ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಫಿಟ್ನೆಸ್ ಹೋಲಿಕೆ ಕುರಿತು ಭಾರತ ತಂಡದ ಕೋಚ್ ಹೇಳಿದ್ದೇನು?
ಭಾರತೀಯ ಕ್ರಿಕೆಟ್ ತಂಡದಲ್ಲಿ ಫಿಟ್ನೆಸ್ ಯಾವಾಗಲೂ, ಆಯ್ಕೆಯ ಮಾನದಂಡವಾಗಿರಲಿಲ್. ಆದರೆ ದಿನಕಳೆದಂತೆ ಕ್ರಿಕೆಟ್‌ನ ವಿಕಾಸದೊಂದಿಗೆ ಬಹಳಷ್ಟು ಬದಲಾಗಿದೆ. ಫಿಟ್ನೆಸ್ ಪ್ರತಿಯೊಬ್ಬ ಕ್ರೀಡಾಪಟುವಿನ ಆಯ್ಕೆ ಮತ್ತು ಅಭಿವೃದ್ಧಿಗೆ ಪ್ರಮುಖವಾಗಿದೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ವಾದಯೋಗ್ಯವಾಗಿ ಅತ್ಯುತ್ತಮ ಉದಾಹರಣೆಯಾಗಿರುವುದರಿಂದ, ಭಾರತೀಯ ಆಟಗಾರರು ತಮ್ಮ ಫಿಟ್ನೆಸ್‌ಗೆ ಶ್ರಮಿಸುತ್ತಿದ್ದಾರೆ. ಬಿಸಿಸಿಐನ ಯೋ-ಯೋ ಟೆಸ್ಟ್‌ನ ಪರಿಚಯವು ಆಟಗಾರರನ್ನು ಭಾರತ ತಂಡಕ್ಕೆ ಪ್ರವೇಶಿಸಲು ತಮ್ಮ ಫಿಟ್ನೆಸ್‌ನಲ್ಲಿ ಕೆಲಸ ಮಾಡಲು ಒತ್ತಾಯಿಸಿದೆ.

ಆದಾಗ್ಯೂ, ಫಿಟ್ನೆಸ್ ವಿಷಯದಲ್ಲಿ ಪ್ರಸ್ತುತ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಹೆಚ್ಚಾಗಿ ಚರ್ಚೆ ನಡೆಸುತ್ತಾರೆ. ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದರೂ, ಕ್ರಿಕೆಟ್‌ನಲ್ಲಿ ಇನ್ನೂ 3-4 ವರ್ಷ ಉಳಿಯಬೇಕಾದರೆ, ಫಿಟ್ನೆಸ್ ವಿಷಯದಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಳುತ್ತಾರೆ.
ಆದರೆ, ಭಾರತ ತಂಡದ ಸ್ಟ್ರೆಂಥ್ ಅಂಡ್ ಕಂಡೀಷನಿಂಗ್ ಕೋಚ್ ಅಂಕಿತ್ ಕಲಿಯಾರ್ ಪ್ರಕಾರ, ರೋಹಿತ್ ಶರ್ಮಾ ಕೂಡ ವಿರಾಟ್ ಕೊಹ್ಲಿಯಂತೆಯೇ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.
"ರೋಹಿತ್ ಶರ್ಮಾ ಒಬ್ಬ ಫಿಟ್ ಆಟಗಾರ. ಅವರು ಉತ್ತಮ ಫಿಟ್ನೆಸ್ ಹೊಂದಿದ್ದಾರೆ. ಅವರು ಸ್ವಲ್ಪ ದಪ್ಪವಾಗಿ ಕಾಣುತ್ತಾರೆ ಆದರೆ ಅವರು ಯಾವಾಗಲೂ ಯೋ-ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಅವರು ವಿರಾಟ್ ಕೊಹ್ಲಿಯಂತೆ ಫಿಟ್ ಆಗಿದ್ದಾರೆ," ಎಂದರು.

"ರೋಹಿತ್ ದೊಡ್ಡವನಂತೆ ಕಾಣುತ್ತಾನೆ, ಆದರೆ ನಾವು ಆತನನ್ನು ಮೈದಾನದಲ್ಲಿ ನೋಡಿದ್ದೇವೆ. ಅವರ ಚುರುಕುತನ ಮತ್ತು ಚಲನಶೀಲತೆ ಅದ್ಭುತವಾಗಿದೆ. ಅವರು ಫಿಟ್ಟೆಸ್ಟ್ ಕ್ರಿಕೆಟಿಗರಲ್ಲಿ ಒಬ್ಬರು," ಎಂದು ಅಂಕಿತ್ ಕಲಿಯಾರ್ ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾ, ಭಾರತ ತಂಡದ ಫಿಟ್ನೆಸ್ ಸಂಸ್ಕೃತಿಯಲ್ಲಿ ಬದಲಾವಣೆ ತಂದವರು ಸೂಪರ್‌ಸ್ಟಾರ್ ಬ್ಯಾಟರ್ ಎಂದು ಒಪ್ಪಿಕೊಳ್ಳಲು ಅಂಕಿತ್ ಕಲಿಯಾರ್ ಯಾವುದೇ ಹಿಂಜರಿಕೆ ಹೊಂದಲಿಲ್ಲ.
"ಫಿಟ್ನೆಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಉದಾಹರಣೆಯಾಗಿದ್ದಾರೆ. ಅವರು ತಂಡದಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಸೃಷ್ಟಿಸಿದ್ದಾರೆ. ನಿಮ್ಮ ಅಗ್ರ ಆಟಗಾರ ಎಷ್ಟು ಫಿಟ್ ಆಗಿದ್ದಾರೋ ಆಗ ನೀವು ಇತರರಿಗೆ ಮಾದರಿಯಾಗುತ್ತೀರಿ. ಆತ ಇತರರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾನೆ," ಎಂದು ಅಂಕಿತ್ ಕಲಿಯಾರ್ ತಿಳಿಸಿದರು.
"ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ಎಲ್ಲರೂ ಫಿಟ್ ಆಗಿರುವಂತೆ ನೋಡಿಕೊಂಡರು. ತಂಡದಲ್ಲಿ ಫಿಟ್ನೆಸ್ ಅವರ ಪ್ರಮುಖ ಮಾನದಂಡವಾಗಿತ್ತು. ಆ ಸಂಸ್ಕೃತಿ ಮತ್ತು ಶಿಸ್ತನ್ನು ತಂಡದಲ್ಲಿ ಮೂಡಿಸಿದ್ದಾರೆ. ಆ ವಾತಾವರಣವನ್ನು ವಿರಾಟ್ ಭಾಯ್ ಸೃಷ್ಟಿಸಿದ್ದು ಶ್ಲಾಘನೀಯ ಸಂಗತಿ. ಭಾರತದ ಎಲ್ಲ ಆಟಗಾರರು ಫಿಟ್ ಆಗಿರಲು ಅವರೇ ಕಾರಣ," ಎಂದು ಭಾರತ ತಂಡದ ಸ್ಟ್ರೆಂಥ್ ಅಂಡ್ ಕಂಡೀಷನಿಂಗ್ ಕೋಚ್ ಅಂಕಿತ್ ಕಲಿಯಾರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿಯನ್ನು ಬ್ಯಾಟರ್‌ನ ದೃಷ್ಟಿಕೋನದಿಂದ ಮಾತ್ರವಲ್ಲದೆ, ಫಿಟ್‌ನೆಸ್ ದೃಷ್ಟಿಕೋನದಿಂದಲೂ ಸ್ಪೂರ್ತಿ ಎಂದು ಶುಭ್ಮನ್ ಗಿಲ್ ನೋಡುತ್ತಾರೆ ಎಂದು ಭಾರತ ತಂಡದ ಕೋಚ್ ಬಹಿರಂಗಪಡಿಸಿದರು.
"ಶುಭ್ಮನ್ ಗಿಲ್ ತುಂಬಾ ಫಿಟ್ ಆಗಿರುವ ಆಟಗಾರ. ಕೇವಲ ಫಿಟ್ ಅಲ್ಲದೆ, ಆತ ತುಂಬಾ ಕೌಶಲ್ಯಪೂರ್ಣ ಆಟಗಾರರಾಗಿದ್ದಾರೆ. ಶುಭ್ಮನ್ ಗಿಲ್ ಯಾವಾಗಲೂ ವಿರಾಟ್ ಭಾಯ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದು ಬ್ಯಾಟಿಂಗ್, ಫಿಟ್ನೆಸ್ ಅಥವಾ ಕೌಶಲ್ಯವಾಗಿರಲಿ, ಶುಭ್ಮನ್ ವಿರಾಟ್ ಭಾಯಿಯನ್ನು ಅನುಸರಿಸುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಶುಭ್ಮನ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನನಗೆ ಖಾತ್ರಿಯಿದೆ," ಎಂದು ಅಂಕಿತ್ ಕಲಿಯಾರ್ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications