Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾಕ್ಕೆ ಬಹುವಾಗಿ ಕಾಡಿದ ಪೂಜಾರ, ರಹಾನೆ ಅನುಪಸ್ಥಿತಿ

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಟೀಂ ಇಂಡಿಯಾ ಈ ಬಾರಿಯೂ ಟೆಸ್ಟ್ ಸರಣಿ ಗೆಲ್ಲುವ ಕನಸು ಭಗ್ನಗೊಂಡಿದೆ. ಏಕೆಂದರೆ ಭಾರತ ತಂಡ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋತಿದೆ. ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ತಂಡ ಟೀಂ ಇಂಡಿಯಾವನ್ನು ಇನಿಂಗ್ಸ್ ಮತ್ತು 35 ರನ್‌ಗಳಿಂದ ಸೋಲಿಸಿತು.

ಈ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಇಬ್ಬರು ದಿಗ್ಗಜರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆಯನ್ನು ಮಿಸ್ ಮಾಡಿಕೊಂಡಿದೆಯೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಹೇಳುತ್ತಿದ್ದಾರೆ? ಇದೇ ವೇಳೆ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಯುವಕರ ಮೇಲೆ ಹೆಚ್ಚು ಅವಲಂಬಿತರಾಗಿರುವುದು ಟೀಮ್ ಇಂಡಿಯಾಗೆ ದುಬಾರಿಯಾಗಿ ಪರಿಣಮಿಸಿದೆಯೇ ಎಂಬ ನಿರಾಸೆಯೊಂದಿಗೆ ಅಭಿಮಾನಿಗಳ ಮನದಲ್ಲಿ ಮತ್ತೊಂದು ಪ್ರಶ್ನೆ ಮೂಡಿದೆ.

Team India Worries About Pujara and Rahanes Absence

ಪೂಜಾರ ಮತ್ತು ರಹಾನೆ ಮಿಸ್ ?

ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಒಂದು ದಶಕದ ಅನುಭವಿ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಕೈಬಿಟ್ಟಿದ್ದರು. ಏಕೆಂದರೆ ಅವರ ಪ್ರಸ್ತುತ ಫಾರ್ಮ್ ಉತ್ತಮವಾಗಿಲ್ಲ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಗೆ ಪೂಜಾರ ಮತ್ತು ರಹಾನೆ ಬದಲಿಗೆ ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ನೀಡಿತು. ಈ ಇಬ್ಬರೂ ಆಟಗಾರರು ಸೆಂಚುರಿಯನ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೊದಲ ಪಂದ್ಯವನ್ನು ಸೋತ ಟೀಮ್ ಇಂಡಿಯಾ ಅನುಭವಿಗಳಿಗೆ ಮಣೆ ಹಾಕಿದ್ದಕ್ಕೆ ಬೆಲೆ ತೆರಬೇಕಾಯಿತು. ಪೂಜಾರ, ರಹಾನೆ ಅವರಂತಹ ಆಟಗಾರರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಿತು.

ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಬೆಳೆಸಿರುವ ತಂಡವನ್ನು ನೋಡಿದರೆ, ಅನುಭವದ ಕೊರತೆ ಇದೆಯೇ ಎಂಬುದು ಎದ್ದು ಕಾಣುತ್ತದೆ. ಬೆರಳೆಣಿಕೆ ಸ್ಟಾರ್ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ಆಡಿದ ಅನುಭವ ಹೊಂದಿದ್ದು ಬಿಟ್ಟರೆ ಉಳಿದ ಆಟಗಾರರು ಇದೇ ಮೊದಲ ಬಾರಿಗೆ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ.

ಈ ಎಲ್ಲಾ ಪ್ರಶ್ನೆಗಳಿಗೆ ಟೀಮ್ ಇಂಡಿಯಾದ ಕೋಚ್ ಅಥವಾ ನಾಯಕ ರೋಹಿತ್ ಶರ್ಮಾ ಮಾತ್ರ ಸರಿಯಾದ ಉತ್ತರವನ್ನು ನೀಡಬಲ್ಲರು. ಆದರೆ ಪಂದ್ಯವನ್ನು ನೋಡಿದ ನಮಗೆ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಡುವ ಹನ್ನೊಂದರಲ್ಲಿ ಅನುಭವದ ಕೊರತೆಯಿದೆ ಎಂದು ತೋರುತ್ತದೆ. ಪೂಜಾರ ಮತ್ತು ರಹಾನೆ ಮಧ್ಯಮ ಕ್ರಮಾಂಕದಲ್ಲಿ ಇದ್ದಿದ್ದರೆ, ಬಹುಶಃ ಪಂದ್ಯದ ಸ್ಥಿತಿ ಬೇರೆ ಇರುತ್ತಿತ್ತು ಎಂದು ಅನಿಸುತ್ತದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆಯೂ ಪೂಜಾರ ಫಾರ್ಮ್‌ನಲ್ಲಿರಲಿಲ್ಲ, ಆದರೆ ಸಿಡ್ನಿ ಟೆಸ್ಟ್ ಪಂದ್ಯವನ್ನು ಡ್ರಾ ಮಾಡುವಲ್ಲಿ ಮತ್ತು ನಂತರ ಗಬ್ಬಾ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲುವಲ್ಲಿ ಪೂಜಾರ ಪ್ರಮುಖ ಪಾತ್ರ ವಹಿಸಿದ್ದರು. ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲೂ ಅವರು ಅದೇ ಪಾತ್ರವನ್ನು ನಿರ್ವಹಿಸಬಹುದಿತ್ತು.

Team India Worries About Pujara and Rahanes Absence

ಅಜಿಂಕ್ಯ ರಹಾನೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಉಪನಾಯಕನಾಗಿ ತಂಡಕ್ಕೆ ಮರಳಿದರು. ಮತ್ತು ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದರು. WTC ಫೈನಲ್ ನಂತರ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರಹಾನೆ ಕೇವಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ನೀವು ಅವರಿಗೆ ಅವಕಾಶ ನೀಡುವ ಮನಸ್ಥಿತಿ ಇರದಿದ್ದರೆ ಏಕೆ ಕರೆದುಕೊಂಡು ಹೋದಿರಿ. WTC ಫೈನಲ್‌ಗೆ ಅವರನ್ನು ಏಕೆ ಕರೆಯಲಾಯಿತು? ಡಬ್ಲ್ಯುಟಿಸಿ ಫೈನಲ್‌ನಲ್ಲಿ ರಹಾನೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ, ಅವರಿಗೆ ಹೆಚ್ಚಿನ ಅವಕಾಶಗಳನ್ನು ಏಕೆ ನೀಡಲಿಲ್ಲ? ಎಂಬ ಪ್ರಶ್ನೆಗಳು ಎದ್ದಿವೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್ ಮೈದಾನದಲ್ಲಿ ಜೈಸ್ವಾಲ್, ಗಿಲ್, ಶ್ರೇಯಸ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ 4 ಯುವ ಆಟಗಾರರನ್ನು ಒಟ್ಟಿಗೆ ಕಣಕ್ಕೆ ಇಳಿಸುವ ನಿರ್ಧಾರ ಸರಿಯೇ? ಪೂಜಾರ, ರಹಾನೆ ಮತ್ತು ಹನುಮ ವಿಹಾರಿ ಅವರಂತಹ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳ ಆಯ್ಕೆಗಳಿರುವ ತಂಡವನ್ನು ಆಯ್ಕೆ ಸಮಿತಿ ಆಯ್ಕೆ ಮಾಡಲಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ.

Story first published: Friday, December 29, 2023, 9:36 [IST]
Other articles published on Dec 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+