INDW vs NZW ODI: ಸ್ಮೃತಿ ಮಂಧಾನ ಅಮೋಘ ಶತಕ; ಚಾಂಪಿಯನ್ ನ್ಯೂಜಿಲೆಂಡ್‌ಗೆ ಸರಣಿ ಸೋಲು
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದ ಮೂರನೇ ಮತ್ತು ನಿರ್ಣಾಯಕ ಏಕದಿನ ಪಂದ್ಯವನ್ನು ಭಾರತ ವನಿತೆಯರ ತಂಡ 6 ವಿಕೆಟ್‌ಗಳಿಂದ ಗೆದ್ದಿದೆ. ಈ ಮೂಲಕ ನ್ಯೂಜಿಲೆಂಡ್ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಭಾರತ ತಂಡ ವಶಪಡಿಸಿಕೊಂಡಿದೆ.
ಇತ್ತೀಚೆಗೆ ನ್ಯೂಜಿಲೆಂಡ್ ತಂಡ 2024ರ ಟಿ20 ವಿಶ್ವಕಪ್ ಚಾಂಪಿಯನ್ ಆಗಿತ್ತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲಿಸಿತ್ತು. ಪರಿಣಾಮ ಗುಂಪು ಹಂತದಲ್ಲಿ ಭಾರತ ಟೂರ್ನಿಯಿಂದ ಹೊರಗುಳಿದಿತ್ತು. ಇದೀಗ ವಿಶ್ವಕಪ್ ಸೋಲಿಗೆ ಭಾರತ ತಂಡದ ವನಿತೆಯರು ಸೇಡು ತೀರಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 49.5 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ಚಾಂಪಿಯನ್ ಆಟವನ್ನು ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರೆ, ಪ್ರಿಯಾ ಮಿಶ್ರಾ 2 ವಿಕೆಟ್, ರೇಣುಕಾ ಠಾಕೂರ್ ಸಿಂಗ್ ಮತ್ತು ಸೈಮಾ ಠಾಕೋರ್ ತಲಾ ಒಂದೊಂದು ವಿಕೆಟ್ ಪಡೆದರು.
ನ್ಯೂಜಿಲೆಂಡ್ ಭಾರತಕ್ಕೆ ಗೆಲುವಿಗೆ 233 ರನ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಸ್ಮೃತಿ ಮಂಧಾನ ಅವರ ಶತಕ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕ ಸಿಡಿಸಿದರು. ಇದರ ಪ್ರತಿಫಲವಾಗಿ ಭಾರತ 44.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸರಣಿ ಗೆದ್ದು ಬೀಗಿತು.
ಮಂಧಾನ ಶತಕ
ನ್ಯೂಜಿಲೆಂಡ್ ವಿರುದ್ಧ ಕೊನೆ ಏಕದಿನ ಪಂದ್ಯದಲ್ಲಿ ಮಂಧಾನ ಮಿಂಚಿನ ಪ್ರದರ್ಶನ ನೀಡಿದರು. ನ್ಯೂಜಿಲೆಂಡ್ ಬೌಲರ್ ಬೆವರಿಳಿಸಿದ ಮಂಧಾನ ಅದ್ಭುತ ಶತಕ ಸಿಡಿಸಿದರು. ಅವರು 122 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 100 ರನ್ ಹೊಡೆದು ಔಟಾದರು. ಮತ್ತೊಂದೆಡೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಅತ್ಯುತ್ತಮ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹರ್ಮನ್‌ಪ್ರೀತ್ ಕೌರ್ 63 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ ಅಜೇಯ 59 ರನ್‌ಗಳನ್ನು ಬಾರಿಸಿದರು.
ನ್ಯೂಜಿಲೆಂಡ್ ಪರ ಬ್ರೂಕ್ ಹ್ಯಾಲಿಡೆ ಅತಿ ಹೆಚ್ಚು ರನ್ ಗಳಿಸಿದರು. ಅವರು 86 ರನ್‌ಗಳ ಜವಾಬ್ದಾರಿಯುವ ಇನ್ನಿಂಗ್ಸ್ ಆಡಿದರು. ಜಾರ್ಜಿಯಾ ಪ್ಲಿಮ್ಮರ್ 39 ರನ್‌ಗಳ ಕೊಡುಗೆ ನೀಡಿದರು. ಇನ್ನುಳಿದ ಯಾವುದೇ ಬ್ಯಾಟರ್‌ಗಳು ತಂಡಕ್ಕೆ ಆಸರೆಯಾಗಲಿಲ್ಲ. ಭಾರತದ ಪರ ಬೌಲರ್‌ಗಳು ನ್ಯೂಜಿಲೆಂಡ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಉಭಯ ತಂಡಗಳ ನಡುವೆ ಮೂರು ಪಂದ್ಯ ಏಕದಿನ ಸರಣಿ ನಡೆಯಿತು. ಮೊದಲ ಪಂದ್ಯವನ್ನು ಭಾರತ ಗೆದ್ದರೆ, ಎರಡನೇ ಪಂದ್ಯದಲ್ಲಿ ಕಿವೀಸ್ ಪಡೆ ಪ್ರಾಬಲ್ಯ ಸಾಧಿಸಿತ್ತು. ಹೀಗಾಗಿ ಮೂರನೇ ಏಕದಿನ ಪಂದ್ಯದ ಗೆಲುವಿನ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಚಾಂಪಿಯನ್ ನ್ಯೂಜಿಲೆಂಡ್ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ತಂಡ ತಿರುಗೇಟು ಕೊಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications