ಈ ವರ್ಷ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾದ ಪ್ರಾಬಲ್ಯ ಮುಂದುವರಿದಿದ್ದು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಮಾಡಿದೆ. ಟೀಮ್ ಇಂಡಿಯಾದ ಈ ಪ್ರದರ್ಶನ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಶ್ರೀಲಂಕಾವನ್ನು ಕೇವಲ 50 ರನ್‌ಗಳಿಗೆ ಆಲೌಟ್ ಮಾಡಿದ ಕೆಲವೇ ವಾರಗಳ ಅಂತರದಲ್ಲಿ ಮತ್ತೊಮ್ಮೆ ಅಂಥಾದ್ದೇ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.
ಟೀಮ್ ಇಂಡಿಯಾದ ಬೃಹತ್ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಭಾರತದ ವೇಗಿಗಳು ಮತ್ತೊಮ್ಮೆ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದ ಪ್ರದರ್ಶನದ ನೆನಪನ್ನು ಮರುಕಳಿಸುವಂತೆ ಮಾಡಿದರು. ಸೆಪ್ಟೆಂಬರ್ 17ರಂದು ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ 50 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗವನ್ನು ಅನುಭವಿಸಿತ್ತು.

ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಏಳು ಓವರ್‌ಗಳಲ್ಲಿ ಕೇವಲ 21 ರನ್ ನೀಡಿ ಆರು ವಿಕೆಟ್ ಕಬಳಿಸುವ ಮೂಲಕ ಲಂಕಾ ಪಾಲಿಗೆ ವಿಧ್ವಂಸಕರಾಗಿದ್ದರು. ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 2.2 ಓವರ್‌ಗಳಲ್ಲಿ ಕೇವಲ ಮೂರು ರನ್‌ಗಳನ್ನು ಬಿಟ್ಟುಕೊಟ್ಟು ಮೂರು ವಿಕೆಟ್ ಪಡೆದರು. ಇನ್ನು ಜಸ್ಪ್ರೀತ್ ಬುಮ್ರಾ ಕುಸಾಲ್ ಪೆರೆರಾ ಅವರ ವಿಕೆಟ್ ಪಡೆದುಕೊಂಡಿದ್ದರು. ಅಂದು ಭಾರತ ಭಾರತವು ಶ್ರೀಲಂಕಾವನ್ನು 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಆಲೌಟ್ ಮಾಡಿದ್ದು ಆ ಪಂದ್ಯವನ್ನು 10 ವಿಕೆಟ್‌ಗಳ ಅಂತರದಿಂದ ಗೆದ್ದು ಚಾಂಪಿಯನ್ ಪಟ್ಟಕ್ಕೇರಿಸಿಕೊಂಡಿತ್ತು.
ಮತ್ತೊಮ್ಮೆ ಲಂಕಾ ಪಡೆಯನ್ನು ಧ್ವಂಸಗೊಳಿಸಿದ ಭಾರತೀಯ ವೇಗಿಗಳು
ಇನ್ನು ವಿಶ್ವಕಪ್‌ನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಭರ್ಜರಿ 357/8 ರನ್‌ಗಳನ್ನು ಗಳಿಸಿ ಬೃಹತ್ ಸವಾಲು ಮುಂದಿಟ್ಟಿತ್ತು. ಈ ಮೊತ್ತವನ್ನು ಬೆನ್ನಟ್ಟಲು ಇಳಿದ ಶ್ರೀಲಂಕಾ ತಂಡ ಕೇವಲ 55 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶರಣಾಗಿದೆ.
ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಶ್ರೀಲಂಕಾದ ಆರಂಭಿಕ ಆಟಗಾರ ಫಾತುಮ್ ನಿಸ್ಸಾಂಕ ಅವರನ್ನು ಔಟ್ ಮಾಡಿ ಅದ್ಭುತ ಆರಂಭವನ್ನು ಒದಗಿಸಿದರು. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಅದಾದ ಬಳಿಕ ಶ್ರೀಲಂಕಾಗೆ ಮತ್ತಷ್ಟು ಆಘಾತ ನೀಡಿದ್ದು ಮೊಹಮ್ಮದ್ ಸಿರಾಜ್. ಎರಡನೇ ಓವರ್‌ನಲ್ಲಿ ದಿಮುತ್ ಕರುಣರತ್ನೆ ಮತ್ತು ಸದೀರ ಸಮರವಿಕ್ರಮ ಅವರ ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಲಂಕಾ ಪಡೆಯ ಮಧ್ಯಮ ಕ್ರಮಾಂಕವನ್ನು ಪುಡಿಗಟ್ಟುವ ಮುನ್ನ ಸಿರಾಜ್ ತನ್ನ ಮುಂದಿನ ಓವರ್‌ನಲ್ಲಿ ಕುಸಾಲ್ ಮೆಂಡಿಸ್ ಅವರನ್ನು ಔಟ್ ಮಾಡಿದರು.
ನಂತರ ಶಮಿ ತಮ್ಮ ಮೊದಲ ಓವರ್‌ನಲ್ಲಿಯೇ ಎರಡು ವಿಕೆಟ್ ಕಬಳಿಸಿ ಅಬ್ಬರಿಸಿದರು. ಈ ಮೂಲಕ ಈ ಮೂಲಕ ಮೊದಲ 10 ಓವರ್ ಮುಗಿಯುವ ವೇಳೆಗೆ ಶ್ರೀಲಂಕಾ ಕೇವಲ 14 ರನ್‌ಗಳನ್ನು ಗಳಿಸಿ 6 ವಿಕೆಟ್ ಕಳೆದುಕೊಂಡು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿತ್ತು. ಅಂತಿಮವಾಗಿ ಶನಿ ಈ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ