ಕೊರೊನಾ ವೈರಸ್: ಶ್ರೀಲಂಕಾ ಬಳಿಕ ಭಾರತದ ಮತ್ತೊಂದು ಪ್ರವಾಸ ರದ್ದು

ಶ್ರೀಲಂಕಾ ವಿರುದ್ಧ ಜೂನ್ ತಿಂಗಳಲ್ಲಿ ಭಾರತ ಪ್ರವಾಸಕ್ಕೆ ತೆರಳಬೇಕಿತ್ತು. ಅದನ್ನು ಬಿಸಿಸಿಐ ರದ್ದುಗೊಳಿಸುವ ತೀರ್ಮಾನ ತೆಗೆದುಕೊಂಡಿತ್ತು. ಅದರ ಬೆನ್ನಲ್ಲೇ ಮತ್ತೊಂದು ಸರಣಿ ಆಯೋಜನೆಯನ್ನೂ ಬಿಸಿಸಿಐ ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಜಿಂಬಾಬ್ವೆ ಪ್ರವಾಸಕ್ಕೆ ತೆರಬೇಕಿದ್ದ ಟೀಮ್ ಇಂಡಿಯಾ ಪ್ರವಾಸವನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಶ್ರೀಲಂಕಾ ಪ್ರವಾಸವನ್ನು ಮುಗಿಸಿದ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಪಂದ್ಯಗಳನ್ನಾಡಲು ಪ್ರವಾಸ ಕೈಗೊಳ್ಳಬೇಕಾಗಿತ್ತು.
ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾ ವೈರಸ್ ಪೀಡಿತರ ಪಟ್ಟಿಯಲ್ಲಿ ಭಾರತ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಪ್ರವಾಸವನ್ನು ಕೈಗೊಳ್ಳುವ ನಿರ್ಧಾರದಿಂದ ಹಿಂದಕ್ಕೆ ಬರಲಾಗಿದೆ ಎನ್ನಲಾಗ್ತಿದೆ.
ಮತ್ತೊಂದೆಡೆ ಕ್ರಿಕೆಟಿಗರು ಅಭ್ಯಾಸದಿಂದ ದೂರವಾಗಿ ಈಗಾಗಲೇ ಮೂರು ತಿಂಗಳು ಸಮೀಪಿಸುತ್ತಿದೆ. ಹೀಗಾಗಿ ಆಟಗಾರರ ಅಭ್ಯಾಸಕ್ಕೆ ಹೆಚ್ಚಿನ ಗಮನ ನೀಡಲು ಬಿಸಿಸಿಐ ಗಮನ ನೀಡುತ್ತಿದೆ. ಕೆಲ ಆಟಗಾರರು ತಮ್ಮ ಅಬ್ಯಾಸವನ್ನು ಈಗ ಆರಂಭ ಮಾಡಿದ್ದಾರೆ.
ನಿನ್ನೆಯಷ್ಟೇ ಐಸಿಸಿ ಭಾರತದ ಶ್ರೀಲಂಕಾ ಪ್ರವಾಸ ರದ್ದುಗೊಂಡಿರುವುದನ್ನು ಟ್ವಿಟ್ಟರ್‌ನಲ್ಲಿ ಘೋಷಿಸಿತ್ತು. ಇಂದು ಬಿಸಿಸಿಐ ಶ್ರೀಲಂಕಾ ಮಾತ್ರವಲ್ಲ ಜಿಂಬಾಬ್ವೆ ಪ್ರವಾಸವೂ ರದ್ದಾಗಿದೆ ಎಂಬ ಸುದ್ದಿ ನೀಡಿದೆ. ಆದರೆ ಭವಿಷ್ಯದಲ್ಲಿ ಈ ಸರಣಿಯನ್ನು ಆಯೋಜನೆ ಮಾಡಲು ಬಿಸಿಸಿಐ ಉತ್ಸುವಾಗಿದೆ ಎಂದು ಇದೇ ಸಂದರ್ಭದಲ್ಲಿ ಬಿಸಿಸಿಐ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications