For Quick Alerts
ALLOW NOTIFICATIONS  
For Daily Alerts
 

Womens Asia Cup 2024: ಮೊದಲ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಟೀಮ್ ಇಂಡಿಯಾ ವನಿತೆಯರು!

ಜುಲೈ 21 ಭಾನುವಾರ, 2024ರ ಮಹಿಳಾ ಏಷ್ಯಾ ಕಪ್‌ ಟೂರ್ನಿಯ ಐದನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಭಾರತ ವನಿತೆಯರು 78 ರನ್‌ಗಳ ಸುಲಭ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಭಾರತಕ್ಕೆ ಇದು ಸತತ ಎರಡನೇ ಗೆಲುವು.

ಈ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ದಾಖಲೆ ಸೃಷ್ಟಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತವು 201 ರನ್‌ಗಳನ್ನು ಹಾಕಿತು. ಇದಕ್ಕೆ ಉತ್ತರವಾಗಿ ಯುಎಇ ತಂಡವು ನಿಗದಿತ 20 ಓವರ್‌ನಲ್ಲಿ ಕೇವಲ 123 ರನ್‌ಗಳನ್ನು ತಲುಪಲು ಸಾಧ್ಯವಾಯಿತು.

Team India women set record in T20 international cricket

ಟೀಮ್‌ ಇಂಡಿಯಾ ವನತೆಯರ ದಾಖಲೆ

ಪವರ್‌ಪ್ಲೇಯಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಐದನೇ ವಿಕೆಟ್‌ಗೆ 45 ಎಸೆತಗಳಲ್ಲಿ 75 ರನ್ ಸೇರಿಸಿದರು. ಹೀಗಾಗಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 201 ರನ್‌ ಕಲೆ ಹಾಕಲು ಸಾಧ್ಯವಾಯಿತು.

ಇದು ಮಹಿಳಾ ಏಷ್ಯಾಕಪ್​ನ ಟಿ20 ಮಾದರಿಯಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಅಲ್ಲದೆ ಭಾರತ ಮಹಿಳಾ ಕ್ರಿಕೆಟ್ ತಂಡದ ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ 200 ರನ್‌ಗಳ ಗಡಿ ದಾಟಿದ್ದು ಇದೇ ಮೊದಲು.

ಇದಕ್ಕೂ ಮೊದಲು, ಭಾರತದ ಅತ್ಯುತ್ತಮ ಸ್ಕೋರ್ 198/4 ಆಗಿತ್ತು. ಈ ಸಾಧನೆಯನ್ನು 2018 ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್‌ ಇಂಡಿಯಾ ಮಾಡಿತ್ತು. ಇದೀಗ ತನ್ನದೆ ಹಳೆಯ ದಾಖಲೆಯನ್ನು ಭಾರತ ಮುರಿದಿದೆ.

ಸೆಮಿಫೈನಲ್ ಟಿಕೆಟ್ ಕನ್ಫರ್ಮ್

ಏಳು ಬಾರಿ ಚಾಂಪಿಯನ್ ಆಗಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು. ಇದೀಗ ತನ್ನ ಸತತ ಎರಡನೇ ಗೆಲುವಿನೊಂದಿಗೆ ಸೆಮಿಫೈನಲ್ ತಲುಪಲು ಒಂದು ಹೆಜ್ಜೆ ದೂರದಲ್ಲಿದೆ.

ಎರಡು ಗೆಲುವಿನೊಂದಿಗೆ ಭಾರತವು 4 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ ಭಾರತ ತಂಡದ ನಿವ್ವಳ ರನ್ ದರ +3.298 ಆಗಿದೆ.

ಮಂಗಳವಾರ ನಡೆಯಲಿರುವ ತನ್ನ ಮೂರನೇ ಹಾಗೂ ಅಂತಿಮ ಗುಂಪಿನ ಪಂದ್ಯದಲ್ಲಿ ಭಾರತ ನೇಪಾಳವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್‌ ಇಂಡಿಯಾ ಅಧಿಕೃತವಾಗಿ ಸೆಮಿಫೈನಲ್ ಟಿಕೆಟ್ ಪಡೆಯಲಿದೆ.

Story first published: Sunday, July 21, 2024, 23:47 [IST]
Other articles published on Jul 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+