Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 world cup 2024: ನ್ಯೂಯರ್ಕ್‌ಗೆ ಹಾರಿದ ಟೀಮ್‌ ಇಂಡಿಯಾ; ಕೊಹ್ಲಿ, ಪಾಂಡ್ಯ ಎಲ್ಲಿ?

ಮೇ 25 ಶನಿವಾರ, ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿರುವ 2024ರ ಐಸಿಸಿ ಟಿ20 ವಿಶ್ವಕಪ್‌ ಜೂನ್ 1 ರಿಂದ ಆರಂಭವಾಗುತ್ತಿದೆ. ಈ ಮೆಗಾ ಟೂರ್ನಿಗಾಗಿ ಈಗಾಗಲೇ ಆನೇಕ ತಂಡಗಳು ಅಮೆರಿಕಾ ತಲುಪಿವೆ.

ಇದರ ಬೆನ್ನಲ್ಲೇ ಟಿ20 ವಿಶ್ವಕಪ್‌ಗಾಗಿ ನಾಯಕ ರೋಹಿತ್ ಶರ್ಮಾ ನೇತೃತ್ವದ ಟೀಮ್‌ ಇಂಡಿಯಾ ಮೊದಲ ಬ್ಯಾಚ್ ಅಮೆರಿಕಕ್ಕೆ ಹಾರಿದೆ. ಟೀಮ್‌ ಇಂಡಿಯಾ ಅಮೇರಿಕಾಕ್ಕೆ ಹೊರಟಿರುವ ವಿಡಿಯೋ ವೈರಲ್‌ ಆಗಿದೆ.

Team India went to New York for the T20 World Cup 2024

ವಿಡಿಯೋದಲ್ಲಿ ಟೀಮ್‌ ಇಂಡಿಯಾ ಆಟಗಾರರು ಬಸ್ಸಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವುದು ಕಂಡು ಬಂದಿದೆ. ಈ ಸಮಯದಲ್ಲಿ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಸಂಪೂರ್ಣ ಸಿಬ್ಬಂದಿ ಕೂಡ ತಂಡದೊಂದಿಗೆ ಹಾಜರಿದ್ದರು.

ಅಡೀಡಸ್ ಕಂಪನಿ ತಂಡಕ್ಕಾಗಿ ತಯಾರಿಸಿದ ಹೊಸ ಟ್ರಾವೆಲಿಂಗ್ ಕಿಟ್‌ನಲ್ಲಿ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದು ಬಿಳಿ ಮತ್ತು ಕಪ್ಪು ಬಣ್ಣದ್ದಾಗಿದೆ. ತಂಡದ ನಾಯಕ ರೋಹಿತ್ ಶರ್ಮಾ, ಆಲ್ ರೌಂಡರ್ ರವೀಂದ್ರ ಜಡೇಜಾ, ಖಲೀಲ್ ಅಹ್ಮದ್, ಜಸ್ಪ್ರೀತ್ ಬುಮ್ರಾ, ಶುಬ್ಮನ್ ಗಿಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಶಿವಂ ದುಬೆ, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಆಟಗಾರರು ಟಿ20 ವಿಶ್ವಕಪ್‌ಗೆ ತೆರಳಿದ್ದಾರೆ.

ಈ ಸಂದರ್ಭದಲ್ಲಿ ತಂಡದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯ ವಿಡಿಯೋದಲ್ಲಿ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಐಪಿಎಲ್ 2024 ಮುಗಿದ ಬಳಿಕ ಹೊರಡಲಿರುವ ಟೀಂ ಇಂಡಿಯಾದ ಎರಡನೇ ಬ್ಯಾಚ್ ಜೊತೆ ವಿರಾಟ್ ಕೊಹ್ಲಿ ಹೊರಡುವ ಸಾಧ್ಯತೆ ಇದೆ.

ಮತ್ತೊಂದೆಡೆ ಈಗಾಗಲೇ ತಮ್ಮ ರಜಾದಿನಗಳನ್ನು ಆನಂದಿಸುತ್ತ ಲಂಡನ್‌ನಲ್ಲಿರುವ ಹಾರ್ದಿಕ್ ಪಾಂಡ್ಯ ಅವರು ನೇರವಾಗಿ ನ್ಯೂಯಾರ್ಕ್ ನಲ್ಲಿ ಟೀಮ್‌ ಇಂಡಿಯಾ ಸೇರಲಿದ್ದಾರೆ.

ಐಪಿಎಲ್ 2024ರ ಫೈನಲ್ ನಾಳೆ (ಮೇ 26) ಮುಕ್ತಾಯವಾಗಲಿದೆ. ಇದಾದ ನಂತರ ಮೇ 27 ರಂದು ಟೀಮ್ ಇಂಡಿಯಾ ಎರಡನೇ ಬ್ಯಾಚ್‌ನಲ್ಲಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್ ಮತ್ತು ರಿಂಕು ಸಿಂಗ್ ನ್ಯೂಯರ್ಕ್‌ಗೆ ಹೋಗಲಿದ್ದಾರೆ.

Story first published: Saturday, May 25, 2024, 23:29 [IST]
Other articles published on May 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+