Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇನ್ನು 8 ತಿಂಗಳು ಬಳಿಕ ಟೆಸ್ಟ್‌ ಆಡಲಿರುವ ಭಾರತ: ಇಲ್ಲಿದೆ ಮುಂದಿನ ವರ್ಷದ ವೇಳಾ ಪಟ್ಟಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ಮುಗಿದಿದೆ. ತವರಿನಲ್ಲಿ ನಡೆದ ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಭಾರತ ಹೀನಾಯ ಪ್ರದರ್ಶನ ನೀಡಿ ಸೋಲು ಕಂಡಿದೆ. ಈ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸೋಲನ್ನು ಕಂಡಿರುವ ಭಾರತ ಟೀಕೆಗೆ ಗುರಿಯಾಗಿದೆ. ಭಾರತ ತಂಡದ ಪ್ರದರ್ಶನವನ್ನು ಮಾಜಿ ಆಟಗಾರರು ಟೀಕಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಯುವ ಆಟಗಾರರು ತಮ್ಮ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಭಾರತ ತಂಡ ಇನ್ನು ಮುಂದಿನ ಸರಣಿಯತ್ತ ತನ್ನ ದೃಷ್ಟಿ ನೆಟ್ಟಿದೆ. ಭಾರತ ಇನ್ನು ಯಾವಾಗ ಟೆಸ್ಟ್‌ ಕ್ರಿಕೆಟ್‌ ಆಡಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾ ತನ್ನ ಮುಂದಿನ ಟೆಸ್ಟ್ ಪಂದ್ಯವನ್ನು ಆಡಲು ಇನ್ನು 8 ತಿಂಗಳು ಬೇಕಾಗುತ್ತದೆ. ಈ ಅವಧಿಯಲ್ಲಿ ಭಾರತ ತಂಡ ಸಾಲು ಸಾಲು ಸೀಮಿತ ಓವರ್‌ಗಳ ಪಂದ್ಯವನ್ನು ಆಡಲಿದೆ. ಟೀಮ್ ಇಂಡಿಯಾ ಮುಂದಿನ ವರ್ಷದ ಜೂನ್‌ನಲ್ಲಿ ಮತ್ತೆ ಬಿಳಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಅದಾಗ್ಯೂ ಈ ಟೆಸ್ಟ್‌ ಪಂದ್ಯ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ 2025-27ರ ಭಾಗವಾಗಿಲ್ಲ. ಭಾರತ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್‌ ಆಡಲಿದೆ.

Team India s Next Test Match Schedule Opponents and WTC Fixtures Revealed

ಟೀಮ್ ಇಂಡಿಯಾ ಮುಂದಿನ ವರ್ಷವನ್ನು ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಸರಣಿಯೊಂದಿಗೆ ಆರಂಭಿಸಲಿದೆ. ಈ ಅವಧಿಯಲ್ಲಿ ಉಭಯ ತಂಡಗಳ ನಡುವಣ ಮೊದಲ ಪಂದ್ಯ ಜನವರಿ 11 ನಡೆಯಲಿದೆ. ಈ ವೇಳೆ ಪ್ರವಾಸಿ ತಂಡ 3 ಪಂದ್ಯಗಳ ಏಕದಿನ ಸರಣಿ ಮತ್ತು 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಬಳಿಕ ಭಾರತ ಫೆಬ್ರವರಿ ಹಾಗೂ ಮಾರ್ಚನಲ್ಲಿ ಶ್ರೀಲಂಕಾದೊಂದಿಗೆ ಜಂಟಿಯಾಗಿ ಟಿ20 ವಿಶ್ವಕಪ್‌ ಆಯೋಜಿಸಲಿದೆ. ಮುಂದಿನ ವರ್ಷ ಭಾರತ ಎರಡು ಟೆಸ್ಟ್ ಸರಣಿಗಳನ್ನು ಮಾತ್ರ ಆಡಲಿದೆ.

ಭಾರತ ಶ್ರೀಲಂಕಾ ಪ್ರವಾಸದಲ್ಲಿ ಟೆಸ್ಟ್‌ ಸರಣಿಯನ್ನು ಆಡಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಭಾಗವಾಗಿದ್ದು, ಈ ಸರಣಿಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಈ ಬಳಿಕ ಭಾರತ ಭಾರತ ತಂಡ ಅಕ್ಟೋಬರ್-ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ, ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಹಾಗೂ ODI ಮತ್ತು T20I ಸರಣಿಯನ್ನು ಆಡಲಿದೆ.

Team India s Next Test Match Schedule Opponents and WTC Fixtures Revealed

ಮುಂದಿನ ವರ್ಷದ ಭಾರತದ ವೇಳಾ ಪಟ್ಟಿ

ತಿಂಗಳು ವೇಳಾ ಪಟ್ಟಿ
ಜನವರಿ ನ್ಯೂಜಿಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳು, 5 ಟಿ20 ಪಂದ್ಯ
ಫೆಬ್ರವರಿ 7 - ಮಾರ್ಚ್ 8, 2026 ಟಿ20 ವಿಶ್ವಕಪ್
ಜೂನ್ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್
ಜುಲೈ ಇಂಗ್ಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳು, 5 ಟಿ20 ಪಂದ್ಯ
ಆಗಸ್ಟ್ ಶ್ರೀಯಲಂಕಾ ವಿರುದ್ಧ 2 ಟೆಸ್ಟ್
ಸೆಪ್ಟೆಂಬರ್ ಅಫ್ಘಾನಿಸ್ತಾನ ವಿರುದ್ಧ 3 ಟಿ20
ಸೆಪ್ಟೆಂಬರ್ - ಅಕ್ಟೋಬರ್ ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ, 5 ಟಿ20 ಪಂದ್ಯ
ಅಕ್ಟೋಬರ್ - ನವೆಂಬರ್ ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್
ಡಿಸೆಂಬರ್ 2026 ಶ್ರೀಯಲಂಕಾ ವಿರುದ್ಧ 3 ಏಕದಿನ, 3 ಟಿ20 ಪಂದ್ಯ

Story first published: Thursday, November 27, 2025, 12:11 [IST]
Other articles published on Nov 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+