Team India Schedule 2025: ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ..
ಭಾರತ ಕ್ರಿಕೆಟ್ ತಂಡ 2024ರ ವರ್ಷದಲ್ಲಿ ಹಲವು ಅದ್ಭುತ ಸಾಧನೆಗಳನ್ನು ಮಾಡಿದೆ. ಈ ವರ್ಷ ಭಾರತ ತಂಡ ಸೋಲು-ಗೆಲುವು ಎರಡನ್ನೂ ನೋಡಿದೆ. ಒಂದೆಡೆ, ಭಾರತ 11 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದಿದೆ. ಮತ್ತೊಂದೆಡೆ 2012ರ ನಂತರ ಮೊದಲ ಬಾರಿಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಸೋತಿದೆ. ಇದೀಗ 2025ರಲ್ಲೂ ಟೀಮ್ ಇಂಡಿಯಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದೆ. 2025ರ ವರ್ಷ ಭಾರತ ತಂಡಕ್ಕೆ ಬಹಳ ವಿಶೇಷವಾಗಿದ್ದು, 2 ಐಸಿಸಿ ಟ್ರೋಫಿಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ.
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ 2025ರ ಹೊಸ ವರ್ಷವನ್ನು ಆರಂಭಿಸಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯವು ಜನವರಿ 3-7 ರ ನಡುವೆ ಸಿಡ್ನಿಯಲ್ಲಿ ನಡೆಯಲಿದೆ. ಇದಾದ ನಂತರ, ಭಾರತ ತಂಡವು ವೈಟ್-ಬಾಲ್ ಸರಣಿಯಲ್ಲಿ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲಿದೆ. 12 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಜ್ಜಾಗಿರುವ ಭಾರತ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ದುಬೈನಲ್ಲಿ ಆಡಲಿದೆ. ಇದಲ್ಲದೆ, 2025ರ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತಕ್ಕೆ ಇಂಗ್ಲೆಂಡ್ ಪ್ರವಾಸ
ಭಾರತ vs ಇಂಗ್ಲೆಂಡ್ ಟಿ20 ಸರಣಿ
ಮೊದಲನೇ ಟಿ20 ಪಂದ್ಯ: 22 ಜನವರಿ 2025, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಎರಡನೇ ಟಿ20 ಪಂದ್ಯ: 25 ಜನವರಿ 2025, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಮೂರನೇ ಟಿ20 ಪಂದ್ಯ: 28 ಜನವರಿ 2025, ರಾಜ್‌ಕೋಟ್,ಗುಜರಾತ್
ನಾಲ್ಕನೇ ಟಿ20 ಪಂದ್ಯ: 31 ಜನವರಿ 2025, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಪುಣೆ
ಐದನೇ ಟಿ20 ಪಂದ್ಯ: 2 ಫೆಬ್ರವರಿ 2025, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ಇಂಗ್ಲೆಂಡ್ ಏಕದಿನ ಸರಣಿ
ಮೊದಲನೇ ಏಕದಿನ ಪಂದ್ಯ: 6 ಫೆಬ್ರವರಿ 2025, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ನಾಗ್ಪುರ ಎರಡನೇ ಏಕದಿನ ಪಂದ್ಯ: 9 ಫೆಬ್ರವರಿ 2025, ಬಾರಾಬತಿ ಸ್ಟೇಡಿಯಂ, ಕಟಕ್
ಮೂರನೇ ಏಕದಿನ ಪಂದ್ಯ: 12 ಜನವರಿ 2025, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ ತಂಡದ ಐಸಿಸಿ ಟೂರ್ನಿ ಪಂದ್ಯಗಳು
ಭಾರತ vs ಬಾಂಗ್ಲಾದೇಶ : 20 ಫೆಬ್ರವರಿ 2025, ದುಬೈ
ಭಾರತ vs ಪಾಕಿಸ್ತಾನ: 23 ಫೆಬ್ರವರಿ 2025, ದುಬೈ
ಭಾರತ vs ನ್ಯೂಜಿಲೆಂಡ್: 2 ಮಾರ್ಚ್ 2025, ದುಬೈ
ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್: 4 ಮಾರ್ಚ್ 2025, ದುಬೈ (ಅರ್ಹತೆ ಪಡೆದರೆ)
ಚಾಂಪಿಯನ್ಸ್ ಟ್ರೋಫಿ ಫೈನಲ್: ಮಾರ್ಚ್ 9 2025, ದುಬೈ (ಅರ್ಹತೆ ಪಡೆದರೆ)
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್): 14 ಮಾರ್ಚ್ - 25 ಮೇ 2025
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್: 11-15 ಜೂನ್ 2025, ಲಂಡನ್ (ಅರ್ಹತೆ ಪಡೆದರೆ)
ಇಂಗ್ಲೆಂಡ್‌ಗೆ ಭಾರತ ಪ್ರವಾಸ
ಮೊದಲ ಟೆಸ್ಟ್ ಪಂದ್ಯ: ಜೂನ್ 20-ಆಗಸ್ಟ್ 4 ಹೆಡಿಂಗ್ಲಿ, ಲೀಡ್ಸ್
ಎರಡನೇ ಟೆಸ್ಟ್ ಪಂದ್ಯ: ಜುಲೈ 2-6, ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
ಮೂರನೇ ಟೆಸ್ಟ್ ಪಂದ್ಯ: ಜುಲೈ 10-14, ಲಾರ್ಡ್ಸ್, ಲಂಡನ್
ನಾಲ್ಕನೇ ಟೆಸ್ಟ್ ಪಂದ್ಯ: 23-27 ಜುಲೈ, ಮ್ಯಾಂಚೆಸ್ಟರ್
ಐದನೇ ಟೆಸ್ಟ್: 31 ಜುಲೈ-4 ಆಗಸ್ಟ್, ಓವಲ್
ಟಿ20 ಏಷ್ಯಾಕಪ್ 2025, ಭಾರತ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications