INDW vs AUSW: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತ ಭಾರತ; ಎಲ್ಲಿಸ್ ಪೆರ್ರಿ ಡಬಲ್ ದಾಖಲೆ
ಆಸ್ಟ್ರೇಲಿಯಾದಲ್ಲಿ ಭಾರತ ತಂಡಗಳಿಗೆ ಭಾನುವಾರ ಹೇಳಿಕೊಳ್ಳುವಂತ ದಿನವಲ್ಲ. ಒಂದೆಡೆ ಅಡಿಲೇಡ್ ಟೆಸ್ಟ್‌ನಲ್ಲಿ ಪುರುಷರ ಭಾರತ ತಂಡ ಸೋತಿತ್ತು. ಮತ್ತೊಂದೆಡೆ ಭಾರತ ಮಹಿಳಾ ತಂಡ ಏಕದಿನ ಸರಣಿಯಲ್ಲಿ ಸೋಲು ಕಂಡಿದೆ. ಬ್ರಿಸ್ಬೇನ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 122 ರನ್‌ಗಳಿಂದ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾ ಮಹಿಳಾ ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಕಾಂಗರೂ ತಂಡದ ಪರ ಜಾರ್ಜಿಯಾ ವೇಲ್ ಮತ್ತು ಆಲಿಸ್ ಪೆರ್ರಿ ಸ್ಫೋಟಕ ಶತಕ ಬಾರಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 371 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 45.5 ಓವರ್‌ಗಳಲ್ಲಿ 249 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ವನಿತರೆಯರ ತಂಡ 122 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.

ಆಸ್ಟ್ರೇಲಿಯಾ ಪರ ಯುವ ಬ್ಯಾಟರ್ ಜಾರ್ಜಿಯಾ ವೋಲ್ ಕೇವಲ 87 ಎಸೆತಗಳಲ್ಲಿ 101 ರನ್‌ಗಳ ಬಾರಿಸಿದರು. ಇದರೊಂದಿಗೆ ಅವರು ತಮ್ಮ ವೃತ್ತಿಜೀವನದ ಮೊದಲ ಶತಕವನ್ನು ಗಳಿಸುವಲ್ಲಿ ಯಶಸ್ವಿಯಾದರು. ಇದು ಅವರ ವೃತ್ತಿ ಜೀವನದ ಎರಡನೇ ಪಂದ್ಯವಾಗಿದೆ. ಮತ್ತೊಂದೆಡೆ, ಎಲ್ಲಿಸ್ ಪೆರ್ರಿ 75 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 105 ರನ್ ಕಲೆ ಹಾಕಿದರು.
ಎಲ್ಲಿಸ್ ಪೆರ್ರಿ ಡಬಲ್ ರೆಕಾರ್ಡ್
ಎಲ್ಲಿಸ್ ಪೆರ್ರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7000 ರನ್ ಮತ್ತು 300 ವಿಕೆಟ್‌ಗಳ ಡಬಲ್ ಸಾಧನೆ ಮಾಡಿದ ಇತಿಹಾಸದಲ್ಲಿ ಮೊದಲ ಕ್ರಿಕೆಟಿಗರಾಗಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ 7080 ರನ್ ಕಲೆ ಹಾಕಿದ್ದು, 330 ವಿಕೆಟ್‌ಗಳನ್ನು ಪಡೆದಿದ್ದಾರೆ. ಪೆರ್ರಿ ಏಕದಿನ ಕ್ರಿಕೆಟ್‌ನಲ್ಲಿ 4064 ರನ್, ಟಿ20ಯಲ್ಲಿ 2088 ಮತ್ತು ಟೆಸ್ಟ್‌ನಲ್ಲಿ 928 ರನ್ ಗಳಿಸಿದ್ದಾರೆ. ಅಲ್ಲದೆ ಟಿ20ಯಲ್ಲಿ 126, ಏಕದಿನದಲ್ಲಿ 165 ಹಾಗೂ ಟೆಸ್ಟ್‌ನಲ್ಲಿ 39 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದುವರೆಗೂ ಈ ಸಾಧನೆಯನ್ನು ಮಹಿಳೆ ಕ್ರಿಕೆಟ್‌ನಲ್ಲಿ ಮಾಡಿಲ್ಲ.
ಅದ್ಭುತ ಜೊತೆಯಾಟ
ಆರಂಭಿಕ ಜೋಡಿ ಫೋಬೆ ಲಿಚ್‌ಫೀಲ್ಡ್ (60) ಮತ್ತು ಜಾರ್ಜಿಯಾ ವೋಲ್ 130 ರನ್‌ಗಳ ಅದ್ಭುತ ಜೊತೆಯಾಟದೊಂದಿಗೆ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ನೀಡಿದರು. ಇದಾದ ಬಳಿಕ, ವೋಲ್ ಎರಡನೇ ವಿಕೆಟ್‌ಗೆ ಪೆರ್ರಿ ಅವರೊಂದಿಗೆ 92 ರನ್‌ಗಳ ಜೊತೆಯಾಟ ಆಡಿದರು. ವೋಲ್ ಔಟಾದ ನಂತರ, ಎಲ್ಲಿಸ್ ಪೆರ್ರಿ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿದರು. ಬೆತ್ ಮೂನಿ (56) ಅವರೊಂದಿಗೆ 98 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಟೀಮ್ ಇಂಡಿಯಾ ಬೌಲರ್‌ಗಳನ್ನು ಬೆಂಡೆತ್ತಿದರು. ಟೀಮ್ ಇಂಡಿಯಾ ಪರ ಸೈಮಾ ಠಾಕೋರ್ 62 ರನ್‌ಗಳಿಗೆ 3 ವಿಕೆಟ್ ಪಡೆದರು.
ಹಳಿ ತಪ್ಪಿದ ಭಾರತ
ಆಸ್ಟ್ರೇಲಿಯಾ ನೀಡಿದ 372 ಗುರಿ ಬೆನ್ನಟ್ಟಿದ ಭಾರತ ಪರ ಇನ್ನಿಂಗ್ಸ್ ಆರಂಭಿಸಿದ ರಿಚಾ ಘೋಷ್ 72 ಎಸೆತಗಳಲ್ಲಿ 54 ರನ್ ಗಳಿಸಿದರು. ಆದರೆ ಜೆಮಿಮಾ ರೋಡ್ರಿಗಸ್ (43) ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ (38) ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಮಿನ್ನು ಮಣಿ ಕೊನೆಯ ಓವರ್‌ಗಳಲ್ಲಿ 45 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಅನಾಬೆಲ್ ಸದರ್ಲೆಂಡ್ 8.5 ಓವರ್ ಗಳಲ್ಲಿ 38 ರನ್ ನೀಡಿ 4 ವಿಕೆಟ್ ಪಡೆದರು. ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಗೆದ್ದಿತ್ತು. ಸರಣಿಯ ಕೊನೆಯ ಪಂದ್ಯ ಬುಧವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications