For Quick Alerts
ALLOW NOTIFICATIONS  
For Daily Alerts
 

ನಡೆಯದ ಸ್ಟಾರ್‌ಗಳ ದಾದಾಗಿರಿ: ತಂಡದಲ್ಲಿದೆ "ಗಂಭೀರ" ಸಮಸ್ಯೆ

ಭಾರತ ಪ್ರಸಕ್ತ ವರ್ಷ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ಕೊಂಚ ಎಡವಿದೆ. ಐಸಿಸಿ ಪ್ರಶಸ್ತಿಯ ಬರವನ್ನು ನೀಗಿಸಿದೆ ಎಂಬ ಸಮಾಧಾನವನ್ನು ಬಿಟ್ಟರೆ, ಟೀಮ್ ಇಂಡಿಯಾ ಪುರುಷರ ಕ್ರಿಕೆಟ್‌ ತಂಡದ ಸಾಧನೆ ಅಷ್ಟೋಂದು ತೃಪ್ತಿದಾಯಕವಿಲ್ಲ. ಪ್ರಸಕ್ತ ವರ್ಷದಲ್ಲಿ ಟೀಮ್ ಇಂಡಿಯಾ ಹಲವು ಟೂರ್ನಿಗಳಲ್ಲಿ ಭಾಗವಹಿಸಿದ್ದು, ಈ ವೇಳೆ ಭಾರತ, ಸಿಹಿಗಿಂತಲೂ ಕಹಿಯನ್ನೇ ಹೆಚ್ಚಾಗಿ ಕಂಡಿದೆ. ಟೀಮ್ ಇಂಡಿಯಾದ ಆಟಗಾರರಿಗೆ ಚುಚ್ಚಿದ ಕಲ್ಲು ಮುಳ್ಳುಗಳ ಬಗ್ಗೆ ವರದಿ ಇಲ್ಲಿದೆ.

ಭಾರತ ಈ ವರ್ಷ 17 ವರ್ಷಗಳ ಬಳಿಕ ಐಸಿಸಿ ಟಿ20 ವಿಶ್ವಕಪ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಈ ವೇಳೆ ಟೀಮ್ ಇಂಡಿಯಾ ಇಡೀ ಟೂರ್ನಿಯಲ್ಲಿ ಮನಮೋಹಕ ಪ್ರದರ್ಶನ ನೀಡಿತು. ಅಲ್ಲದೆ ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್‌ ಓವರ್‌ನಲ್ಲಿ ಮಣಿಸಿ, ಟೀಮ್ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಒಂದು ಸಿಹಿ ಘಟನೆಯನ್ನು ಉಳಿದೆಲ್ಲಾ, ಟೂರ್ನಿಗಳಲ್ಲೂ ಬರೀ ಕಹಿ ಘಟನೆಗಳೇ ಇವೆ.

Team India s Mixed Year ICC T20 Glory Amidst Bitter Memories in 2024

ಪ್ರಸಕ್ತ ವರ್ಷ ಟೀಮ್ ಇಂಡಿಯಾ ಕಹಿ ನೆನಪು

ಟಿ20 ವಿಶ್ವಕಪ್‌ ಬಳಿಕ ಟೀಮ್ ಇಂಡಿಯಾ, ಶ್ರೀಲಂಕಾ ಪ್ರವಾಸವನ್ನು ಮಾಡಿತು. ಈ ವೇಳೆ ಟೀಮ್ ಇಂಡಿಯಾ 27 ವರ್ಷಗಳ ಬಳಿಕ ಶ್ರೀಲಂಕಾ ವಿರುದ್ಧದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಸೋಲು ಕಂಡಿತು. ಇನ್ನು ಪ್ರಸಕ್ತ ವರ್ಷ ಯಾವುದೇ ಏಕದಿನ ಪಂದ್ಯವನ್ನು ಗೆದ್ದಿಲ್ಲ. ಈ ರೀತಿಯಾಗಿದ್ದು, ಸುಮಾರು 45 ವರ್ಷಗಳಲ್ಲಿ ಮೊದಲ ಬಾರಿಗೆ ಆಗಿದೆ.

ಟೀಮ್ ಇಂಡಿಯಾ ಟೆಸ್ಟ್‌ ಸರಣಿಯ ವೇಳೆ ಯಾವಾಗಲು ತವರಿನಲ್ಲಿ ಆರ್ಭಟ ನಡೆಸುತ್ತಲೇ ಇರುತ್ತಿತ್ತು. ಆದರೆ ಟೀಮ್ ಇಂಡಿಯಾ ಇದೆ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಕಡಿಮೆ (46 ರನ್‌) ಮೊತ್ತಕ್ಕೆ ಆಲೌಟ್ ಆಯಿತು. ಇನ್ನು ಟೀಮ್ ಇಂಡಿಯಾ 36 ವರ್ಷಗಳ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಹೀನಾಯ ಸೋಲು ಕಂಡಿತು.

Team India s Mixed Year ICC T20 Glory Amidst Bitter Memories in 2024

ತವರಿನಲ್ಲಿ ತೀವ್ರ ಮುಖಭಂಗ

ಟೀಮ್ ಇಂಡಿಯಾ 19 ವರ್ಷಗಳ ಬಳಿಕ ಮೊದಲ ಬಾರಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಸೋಲು ಕಂಡಿತು. ಇನ್ನು ಟೀಮ್ ಇಂಡಿಯಾ 12 ವರ್ಷಗಳ ನಂತರ ತವರಿನ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿದೆ. ಭಾರತ ಮುಂಬೈನ ವಾಂಖೇಡೆಯಲ್ಲಿ ನಡೆದ ನ್ಯೂಜಿಲೆಡ್‌ ವಿರುದ್ಧದ ಟೆಸ್ಟ್‌ನಲ್ಲಿ ಸೋಲು ಕಂಡಿತು. ಅಲ್ಲದೆ ತವರಿನಲ್ಲಿ 24 ವರ್ಷಗಳ ಬಳಿಕ ಟೆಸ್ಟ್‌ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲು ಕಂಡಿತ್ತು.

ನಾಲ್ಕು ದಶಕಗಳ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷ ನಾಲ್ಕು ಟೆಸ್ಟ್ ಪಂದ್ಯಗಳನ್ನು ಸೋಲು ಕಂಡಿತು.

10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್‌ ಟ್ರೋಫಿಯಲ್ಲಿ 2 ಸೋಲು ಕಂಡಿತು. ಅಲ್ಲದೆ 12 ವರ್ಷಗಳ ನಂತರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್‌ನಲ್ಲಿ ಸೋಲು ಕಂಡು ಮುಖಭಂಗ ಅನುಭವಿಸಿತು.

Story first published: Tuesday, December 31, 2024, 8:30 [IST]
Other articles published on Dec 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+