Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ಪ್ರವಾಸಕ್ಕೆ ಮುನ್ನ ಭಾರತ ತಂಡಕ್ಕೆ ಕೋಚ್ ನೇಮಕ: ಬಿಸಿಸಿಐ

ಮುಂಬೈ, ಜೂನ್ 21: ಭಾರತೀಯ ಕ್ರಿಕೆಟ್ ತಂಡವು, ಶೀಘ್ರದಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಷ್ಟರೊಳಗೆ ತಂಡಕ್ಕೆ ಹೊಸ ತರಬೇತುದಾರರನ್ನು ನೇಮಿಸುವುದಾಗಿ ಭಾರತೀಯ ಕ್ರಿಕೆಟ್ ಮಂಡಳಿ ಹೇಳಿದೆ.

ಮುಂಬೈನಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿಸಿಐನ ಹಿರಿಯ ಅಧಿಕಾರಿ ರಾಜೀವ್ ಶುಕ್ಲಾ ಅವರು ಈ ವಿಚಾರ ತಿಳಿಸಿದರು.

Team India will have coach before Sri Lanka tour says Rajiv Shukla

ಹಾಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತೆರಳಿರುವ ಭಾರತ ತಂಡ, ಆ ಪ್ರವಾಸ ಮುಗಿದ ನಂತರ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿಯವರೆಗೂ ತಂಡದೊಂದಿಗಿರುವ ಸಹಾಯಕ ಕೋಚ್ ಗಳು ತಂಡದ ತರಬೇತು ಶಿಬಿರಗಳ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಈವರೆಗೂ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರು, ಮಂಗಳವಾರ ದಿಢೀರನೇ ಕೋಚ್ ಹುದ್ದೆಗೆ ರಾಜಿನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಹಾಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ, ಮುಖ್ಯ ತರಬೇತುದಾರರ ಅನುಪಸ್ಥಿತಿಯಲ್ಲೇ ಪ್ರವಾಸ ಮುಗಿಸಿಕೊಂಡು ಸ್ವದೇಶಕ್ಕೆ ಮರಳಲಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+