ಗೌಹಾತಿಯಲ್ಲಿ ಟೀಂ ಇಂಡಿಯಾಕ್ಕೆ ಸಾಂಪ್ರದಾಯಿಕ ಸ್ವಾಗತ
ಗೌಹಾತಿ, ಅಕ್ಟೋಬರ್ 09 : ಆಸ್ಟ್ರೇಲಿಯಾದ ವಿರುದ್ಧದ ಟಿ20ಐ ಸರಣಿಯ ಎರಡನೇ ಪಂದ್ಯವಾಡಲು ಗೌಹಾತಿಗೆ ಬಂದಿಳಿದ ಟೀಂ ಇಂಡಿಯಾಕ್ಕೆ ಸಾಂಪ್ರದಾಯಿಕ ಸ್ವಾಗತ ಸಿಕ್ಕಿದೆ. ವಿರಾಟ್ ಕೊಹ್ಲಿ ಪಡೆ, ತಮಗೆ ಸಿಕ್ಕ ಸ್ವಾಗತದಿಂದ ಸಕತ್ ಖುಷಿಯಾಗಿದ್ದಾರೆ.
ರಾಂಚಿಯಲ್ಲಿ ಮೊದಲ ಟಿ20 ಪಂದ್ಯವನ್ನು ಗೆದ್ದ ಕೊಹ್ಲಿ ಪಡೆ ಇಲ್ಲಿನ ಬರ್ಸಾಪರ ಸ್ಟೇಡಿಯಂನಲ್ಲಿ ಅಕ್ಟೋಬರ್ 10ರಂದು ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಮಳೆ, ಚಳಿ ಗಾಳಿ ಮೈಯೊಡ್ಡಿದ್ದ ಆಟಗಾರರು ಸೋಮವಾರಂದು ಇಲ್ಲಿನ ಹೊಚ್ಚ ಹೊಸ ಮೈದಾನದಲ್ಲಿ ಫುಟ್ಬಾಲ್ ಆಟವಾಡಿ ಆನಂದಿಸಿದರು.
ಭಾನುವಾರ ರಾತ್ರಿ ಗೌಹಾತಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ರಿಕೆಟರ್ಸ್ ಗೆ ಸಾಂಪ್ರದಾಯಿಕ 'ಜಾಪಿ' ಟೋಪಿಯನ್ನು ನೀಡಿ, ತಿಲಕ ಇಟ್ಟು ಸ್ವಾಗತಿಸಲಾಯಿತು ಶಿಖರ್ ಧವನ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವರು ಇದರಿಂದ ಖುಷಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಎರಡು ತಂಡಗಳನ್ನು ಸ್ವಾಗತಿಸಿದರು
ಸಾವಿರಾರು ಮಂದಿ ಅಭಿಮಾನಿಗಳು ಲೋಕಪ್ರಿಯ ಗೋಪಿನಾಥ್ ಬೊರ್ಡೊಲಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದು, ಎರಡು ತಂಡಗಳನ್ನು ಸ್ವಾಗತಿಸಿದರು.
ಕ್ರಿಕೆಟ್ ಪ್ರೇಮಿಗಳ ಉತ್ಸಾಹ
ಇಲ್ಲಿನ ಹೊಸ ಮೈದಾನದಲ್ಲಿ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಕಲ ಸಿದ್ಧತೆಯಾಗಿದ್ದು, ಅಸ್ಸಾಂನಲ್ಲಿ ಕ್ರಿಕೆಟ್ ಪ್ರೇಮಿಗಳ ಉತ್ಸಾಹ ಮುಗಿಲು ಮುಟ್ಟಿದೆ.
ಹೊಸ ಕ್ರೀಡಾಂಗಣ
2010ರ ನವೆಂಬರ್ 28ರಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಿದ್ದ ಗೌಹಾತಿಗೆ ಈಗ ಹೊಸ ಕ್ರೀಡಾಂಗಣ ಲಭಿಸಿದೆ. ಅಂದಿನ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ 40ರನ್ ಗಳಿಂದ ಸೋಲಿಸಿತ್ತು.
ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್
ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ (ಎಸಿಎ) ಈಗ ನೆಹರೂ ಮೈದಾನದಿಂದ 37 ಸಾವಿರ ಸೀಟು ಸಾಮರ್ಥ್ಯವುಳ್ಳ ಬರ್ಸಾಪರ ಸ್ಟೇಡಿಯಂಗೆ ಶಿಫ್ಟ್ ಆಗಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ರಾಜ್ಯಪಾಲ ಜಗದೀಶ್ ಮುಖಿ ಅವರು ಸ್ಟೇಡಿಯಂ ಉದ್ಘಾಟನೆಗೆ ಆಗಮಿಸಲಿದ್ದಾರೆ ಎಂದು ಎಸಿಎ ಕಾರ್ಯದರ್ಶಿ ಪ್ರದೀಪ್ ಬುರೊಗೊಹೈನ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications