For Quick Alerts
ALLOW NOTIFICATIONS  
For Daily Alerts
 

BCCI Central Contract: ಶ್ರೇಯಸ್, ಇಶಾನ್‌ ಕಡೆಗಣನೆ: ಯುವ ಆಟಗಾರರಿಗೆ ಮಣೆ

ಭಾರತ ಕ್ರಿಕೆಟ್‌ ನಿಯಂತ್ರಣಾ ಮಂಡಳಿ ಬಿಸಿಸಿಐ ತನ್ನ ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಇಬ್ಬರು ಯುವ ಆಟಗಾರರಿಗೆ ಸ್ಥಾನವನ್ನು ನೀಡಿದೆ. ಸೋಮವಾರ ಬಿಸಿಸಿಐ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈ ಗೊಳ್ಳಲಾಗಿದೆ. ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್ ಅವರನ್ನು ಕಡೆಗಣನೆ ಮಾಡಲಾಗಿದ್ದು, ಇವರ ಸ್ಥಾನದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ.

ಈ ಇಬ್ಬರೂ ಹೊಸ ಆಟಗಾರರನ್ನು ಗ್ರೇಡ್ ಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದರ ನಂತರ ಈ ಇಬ್ಬರು ಆಟಗಾರರ ವಾರ್ಷಿಕ ರಿಟೈನರ್‌ಶಿಪ್ ಶುಲ್ಕ 1 ಕೋಟಿ ರೂ. ಆಗಿರುತ್ತದೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಇಬ್ಬರು ಯುವ ಆಟಗಾರರಿಗೆ ಬಿಸಿಸಿಣ ಮನ್ನಣೆಯನ್ನು ನೀಡಿದೆ. ಇಈ ಮೂಲಕ ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಬಿಸಿಸಿಐ ಚಿತ್ತ ನೆಟ್ಟಿದೆ.

Team India young player Sarfaraz Khan Dhruv Jurel get BCCI central contract

ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಸ್ಥಾನ ಪಡೆದವರು ಯಾರು?

ಇತ್ತೀಚೆಗೆ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಈ ಸರಣಿಯನ್ನು ರೋಹಿತ್ ಪಡೆ 4-1ರಿಂದ ಗೆದ್ದು ಕೊಂಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಪರ ಐವರು ಆಟಗಾರರಿಗೆ ಟೆಸ್ಟ್‌ ಆಡುವ ಅವಕಾಶ ನೀಡಲಾಯಿತು.

ಇದರಲ್ಲಿ ಇಬ್ಬರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಇಬ್ಬರಿಗೆ ಅವಕಾಶ ನೀಡಲಾಗಿದೆ. ಈ ಆಟಗಾರರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ತಂಡಕ್ಕೆ ನೆರವಾಗಿದ್ದಾರೆ. ಇದರಲ್ಲಿ ಒಬ್ಬ ಸರ್ಫರಾಜ್ ಖಾನ್ ಮತ್ತು ಇನ್ನೋಬ್ಬ ವಿಕೆಟ್‌ ಕೀಪರ್ ಬ್ಯಾಟರ್ ಧ್ರುವ್ ಜುರೆಲ್.

Team India young player Sarfaraz Khan Dhruv Jurel get BCCI central contract

ಈ ಇಬ್ಬರೂ ಆಟಗಾರರು ತಮ್ಮ ಚೊಚ್ಚಲ ಪಂದ್ಯದಿಂದಲೂ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಸಮಯದಲ್ಲಿ, ಈ ಇಬ್ಬರೂ ಆಟಗಾರರು ಪ್ರಸಕ್ತ ಋತುವಿನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡುವ ಬಿಸಿಸಿಐ ಮಾನದಂಡವನ್ನು ಪೂರೈಸಿದರು. ಇದರಿಂದಾಗಿ ಇದೀಗ ಸರ್ಫರಾಜ್ ಮತ್ತು ಧ್ರುವ್ ಬಿಸಿಸಿಐನ ಕೇಂದ್ರ ಒಪ್ಪಂದಕ್ಕೆ ಸೇರ್ಪಡೆಗೊಂಡಿದ್ದಾರೆ.

ರಣಜಿ ಟ್ರೋಫಿಯಲ್ಲೂ ಬದಲಾವಣೆ

ಮುಂದಿನ ರಣಜಿ ಟ್ರೋಫಿಯ ಬಗ್ಗೆಯೂ ಬಿಸಿಸಿಐ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಿಟಿಐ ವರದಿಯ ಪ್ರಕಾರ, ಮುಂದಿನ ಋತುವಿನಲ್ಲಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಭಾರತದ ಉತ್ತರ ಭಾಗದಲ್ಲಿ ಯಾವುದೇ ರಣಜಿ ಟ್ರೋಫಿ ಪಂದ್ಯಗಳು ಇರುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಉತ್ತರ ಭಾರತದಲ್ಲಿ ಹೆಚ್ಚು ಚಳಿ ಮತ್ತು ಮಂಜು ಇರುತ್ತದೆ. ಇದರಿಂದಾಗಿ ಬೆಳಕು ಕಡಿಮೆಯಾಗಿದ್ದು, ಪಂದ್ಯ ಆಡಲು ಆಟಗಾರರು ತೊಂದರೆ ಎದುರಿಸುತ್ತಿದ್ದಾರೆ.

Team India young player Sarfaraz Khan Dhruv Jurel get BCCI central contract

ರಣಜಿ ಟ್ರೋಫಿಯು ಡಿಸೆಂಬರ್ ಮತ್ತು ಜನವರಿಯಲ್ಲಿ ಪ್ರಾರಂಭವಾಗಿ, ಮಾರ್ಚ್‌ನಲ್ಲಿ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ, ದಟ್ಟವಾದ ಮಂಜು ಮತ್ತು ವಿಪರೀತ ಚಳಿಯಿಂದಾಗಿ ಪಂದ್ಯಾವಳಿಯ ಅನೇಕ ಪಂದ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಗಮನಿಸಿದ ಬಿಸಿಸಿಐ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.

ನೇಪಾಳದಂತಹ ಅನೇಕ ಐಸಿಸಿ ಸಹವರ್ತಿ ರಾಷ್ಟ್ರಗಳು ಅಭ್ಯಾಸ ಪಂದ್ಯಗಳನ್ನು ಆಡಲು ಭಾರತಕ್ಕೆ ಬರಲು ಬಯಸುತ್ತವೆ ಆದರೆ ಈ ದೇಶಗಳು ರಾಜ್ಯ ಸಂಘಗಳೊಂದಿಗೆ ನೇರವಾಗಿ ಮಾತುಕತೆ ನಡೆಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈಗ ಬಿಸಿಸಿಐ ಈ ದೇಶಗಳಿಗೆ ಸಮಿತಿ ರಚಿಸಲು ಮುಂದಾಗಲಿದೆ.

Story first published: Tuesday, March 19, 2024, 10:30 [IST]
Other articles published on Mar 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+