ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಟೆಸ್ಟ್ ನಲ್ಲಿ ಭಾರತ ಕ್ರಿಕೆಟ್ ತಂಡ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಪಂದ್ಯದಲ್ಲಿ ಭಾರತ ಆತಿಥೇಯ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ 146 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಕಡಿಮೆ ಅವಧಿಯ ಟೆಸ್ಟ್ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ನ್ಯೂಲೆಂಡ್ಸ್ ಅಂಗಳದಲ್ಲಿ ಟೀಮ್ ಇಂಡಿಯಾ ದಾಖಲಿಸಿದ ಮೊದಲ ಗೆಲುವು ಇದಾಗಿದೆ.
ಆತಿಥೇಯ ದಕ್ಷಿಣ ಆಫ್ರಿಕಾವನ್ನು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 55 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 176 ರನ್‌ಗಳಿಗೆ ಆಲೌಟ್ ಮಾಡಿತು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್ ಗಳಿಸಿತ್ತು.

ಕೇಪ್ ಟೌನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಎರಡನೇ ಟೆಸ್ಟ್ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಟ ನಡೆಸಿದರು. ಪಂದ್ಯದ ಮೊದಲ ದಿನವೇ 23 ವಿಕೆಟ್‌ಗಳು ಬಿದ್ದವು. ದಕ್ಷಿಣ ಆಫ್ರಿಕಾ ಪರ 13 ಹಾಗೂ ಭಾರತದ ಪರ 10 ವಿಕೆಟ್. ಮೊದಲ ದಿನದಂತೆಯೇ ಎರಡನೇ ದಿನವೂ ಬೌಲರ್‌ಗಳು ಪ್ರಾಬಲ್ಯ ಮೆರೆದರು. ಭಾರತ ಮತ್ತೊಮ್ಮೆ ದಕ್ಷಿಣ ಆಫ್ರಿಕಾವನ್ನು 176 ರನ್‌ಗಳಿಗೆ ಆಲೌಟ್ ಮಾಡಿದೆ.
ಈ ಪಂದ್ಯದಲ್ಲಿ ಭಾರತ ತಂಡ ಹಲವು ದಾಖಲೆಗಳನ್ನು ಮಾಡಿದೆ. ಫಲಿತಾಂಶ ಬಂದ ಅತ್ಯಂತ ಕಡಿಮೆ ಓವರ್ ಟೆಸ್ಟ್ ಪಂದ್ಯ ಇದಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯದಲ್ಲಿ ಒಟ್ಟು 107 ಓವರ್‌ಗಳು ಅಂದರೆ 642 ಎಸೆತಗಳನ್ನು ಬೌಲ್ ಮಾಡಲಾಗಿತ್ತು.
ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ 23.2 ಓವರ್‌ಗಳಿಗೆ ಮತ್ತು ಎರಡನೇ ಇನಿಂಗ್ಸ್ 36.5 ಓವರ್‌ಗಳಿಗೆ ಸೀಮಿತವಾಯಿತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 34.5 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಿತು. ಇದರ ನಂತರ, ಎರಡನೇ ಇನಿಂಗ್ಸ್‌ನಲ್ಲಿ 12 ಓವರ್‌ಗಳನ್ನು ಬ್ಯಾಟ್ ಮಾಡಿತು.

ಇದಕ್ಕೂ ಮೊದಲು, 1932 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಇತಿಹಾಸದಲ್ಲಿ ಫಲಿತಾಂಶ ಬಂದ ಅತ್ಯಂತ ಕಡಿಮೆ ಅವಧಿಯ ಪಂದ್ಯ. ಮೆಲ್ಬೋರ್ನ್‌ನಲ್ಲಿ ನಡೆದ ಈ ಪಂದ್ಯ ಕೇವಲ 109.2 ಓವರ್‌ಗಳಲ್ಲಿ ಅಂದರೆ 656 ಎಸೆತಗಳಲ್ಲಿ ಕೊನೆಗೊಂಡಿತು.
ಈ ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯಾ ಇನಿಂಗ್ಸ್ ಅಂತರದಿಂದ ಗೆದ್ದುಕೊಂಡಿತು. ಕ್ರಿಕೆಟ್‌ನ ಅತ್ಯಂತ ಕಡಿಮೆ ಅವಧಿಯ ಟೆಸ್ಟ್ ಪಂದ್ಯವೆಂದರೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ನಡೆದ ಪಂದ್ಯ. 1907ರ ಈ ಪಂದ್ಯದಲ್ಲಿ ಕೇವಲ 10 ಎಸೆತಗಳನ್ನು ಎಸೆಯಲು ಸಾಧ್ಯವಾಯಿತು. ನಿಸ್ಸಂಶಯವಾಗಿ ಈ ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.