For Quick Alerts
ALLOW NOTIFICATIONS  
For Daily Alerts
 

IND vs ENG: ವೇಗಿ ಜಸ್ಪ್ರಿತ್ ಬುಮ್ರಾ ಮಾರಕ ದಾಳಿ: ಇಂಗ್ಲೆಂಡ್‌ 253 ರನ್‌ಗೆ ಆಲೌಟ್

ಟೀಮ್ ಇಂಡಿಯಾದ ವೇಗದ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರ ಮಾರಕ ದಾಳಿಯ ನೆರವಿನಿಂದ ಭಾರರ, ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ತಂಡ 143 ಮುನ್ನಡೆ ಸಾಧಿಸಿದೆ.

ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ 6 ವಿಕೆಟ್‌ಗೆ 336 ರನ್‌ ಗಳಿಂದ ಆಟ ಮುಂದುವರಿಸಿ 396 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡ 253 ರನ್‌ಗಳಿಗೆ ಆಲೌಟ್ ಆಯಿತು.

Team India Were Bowled Out for 396 Runs in the First Innings

ಯಶಸ್ವಿ ಜೈಸ್ವಾಲ್ ಮನಮೋಹಕ ಬ್ಯಾಟಿಂಗ್ ಎರಡನೇ ದಿನದ ಮೊದಲಾವಧಿಯಲ್ಲೂ ಮುಂದುವರೆಸಿದರು.ಯಶಸ್ವಿ ಜೈಸ್ವಾಲ್‌ ಸುಮಾರು 423 ನಿಮಿಷ ಬ್ಯಾಟಿಂಗ್ ಮಾಡಿ 290 ಎಸೆತಗಳನ್ನು ಎದುರಿಸಿ 209 ರನ್ ಸಿಡಿಸಿದರು. ಇದರಲ್ಲಿ 19 ಬೌಂಡರಿ, 7 ಸಿಕ್ಸರ್ ಸೇರಿವೆ. ಇವರು ಅನುಭವಿ ಜೇಮ್ಸ್‌ ಆಂಡರ್ಸನ್‌ ಎಸೆತದಲ್ಲಿ ಔಟ್ ಆದರು.

60 ರನ್‌ಗೆ 4 ವಿಕೆಟ್‌

ಟೀಮ್ ಇಂಡಿಯಾ ಎರಡನೇ ದಿನದಾಟದಲ್ಲಿ 60 ರನ್‌ ಸೇರಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಕುಲ್‌ದೀಪ್ ಯಾದವ್ ಅಜೇಯ 8, ಜಸ್ಪ್ರಿತ್‌ ಬುಮ್ರಾ 6, ಮುಕೇಶ್ ಕುಮಾರ್ 0 ರನ್‌ ಕಲೆ ಹಾಕಿದರು.

ಜೇಮ್ಸ್‌ಗೆ ಮೂರು ವಿಕೆಟ್‌

ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್‌ ಆಂಡರ್ಸನ್‌ 25 ಓವರ್ ಬೌಲಿಂಗ್ ಮಾಡಿ 47 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಇನ್ನು ಪದಾರ್ಪಣೆ ಪಂದ್ಯವನ್ನು ಆಡುತ್ತಿರುವ ಶೋಯಿಬ್ ಬಶೀರ್‌ ಹಾಗೂ ರೇಹನ್ ಅಹ್ಮದ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳನ್ನು ಇಂಗ್ಲೆಂಡ್ ತಂಡದ ಆರಂಭಿಕ ಜಾಕ್ ಕ್ರಾಲಿ ಕೊಂಚ ಕಾಡಿದರು. ಇವರು ಸೊಗಸಾದ ಬ್ಯಾಟಿಂಗ್‌ ನಡೆಸಿ ಅಬ್ಬರಿಸಿತು. ಜಾಕ್‌ ತಮ್ಮ ನೈಜ ಆಟವಾಡಿದರು. ಕ್ರಾಲಿ 78 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ 76 ರನ್ ಬಾರಿಸಿ ಅಕ್ಷರ್ ಪಟೇಲ್‌ಗೆ ಔಟ್ ಆದರು. ಇಂಗ್ಲೆಂಡ್‌ ಪರ ಜಾಕ್ ಕ್ರಾಲಿ ಹಾಗೂ ಆರಂಭಿಕ ಬೆನ್ ಡಕೆಟ್ ಮೊದಲ ವಿಕೆಟ್‌ಗೆ 59 ರನ್‌ಗಳ ಜೊತೆಯಾಟವನ್ನು ನೀಡಿದರು.

ಎರಡನೇ ವಿಕೆಟ್‌ಗೆ ಒಲಿ ಪೋಪ್‌ ಹಾಗೂ ಕ್ರಾಲಿ ಜೊತೆಗೂಡಿ ಎರಡನೇ ವಿಕೆಟ್‌ಗೆ 73 ಎಸೆತಗಳಲ್ಲಿ 55 ರನ್‌ ಸೇರಿಸಿದರು. ಪೋಪ್ 23 ರನ್ ಬಾರಿಸಿ ತಂಡಕ್ಕೆ ಆಧಾರವಾದರು.

ಉಳಿದಂತೆ ಜಾನಿ ಬೇರ್‌ಸ್ಟೋ 25, ಬೆನ್‌ ಸ್ಟೋಕ್ಸ್‌ 47, ಟಾಮ್ ಹಾರ್ಟ್ಲಿ 21 ರನ್‌ ಗಳನ್ನು ಸೇರಿಸಿ ತಂಡಕ್ಕೆ ಆಧಾರವಾದರು.

ಬುಮ್ರಾಗೆ ಆರು ವಿಕೆಟ್‌

ಭಾರತದಲ್ಲಿ ಜಸ್ಪ್ರಿತ್ ಬುಮ್ರಾ ಎರಡನೇ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿದರು. ಜಸ್ಪ್ರಿತ್ ಬುಮ್ರಾ 15.5 ಓವರ್‌ಗಳಲ್ಲಿ 45 ರನ್ ನೀಡಿ 6 ವಿಕೆಟ್‌ ಪಡೆದರು. ಉಳಿದಂತೆ ಕುಲ್‌ದೀಪ್‌ ಯಾದವ್‌ 3, ಅಕ್ಷರ್ ಪಟೇಲ್‌ 1 ವಿಕೆಟ್‌ ಉರುಳಿಸಿದರು.

Story first published: Saturday, February 3, 2024, 11:22 [IST]
Other articles published on Feb 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+