ಟೀಮ್ ಇಂಡಿಯಾಗೆ ಮುಂದಿನ ಸರಣಿ ಯಾವುದು? ಇಲ್ಲಿದೆ ವೇಳಾ ಪಟ್ಟಿ
ಬಹು ನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಮುಕ್ತಾಯವಾಗಿದೆ. ಟೀಮ್ ಇಂಡಿಯಾ ಈ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಆಂಡರ್ಸನ್, ತೆಂಡುಲ್ಕರ್ ಸರಣಿಯನ್ನು 2-2 ರಿಂದ ಸಮನಾಗಿಸಿದೆ. ಈ ಸರಣಿಯಲ್ಲಿ ಯಂಗ್ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿದ್ದು, ಎಲ್ಲರ ಚಿತ್ತವನ್ನು ಕದ್ದಿದೆ. ಈಗ ಅಭಿಮಾನಿಗಳ ಮುಂದಿರುವ ಪ್ರಶ್ನೆ, ಟೀಮ್ ಇಂಡಿಯಾ ಇನ್ನು ಯಾವಾಗ ಮೈದಾನಕ್ಕೆ ಇಳಿಯುತ್ತದೆ ಎಂಬುದಾಗಿದೆ.
ಓವಲ್ ಅಂಗಳದಲ್ಲಿ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. ಕೊನೆಯ ಟೆಸ್ಟ್ ಪಂದ್ಯವನ್ನು 6 ರನ್‌ಗಳಿಂದ ಗೆಲ್ಲುವ ಮೂಲಕ ಟೀಮ್ ಇಂಡಿಯಾ ದಾಖಲೆ ಬರೆದಿದೆ. ಸುಮಾರು ಒಂದು ವರೆ ತಿಂಗಳಿಗೂ ಹೆಚ್ಚು ಕಾಲ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಟೀಮ್ ಇಂಡಿಯಾ, ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿತ್ತು. ಈಗ ಟೀಮ್ ಇಂಡಿಯಾದ ಆಟಗಾರರು ಮೈದಾನಕ್ಕೆ ಇಳಿಯುವುದು ಯಾವಾಗ ಎಂಬ ಪ್ರಶ್ನೆಗಳು ಎದ್ದಿವೆ.

ಟೀಮ್ ಇಂಡಿಯಾ ಆಟಗಾರರ ಮುಂದೆ ಮುಂದಿನ ದೊಡ್ಡ ಸವಾಲು ಏಷ್ಯಾ ಕಪ್ ಆಗಿದೆ. ಈ ಬಾರಿಯ ಏಷ್ಯಾ ಕಪ್‌ನ್ನು ಭಾರತ ಆಯೋಜಿಸಲಿದ್ದು, ಎಲ್ಲ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಈ ಬಾರಿ ಏಷ್ಯಾ ಕಪ್‌ನ್ನು ಟಿ20 ಸ್ವರೂಪದಲ್ಲಿ ಆಡಿಸಲು ನಿರ್ಧರಿಸಲಾಗಿದೆ. ಈ ಮೆಗಾ ಟೂರ್ನಿ ಸೆಪ್ಟೆಂಬರ್‌ನಲ್ಲಿ ಆರಂಭವಾಗಿವೆ. ಭಾರತ ಈ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಸೆಪ್ಟಂಬರ್ 10 ರಂದು ಆಡಲಿದೆ. ಈ ಪಂದ್ಯದಲ್ಇ ಆತಿಥೇಯ ಭಾರತ ಯುಎಇ ವಿರುದ್ಧ ಕಾದಾಟವನ್ನು ನಡೆಸಲಿದೆ.
ಬಿಗ್ ಫೈಟ್ ಮೇಲೆ ಎಲ್ಲರ ಕಣ್ಣು
ಏಷ್ಯಾ ಕಪ್ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಈ ವೇಳೆ ಎರಡು ಗುಂಪುಗಳಲ್ಲಿ ತಂಡವನ್ನು ವಿಂಗಡಿಸಲಾಗಿದೆ. ಭಾರತ,ಪಾಕಿಸ್ತಾನ, ಯುಎಇ ಮತ್ತು ಓಮನ್ "ಎ" ಗುಂಪಿನಲ್ಲಿ ಸ್ಥಾನ ಪಡೆದರೆ, ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಸೇರಿವೆ. ಭಾರತ ಈ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧವೂ ಕಾದಾಟವನ್ನು ನಡೆಸಲಿದೆ. ಈ ಬಿಗ್ ಫೈಟ್ ಸೆಪ್ಟಂನರ್ 14 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಿದ್ಧವಾಗಲಿದೆ. ಈ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬ್ಲ್ಯೂ ಬಾಯ್ಸ್ ತನ್ನ ಲೀಗ್ ಹಂತದ ಮೂರನೇ ಪಂದ್ಯವನ್ನು ಓಮನ್ ವಿರುದ್ಧ ಆಡಲಿದೆ.
ಸೂಪರ್ 4
ಎರಡು ಗುಂಪುಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಅಗ್ರ 2 ಸ್ಥಾನ ಪಡೆಯುವ ತಂಗಳು ಸೂಪರ್ 4ರಲ್ಲಿ ಮುಖಾಮುಖಿ ಆಗಲಿವೆ. ಈ ಹಂತದಲ್ಲೂ ಪ್ರತಿ ತಂಡಕ್ಕೆ ತಲಾ ಮೂರು ಪಂದ್ಯಗಳು ಸಿಗಲಿದ್ದು, ಅಂಕ ಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಫೈನಲ್‌ಗೆ ಪ್ರವೇಶ ಪಡೆಯುತ್ತವೆ. ಫೈನಲ್ ಸೆ.28ಕ್ಕೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications