ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯ ವಿರುದ್ಧ ಭಾರತದ ಟಿ20 ಸರಣಿ ಫಿಕ್ಸ್

Team India Will Play T20 Series Against Australia Before T20 World Cup

ಸದ್ಯ ಬಾರತೀಯ ಆಟಗಾರರು ಸೇರಿದಂತೆ ವಿದೇಶಿ ಅಟಗಾರರೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ಮೇ 29ಕ್ಕೆ ಐಪಿಎಲ್ 2022ರ 15ನೇ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದ್ದು, ಅಲ್ಲಿಗೆ ಅಧಿಕೃತವಾಗಿ ಈ ವರ್ಷದ ಐಪಿಎಲ್‌ಗೆ ತೆರೆ ಬೀಳಲಿದೆ.

ಅಕ್ಟೋಬರ್-ನವೆಂಬರ್‌ ತಿಂಗಳಿನಲ್ಲಿ ಆಸ್ಟ್ರೇಲಿಯದಲ್ಲಿ ನಿಗದಿಯಾಗಿರುವ 8ನೇ ಆವೃತ್ತಿಯ ಟಿ20 ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 3 ಟಿ20 ಪಂದ್ಯಗಳ ಸರಣಿ ಆಡಲಿದೆ. ಇದರೊಂದಿಗೆ 2023ರಲ್ಲಿ ಆಸೀಸ್ ತಂಡ ಮತ್ತೊಮ್ಮೆ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಫೆಬ್ರವರಿ-ಮಾರ್ಚ್‌ನಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ ಎಂದು ವರದಿಯಾಗಿದೆ.

ಐಪಿಎಲ್ ಮುಕ್ತಾಯದ ಬಳಿಕ ಜೂನ್ 9ರಿಂದ 19ರವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದರ ನಂತರ ವಿದೇಶಿ ಸರಣಿ ಇರಲಿದೆ. ಅಂದರೆ ಜುಲೈನಲ್ಲಿ ಭಾರತ ತಂಡವು ಒಂದರ ಹಿಂದೆ ಮತ್ತೊಂದು ಸರಣಿಯನ್ನು ಹೊಂದಿದೆ.

Team India Will Play T20 Series Against Australia Before T20 World Cup

ಐರ್ಲೆಂಡ್ ಪ್ರವಾಸ (ಜೂನ್ 26 - 28) - 2 ಟಿ20
ಇಂಗ್ಲೆಂಡ್ ಪ್ರವಾಸ (ಜುಲೈ 1 - 17) - 3 ಟಿ20, 3 ಒಡಿಐ, 1 ಟೆಸ್ಟ್‌
ವೆಸ್ಟ್ ಇಂಡೀಸ್ ಪ್ರವಾಸ (ಜುಲೈ 22 - ಆಗಸ್ಟ್ 7) - 5 ಟಿ20, 3 ಒಡಿಐ
ಏಷ್ಯಾ ಕಪ್ ಸರಣಿ (ಆಗಸ್ಟ್ 7 - ಸೆ.11)
ದಕ್ಷಿಣ ಆಫ್ರಿಕಾ ಪ್ರವಾಸ (ದಿನಾಂಕ ಅಂತಿಮಗೊಂಡಿಲ್ಲ) - 4 ಟಿ20

ಸದ್ಯ ಆಸ್ಟ್ರೇಲಿಯಾದ ಮುಂದಿನ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಪ್ರಕಾರ, ಆಸೀಸ್ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, 3 ಟಿ20 ಪಂದ್ಯಗಳನ್ನಾಡಲಿದೆ. ಬಳಿಕ ಕೆಲ ದಿನಗಳಲ್ಲೇ ಟಿ20 ವಿಶ್ವಕಪ್ ನಡೆಯಲಿರುವುದರಿಂದ ಉಭಯ ತಂಡಗಳಿಗೂ ಇದು ಮಹತ್ವದ ಸರಣಿ ಎನಿಸಿಕೊಂಡಿದೆ.

ಟೀಕಾಕಾರರ ಬಾಯಿ ಮುಚ್ಚಿಸಲು ವಿರಾಟ್ ಕೊಹ್ಲಿ ಕಂಡುಕೊಂಡ ಉಪಾಯವೇನು?ಟೀಕಾಕಾರರ ಬಾಯಿ ಮುಚ್ಚಿಸಲು ವಿರಾಟ್ ಕೊಹ್ಲಿ ಕಂಡುಕೊಂಡ ಉಪಾಯವೇನು?

ಐಪಿಎಲ್ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಜೂ.9ರಿಂದ 19ರ ವರೆಗೆ ತವರಿನಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಲಿದ್ದು, ನಂತರ 2 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಮತ್ತು 3 ಟಿ20, 3 ಏಕದಿನ ಪಂದ್ಯಗಳನ್ನು ಆಡಬೇಕಿದೆ. ಹೀಗೆ ಬಿಸಿಸಿಐ ಸತತ ಪಂದ್ಯಗಳನ್ನು ಆಯೋಜಿಸಿರುವುದರಿಂದ ಆಟಗಾರರ ದೈಹಿಕ ಕ್ಷಮತೆ ಕುಸಿಯಲಿದ್ದು, ವಿಶ್ರಾಂತಿ ಇಲ್ಲದೆ ಬಳಲಲಿದ್ದಾರೆ.

2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ವಹಿಸಿಕೊಳ್ಳಲಿದೆ. ಮುಂದಿನ ತಿಂಗಳ ಜೂನ್-ಜುಲೈನಿಂದಲೇ ವಿವಿಧ ದೇಶದ ತಂಡಗಳೊಂದಿಗೆ ಟಿ20, ಟೆಸ್ಟ್ ಹಾಗೂ ಏಕದಿನ ಇನ್ನಿಂಗ್ಸ್ ಪಂದ್ಯಗಳು ಪ್ರಾರಂಭವಾಗಲಿದ್ದು, 2023ರ ಅಕ್ಟೋಬರ್- ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನೊಂದಿಗೆ ಆಸ್ಟ್ರೇಲಿಯಾದ ಸರಣಿ ಅಂತ್ಯಗೊಳ್ಳಲಿದೆ.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗ

ಕಳೆದ ಬಾರಿಯ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಟೀಂ ಇಂಡಿಯಾ, ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿದು ಪ್ರಶಸ್ತಿ ಗೆಲ್ಲುವತ್ತ ಗಮನ ಹರಿಸಿದೆ.

2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 2- 1 ಅಂತರದಲ್ಲಿ ಸೋಲಿಸಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಇಂಡಿಯಾ-ಆಸಿಸ್ ನಡುವೆ ಇದುವರೆಗೆ ಒಟ್ಟು 23 ಟಿ20 ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ 13 ಪಂದ್ಯಗಳಲ್ಲಿ ಗೆದ್ದಿದ್ದರೆ, ಆಸ್ಟ್ರೇಲಿಯಾ 9 ಪಂದ್ಯಗಳಲ್ಲಿ ಗೆದ್ದಿದೆ. ಉಳಿದ ಒಂದು ಪಂದ್ಯಗಳಲ್ಲಿ ಫಲಿತಾಂಶ ಕಾಣದೇ ಅಂತ್ಯಗೊಂಡಿದೆ.

ಭಾರತದ ಸಂಭಾವ್ಯ ತಂಡ
ಶಿಖರ್ ಧವನ್, ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಆರ್.​ ಅಶ್ವೀನ್, ಪ್ರಸಿದ್ಧ್ ಕೃಷ್ಣ,

Story first published: Thursday, May 12, 2022, 9:29 [IST]
Other articles published on May 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X