ಟೀಮ್ ಇಂಡಿಯಾಕ್ಕೆ 78 ರನ್ ಗಳ ಜಯ, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆಲುವು
ವೇಗದ ಬೌಲರ್ ಆರ್ಷದೀಪ್ ಸಿಂಗ್ ಹಾಗೂ ಸಂಜು ಸ್ಯಾಮ್ಸನ್ ಅವರ ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 78 ರನ್ ಗಳಿಂದ ಮಣಿಸಿ, ಏಕದಿನ ಸರಣಿಯನ್ನು ತನ್ನ ವಶಕ್ಕೆ ಪಡೆದಿದೆ.
ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಮಹತ್ವದ ಪಂದ್ಯದಲ್ಲಿ ಸ್ಟಾರ್ ಆಟಗಾರರು ಉತ್ತಮ ಆಟವಾಡಿದ್ದ ಪರಿಣಾಮ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 296 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆತಿಥೇಯ ದಕ್ಷಿಣ ಆಫ್ರಿಕಾ 45.5 ಓವರ್‌ಗಳಲ್ಲಿ 218 ರನ್ ಗಳಿಗೆ ಆಲೌಟ್ ಆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾದ ರಜತ್ ಪಟೀದಾರ್ (22) ಹಾಗೂ ಸಾಯ್ ಸುದರ್ಶನ್ (10) ತಂಡಕ್ಕೆ 34 ರನ್ ಜೊತೆಯಾಟ ನೀಡಿದರು. ಎರಡೂ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ಭರವಸೆ ಮೂಡಿಸಿದ್ದ ಸಾಯ್ ಸುದರ್ಶನ ಮಹತ್ವದ ಪಂದ್ಯದಲ್ಲಿ ಎರಡವಿದರು.
ಮೂರನೇ ವಿಕೆಟ್‌ಗೆ ಕೆ.ಎಲ್ ರಾಹುಲ್ (21) ಹಾಗೂ ಸಂಜು ಸ್ಯಾಮ್ಸನ್ ಜೊತೆಗೂಡಿ 68 ಎಸೆತಗಳಲ್ಲಿ 52 ರನ್ ಸಿಡಿಸಿದರು.
ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟ
ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಇಷ್ಟು ದೊಡ್ಡ ಮೊತ್ತ ಕಲೆ ಹಾಕಲು ನಾಲ್ಕನೇ ವಿಕೆಟ್ ಜೊತೆಯಾಟ ಪ್ರಮುಖ ಕಾರಣವಾಯಿತು. ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಜೊತೆಗೂಡಿ 136 ಎಸೆತಗಳಲ್ಲಿ 116 ರನ್ ಸೇರಿಸಿದರು. ತಿಲಕ್ 5 ಬೌಂಡರಿ, 1 ಸಿಕ್ಸರ್ ಸೇರಿದಂತೆ 52 ರನ್ ಬಾರಿಸಿದರು. ರಿಂಕು ಸಿಂಗ್ 38 ರನ್ ಬಾರಿಸಿ ತಂಡಕ್ಕೆ ಆಧಾರವಾದರು.

ಸಂಜು ಮಿಂಚು
ತಂಡದಲ್ಲಿ ತನ್ನ ಸ್ಥಾನವನ್ನು ಭಧ್ರ ಪಡಿಸಿಕೊಳ್ಳಲು ಹೆಣಗಾಟ ನಡೆಸುತ್ತಿರುವ ಸಂಜು ಸ್ಯಾಮ್ಸನ್ ಮೂರನೇ ಏಕದಿನ ಪಂದ್ಯದಲ್ಲಿ ಮನಮೋಹಕ ಇನ್ನಿಂಗ್ಸ್ ಕಟ್ಟಿದರು. ಇವರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿ ಶತಕ ಸಿಡಿಸಿದರು. 114 ಎಸೆತಗಳಲ್ಲಿ ಸಂಜು 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 108 ರನ್ ಬಾರಿಸಿದರು. ಇವರ ಇನ್ನಿಂಗ್ಸ್ ಬಲದಿಂದ ಟೀಮ್ ಇಂಡಿಯಾ ದೊಡ್ಡ ಮೊತ್ತ ಪೇರಿಸಿತು.
ಬೋಲ್ಯಾಂಡ್ ಪಾರ್ಕ್ ಪಿಚ್‌ನ ಸ್ವರೂಪವನ್ನು ಗಮನಿಸಿದರೆ 297 ರನ್‌ಗಳ ಗುರಿ ದೊಡ್ಡದಾಗಿತ್ತು. ದಕ್ಷಿಣ ಆಫ್ರಿಕಾ ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 59 ರನ್‌ಗಳ ಭರ್ಜರಿ ಜೊತೆಯಾಟ ಕಂಡು ಬಂದಿತು. ರೀಜಾ ಹೆಂಡ್ರಿಕ್ಸ್ 19 ರನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ.
ದಕ್ಷಿಣ ಆಫ್ರಿಕಾ ಕುಸಿತ
ಟೋನಿ ಡಿಜಾರ್ಜ್ ಮತ್ತು ನಾಯಕ ಏಡನ್ ಮಾರ್ಕ್ರಾಮ್ ನಡುವೆ ಮೂರಮೇ ವಿಕೆಟ್ ವೆ 65 ರನ್‌ಗಳ ಜೊತೆಯಾಟವಿತ್ತು. ಮಾರ್ಕ್ರಾಮ್ 36 ರನ್ ಗಳಿಸಿದ್ದಾಗ ವಾಷಿಂಗ್ಟನ್ ತೋಡಿದ ಖೆಡ್ಡಾಗೆ ಬಲಿಯಾದರು. ಇಲ್ಲಿಂದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಕ್ರಮಾಂಕವು ನೆಲ ಕಂಡಿತು. ನಿಯಮಿತ ಅಂತರದಲ್ಲಿ ವಿಕೆಟ್‌ಗಳು ಬೀಳುತ್ತಲೇ ಸಾಗಿದುವ.

ಟೋನಿ ಡಿ ಜಾರ್ಜಿ ಉತ್ತಮ ಆಟದ ಕಾಣಿಕೆ ನೀಡಿದರು. ಇವರು 87 ಎಸೆತಗಳಲ್ಲಿ 81 ರನ್ ಸೇರಿಸಿದರು. ಇವರ ಮನಮೋಹಕ ಇನ್ನಿಂಗ್ಸ್ ನಲ್ಲಿ 6 ಬೌಂಡರಿ, 3 ಸಿಕ್ಸರ್ ಸೇರಿವೆ.
ಭಾರತ ತಂಡದ ಪರ ಅರ್ಷದೀಪ್ ನಾಲ್ಕು, ಅವೇಶ್ ಮತ್ತು ವಾಷಿಂಗ್ಟನ್ ತಲಾ ಎರಡು ಹಾಗೂ ಮುಖೇಶ್ ಕುಮಾರ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಈ ಪಂದ್ಯದೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications