅಂಗಳದಲ್ಲಿ ಮುಖಾಮುಖಿಯಾಗಲಿವೆ. ಮೆಲ್ಬೋರ್ನ್‌ ಟೆಸ್ಟ್ ಪಂದ್ಯದ ಗೆಲುವು ಉಭಯ ತಂಡಗಳಿಗೆ ಮಹತ್ವದಾಗಿದೆ. ಇದಕ್ಕಾಗಿ ಉಭಯ ತಂಡಗಳು ಕಠಿಣ ತಾಲೀಮಿನಲ್ಲಿ ತೊಡಗಿಸಿಕೊಂಡಿವೆ. ಇದರ ನಡುವೆ ಅಭ್ಯಾಸಕ್ಕಾಗಿ ನೀಡಿದ ಪಿಚ್​ ಬಗ್ಗೆ ಟೀಮ್ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ.

Team India upset about practice pitch at Melbourne Stadium

ಟೀಮ್ ಇಂಡಿಯಾ ಅಭ್ಯಾಸಕ್ಕೆ ಹಳೆಯ ಪಿಚ್ ಅನ್ನು ನೀಡಲಾಗಿದೆ. ಹಲವು ಕಡೆ ಹಾಳಾಗಿರುವ ಪಿಚ್‌ನಲ್ಲಿ ಅಭ್ಯಾಸ ನಡೆಸುವುದು ಹೇಗೆ ಎಂದು ಟೀಮ್ ಇಂಡಿಯಾದ ಕೆಲ ಆಟಗಾರರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ. ಇದಲ್ಲದೆ, ಅಭ್ಯಾಸಕ್ಕಾಗಿ ನೀಡಿರುವ ಪಿಚ್‌​ನಲ್ಲಿ ಚೆಂಡು ಬೌನ್ಸ್ ಆಗುತ್ತಿಲ್ಲ. ಹೀಗಾಗಿ ಇದು ಅಭ್ಯಾಸಕ್ಕೆ ಯೋಗ್ಯವಲ್ಲದ ಪಿಚ್ ಎಂದು ಟೀಮ್ ಇಂಡಿಯಾ ಆತೃಪ್ತಗೊಂಡಿದೆ.

ಮತ್ತೊಂದೆಡೆ ಆಸ್ಟ್ರೇಲಿಯಾ ತಂಡಕ್ಕೆ ಅತ್ಯುತ್ತಮ ಗುಣಮುಟ್ಟದ ಅಭ್ಯಾಸದ ಪಿಚ್ ಅನ್ನು ನೀಡಲಾಗಿದೆ. ಮೇಲ್ಬೋರ್ನ್ ಪಿಚ್‌ನ ಕ್ಯುರೇಟರ್‌​ಗಳು ಆಸ್ಟ್ರೇಲಿಯಾ ಅಭ್ಯಾಸ ಮಾಡಬೇಕಿರುವ ಪಿಚ್‌​ನಲ್ಲಿ ರೋಲರ್ ಓಡಿಸುತ್ತಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹೀಗಾಗಿ ಮೇಲ್ಬೋರ್ನ್ ಸ್ಟೇಡಿಯಂನ ಆಡಳಿತ ಮಂಡಳಿ ವಿರೋಧ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಕ್ಯುರೇಟರ್‌​ ಹೇಳಿದ್ದೇನು?

ಈ ಕುರಿತು ಮೇಲ್ಬೋರ್ನ್ ಪಿಚ್‌ನ ಕ್ಯುರೇಟರ್‌​ಗಳನ್ನು ಪ್ರಶ್ನಿಸಿದಾಗ, ನಮ್ಮಲ್ಲಿರುವ ಪಿಚ್‌ಗಳನ್ನು ಮಾತ್ರ ನಾವು ನೀಡಲು ಸಾಧ್ಯ. ಹೀಗಾಗಿ ಅಭ್ಯಾಸಕ್ಕೆ ಲಭ್ಯವಿರುವ ಪಿಚ್ ನೀಡಿದ್ದೇವೆ ಎಂದು ಕ್ಯುರೇಟರ್ ಸಮರ್ಥಿಸಿಕೊಂಡಿರುವುದು ವರದಿಯಾಗಿದೆ. ಇದೀಗ ಉತ್ತಮವಲ್ಲದ ಪಿಚ್ ನೀಡಿರುವುದನ್ನು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್‌ ಹೇಗೆ ಸಮರ್ಥಿಸಿಕೊಳ್ಳಲಿದೆ ಎಂಬುದು ಕೂತುಹಲ ಮೂಡಿಸಿದೆ.

ಎಂಸಿಜಿ ಪಿಚ್ ಹೇಗಿರಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಿಗೂ ಇದೆ. ಈ ಪಿಚ್‌ನಲ್ಲಿ ಬ್ಯಾಟರ್‌ಗಳು ಅಥವಾ ವೇಗದ ಬೌಲರ್‌ಗಳು ಮೇಲುಗೈ ಸಾಧಿಸಲಿದ್ದಾರೆ. ಇದರೊಂದಿಗೆ ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಎಷ್ಟು ಸಹಾಯ ಪಡೆಯಲಿದ್ದಾರೆ? ಎಂಬುದು ದೊಡ್ಡ ಪ್ರಶ್ನೆಯಾಗಲಿದೆ.

ಮೇಲ್ಬೋರ್ನ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಜೊತೆಗೆ ಗೆದ್ದ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ತಲುಪು ಹಾದಿ ಸುಲಭವಾಗಲಿದೆ. ಹೀಗಾಗಿ ಮೇಲ್ಬೋರ್ನ್ ಟೆಸ್ಟ್ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದಾಗಿದೆ.

Story first published: Monday, December 23, 2024, 23:41 [IST]
Other articles published on Dec 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+