For Quick Alerts
ALLOW NOTIFICATIONS  
For Daily Alerts
 

ಸತತ ಮೂರನೇ ಬಾರಿಗೆ ಭಾರತ, ಇಂಗ್ಲೆಂಡ್‌ ಸೆಮಿಫೈನಲ್ ಫೈಟ್: ಇಲ್ಲಿದೆ ವೇಳಾಪಟ್ಟಿ

ಕೋಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ಭಾರತ ತನ್ನ ಸೂಪರ್‌ 8 ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಮಹತ್ವದ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಂತು ಆಡಿದ ಭಾರತದ ಸಂಜು ಸ್ಯಾಮ್ಸನ್‌ ಮಿಂಚಿದ್ದಾರೆ. ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್‌ ವಿರುದ್ಧ ಮಾರ್ಚ್ 5 ರಂದು ಆಡಲಿದೆ. ಇಲ್ಲಿದೆ ಸೆಮಿಫೈನಲ್‌ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಟಿ20 ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ನಂತೆ ಕಾಣುತ್ತಿದ್ದ ಭಾರತ ಹಾಗೂ ವೆಸ್ಟ್‌ ಇಂಡೀಸ್ ನಡುವಣ ಪಂದ್ಯ ರೋಚಕತೆಯಿಂದ ಕೂಡಿತ್ತು. ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದವು. ಆದರೆ ಇನ್ನು ಒಂದು ತಂಡ ಪ್ರವೇಶಿಸುವುದು ಬಾಕಿ ಇತ್ತು. ಭಾನುವಾರದ ಪಂದ್ಯದಲ್ಲಿ ಗೆದ್ದ ತಂಡ ಉಪಾಂತ್ಯಕ್ಕೆ ಪ್ರವೇಶ ಪಡೆಯುತ್ತಿತ್ತು. ಈ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಅಬ್ಬರಿಸಿದೆ. ವಿಂಡೀಸ್ ನೀಡಿದ್ದ 196 ರನ್‌ಗಳ ಗುರಿಯನ್ನು ಇನ್ನೂ 4 ಎಸೆತ ಹಾಗೂ 5 ವಿಕೆಟ್‌ ಬಾಕಿ ಇರುವಂತೆ ಗೆದ್ದು ಬೀಗಿದೆ.

Team India

ಟೀಮ್ ಇಂಡಿಯಾ ವೆಸ್ಟ್‌ ಇಂಡೀಸ್‌ ವಿರುದ್ಧ ಭರ್ಜರಿ ಜಯ ಸಾಧಿಸುವಲ್ಲಿ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಅವರ ಕೊಡುಗೆ ಅಪಾರ. ಇವರು ಒತ್ತಡದ ಸನ್ನಿವೇಶದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಅಭಿಷೇಕ್ ಶರ್ಮಾ, ಇಶಾನ್‌ ಕಿಶನ್‌, ಸೂರ್ಯ ಮಾಡಲು ಸಾಧ್ಯವಾಗದ ಕೆಲಸವನ್ನು ಸಂಜು ಸ್ಯಾಮ್ಸನ್ ಮಾಡಿ ತೋರಿಸಿದರು. ಈ ಭರ್ಜರಿ ಇನಿಂಗ್ಸ್‌ ಮೂಲಕ ಸಂಜು ರನ್‌ ಚೇಸ್‌ ಮಾಡುವಾಗ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೊದಲು ಈ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿತ್ತು. ಸಂಜು ಸ್ಯಾಮ್ಸನ್‌ ಅವರ ಅಮೋಘ ಇನಿಂಗ್ಸ್‌ಗೆ ಸೂರ್ಯ ಪಂದ್ಯದ ಬಳಿಕ ಕ್ಯಾಪ್‌ ಬಿಚ್ಚಿ ಸಲಾಂ ಹೇಳಿದರು.

ಮೂರನೇ ಬಾರಿಗೆ ಸೆಮಿಫೈನಲ್‌ನಲ್ಲಿ ಹೋರಾಟ

ಭಾರತ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮುಂಬೈನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯ ಗುರುವಾರ (ಮಾ.4) ನಡೆಯಲಿದೆ. ಇನ್ನು ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್‌ ಅಂಗಳದಲ್ಲಿ ನಡೆಯಲಿದೆ.

ಕಾಕತಾಳೀಯ ಎಂಬಂತೆ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಸತತ 3ನೇ ಬಾರಿಗೆ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 2022ರಲ್ಲಿ ಎರಡೂ ತಂಡಗಳು ಸೆಮೀಸ್‌ ಹಂತದಲ್ಲಿ ಮೊದಲು ಕಾದಾಟವನ್ನು ನಡೆಸಿದ್ದವು. ಈ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್‌ ಜಯ ಸಾಧಿಸಿತ್ತು. 2024 ರಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ 68 ರನ್‌ ಜಯ ಸಾಧಿಸಿ ಅಬ್ಬರಿಸಿತ್ತು. ಈಗ ಎರಡೂ ತಂಡಗಳು ಮೂರನೇ ಬಾರಿಗೆ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

Story first published: Monday, March 2, 2026, 9:57 [IST]
Other articles published on Mar 2, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+