Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Team India: ಟೀಮ್ ಇಂಡಿಯಾದ ಮತ್ತೊಂದು ವಿಜಯಯಾತ್ರೆ ನಡೆಯುತ್ತಾ?

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ತಂಡ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಟೀಮ್ ಇಂಡಿಯಾದ ಚಾಂಪಿಯನ್‌ಗಳು ಟ್ರೋಫಿಯೊಂದಿಗೆ ತವರಿಗೆ ಮರಳಿದ್ದಾರೆ. ವಿಮಾನ ನಿಲ್ದಾಣದಿಂದಲೇ ಆಟಗಾರರಿಗೆ ಭವ್ಯ ಸ್ವಾಗತ ನೀಡಲಾಯಿತು. ಚಾಂಪಿಯನ್ ತಂಡದೊಂದಿಗೆ ರೋಡ್ ಶೋ ಬಗ್ಗೆ ಚರ್ಚೆಗಳು ಮತ್ತೆ ತೀವ್ರಗೊಂಡಿವೆ. ಕಳೆದ ವರ್ಷ ಟೀಮ್ ಇಂಡಿಯಾ 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಅದ್ಧೂರಿ ರೋಡ್‌ ಶೋ ಮಾಡಲಾಯಿತು. ನಂತರ ಮುಂಬೈನ ವಾಕೆಂಡೆ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಟೀಮ್ ಇಂಡಿಯಾ ಆಟಗಾರರು ವಿಜಯೋತ್ಸವ ಆಚರಿಸಿದರು.

ಮುಂಬೈ ಮರೀನ್‌ ಡ್ರೈವ್‌ನಿಂದ ತೆರೆದ ವಾಹನದಲ್ಲಿ ವಾಂಖೆಡೆ ಕ್ರೀಡಾಂಗಣದವರೆಗೆ 2 ಕಿಮೀ ಭರ್ಜರಿ ರೋಡ್‌ ಶೋ ನಡೆಯಲಾಗಿತು. ಈ ವೇಳೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಳೆಯನ್ನೂ ಲೆಕ್ಕಿಸದೆ ಟೀಮ್ ಇಂಡಿಯಾವನ್ನು ಅಭಿನಂದಿಸಿದರು. ಇದೀಗ ಮತ್ತೊಮ್ಮೆ ಟೀಮ್ ಇಂಡಿಯಾವನ್ನು ಅಭಿನಂದಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ರೋಡ್ ಶೋ ನಡೆಯುತ್ತದೆಯೋ? ಇಲ್ಲವೋ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.

Team India who has won Champions Trophy will conduct victory march

ಟೀಮ್ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಮಂಗಳವಾರ ದೆಹಲಿ ತಲುಪಿದ್ದು, ನಾಯಕ ರೋಹಿತ್ ಶರ್ಮಾ ಕೂಡ ಮುಂಬೈನಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ. ಆದರೆ ಈ ಬಾರಿ ರೋಡ್ ಶೋ ನಡೆಸುವ ಯಾವುದೇ ಯೋಜನೆ ಇಲ್ಲ ಎಂದು ವರದಿಗಳಾಗಿವೆ. ರೋಡ್ ಶೋ ನಡೆಸದಿರಲು ಕಾರಣ ಕೂಡ ಬೆಳಕಿಗೆ ಬರುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಲೀಗ್ ಮಾರ್ಚ್ 22 ರಿಂದ ಆರಂಭವಾಗಲಿದೆ. ಹೀಗಾಗಿ
ಚಾಂಪಿಯನ್ಸ್ ಟ್ರೋಫಿಯ ವಿಜಯಯಾತ್ರೆಯನ್ನು ನಡೆಯುವ ಸಾಧ್ಯತೆಗಳು ಕಡಿಮೆ ಇರುವಂತೆ ಕಾಣುತ್ತಿದೆ. ಐಪಿಎಲ್‌ಗಾಗಿ ಬಹುತೇಕ ಎಲ್ಲಾ ಟೀಮ್ ಇಂಡಿಯಾ ಆಟಗಾರರು ತಮ್ಮ ತಂಡಗಳೊಂದಿಗೆ ಶಿಬಿರವನ್ನು ಸೇರಿಕೊಳ್ಳುತ್ತಿದ್ದಾರೆ. ರೋಹಿತ್ ಜೊತೆಗೆ ಶ್ರೇಯಸ್ ಅಯ್ಯರ್ ಮತ್ತು ಅಕ್ಸರ್ ಪಟೇಲ್ ಕೂಡ ಭಾರತಕ್ಕೆ ಮರಳಿದ್ದಾರೆ. ಎಲ್ಲಾ ಆಟಗಾರರು ಐಪಿಎಲ್‌ಗೆ ಮೊದಲು ಸ್ವಲ್ಪ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ. ವರದಿಗಳ ಪ್ರಕಾರ, ಕೆಲವು ಆಟಗಾರರು ವಿದೇಶಗಳಲ್ಲಿ ರಜೆ ಕಳೆಯಲು ನಿರ್ಧರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ರೋಡ್ ಶೋ ತುಂಬಾ ಕಷ್ಟಕರವಾಗಿದೆ.

ಐಪಿಎಲ್‌ಗೆ ಸಿದ್ಧತೆ ಆರಂಭ

ಐಪಿಎಲ್ 2025ರ ಟೂರ್ನಿಗೆ ಎಲ್ಲಾ ಸಿದ್ಧತೆಗಳು ಆರಂಭವಾಗಿವೆ. ಬಹುತೇಕ ಎಲ್ಲಾ ತಂಡಗಳ ಶಿಬಿರಗಳನ್ನು ತೆರೆಯಲಾಗಿದೆ. ಕ್ರಮೇಣ ಆಟಗಾರರು ತಮ್ಮ ಶಿಬಿರಗಳನ್ನು ಸೇರುತ್ತಿದ್ದಾರೆ. ಐಪಿಎಲ್ 2025ರ 9 ತಂಡಗಳ ನಾಯಕರನ್ನು ಘೋಷಣೆ ಮಾಡಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಶೀಘ್ರದಲ್ಲೇ ನಾಯಕನನ್ನು ಘೋಷಿಸಲಿದೆ. ಡೆಲ್ಲಿ ತಂಡದ ನಾಯಕತ್ವದ ರೇಸ್‌ನಿಂದ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ. ನನಗೆ ನಾಯಕತ್ವ ಬೇಡ ಆಟಗಾರನಾಗಿ ಮುಂದುವರೆಯುತ್ತೇನೆ ಎಂದು ರಾಹುಲ್ ಹೇಳಿದ್ದಾರೆ. ಈಗ ಫಾಪ್‌ ಡು ಪ್ಲೆಸಿಸ್, ಕರುಣ್ ನಾಯರ್ ಮತ್ತು ಅಕ್ಸರ್ ಪಟೇಲ್ ಹೆಸರುಗಳು ಅಗ್ರಸ್ಥಾನದಲ್ಲಿವೆ. ಈ ತಂಡದ ನಾಯಕತ್ವ ಯಾರಿಗೆ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Story first published: Tuesday, March 11, 2025, 18:30 [IST]
Other articles published on Mar 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+