For Quick Alerts
ALLOW NOTIFICATIONS  
For Daily Alerts
 

ಇವರೇ ನೋಡಿ ಬೆಂಚ್ ಕಾಯ್ದು ಇಂಗ್ಲೆಂಡ್‌ ಪ್ರವಾಸ ಮುಗಿಸಿದ ಆಟಗಾರರು

ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್‌ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲೂ ಟೀಮ್ ಇಂಡಿಯಾ ಟಾಸ್‌ ಸೋತಿದೆ. ಇಂಗ್ಲೆಂಡ್ ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬೌಲಿಂಗ್ ಮಾಡಲು ಮುಂದಾಗಿದೆ. ಟೀಮ್ ಇಂಡಿಯಾ ಈ ಪಂದ್ಯಕ್ಕೆ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಗಿಲ್‌ ಪಡೆ ಕೊನೆಯ ಟೆಸ್ಟ್‌ ಪಂದ್ಯಕ್ಕೆ ತನ್ನ ಬ್ಯಾಟಿಂಗ್ ಲೈನ್‌ ಅಪ್‌ ಸ್ಟ್ರಾಂಗ್ ಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಚಿತ್ತ ನೆಟ್ಟಿದೆ. ಭಾರತ ಕೊನೆಯ ಟೆಸ್ಟ್‌ ಪಂದ್ಯಕ್ಕೆ ಮೂರು ವೇಗಿಗಳು ಹಾಗೂ ಇಬ್ಬರು ಆಲ್‌ರೌಂಡರ್‌ಗಳಿಗೆ ಅವಕಾಶ ನೀಡಲಾಗಿದೆ.

ಓವಲ್‌ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ನುರಿತ ಸ್ಪಿನ್ ಬೌಲರ್‌ ಕುಲ್‌ದೀಪ್ ಯಾದವ್ ಅವರಿಗೆ ಅವಕಾಶ ನೀಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ. ಪಿಚ್‌ ವೇಗದ ಬೌಲರ್‌ಗಳಿಗೆ ಸಹಾಯ ಮಾಡಲಿದ್ದು, ಭಾರತ ಮೂರು ವೇಗಿಗಳನ್ನು ಕಣಕ್ಕೆ ಇಳಿಸಿದೆ. ಹೀಗಾಗಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕುಲ್‌ದೀಪ್‌ ಯಾದವ್ (Kuldeep Yadav) ಇಂಗ್ಲೆಂಡ್‌ ಪ್ರವಾಸವನ್ನು ಬೆಂಚ್ ಮೇಲೆ ಕಾಯ್ದು ಮುಗಿಸಿದ್ದಾರೆ.

Team India s Oval Test Kuldeep Yadav Abhimanyu Easwaran Jagadeesan Benched Again

ಐದು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಕುಲ್‌ದೀಪ್‌ ಯಾದವ್ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಹೀಗಾಗಿ ಇವರು ನಿರಾಸೆಯನ್ನು ಅನುಭವಿಸಿದರು. ಇವರು 7 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಆಡುವ ಕನಸು ನುಚ್ಚು ನೂರಾಗಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದಾಗ ಅಭಿಮನ್ಯು ಈಶ್ವರನ್‌ (Abhimanyu Easwaran) ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಇವರಿಗೆ ಈ ಬಾರಿ ಇಂಗ್ಲೆಂಡ್ ನೆಲದಲ್ಲಿ ಆಡುವ ಅವಕಾಶ ಸಿಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಟೀಮ್ ಮ್ಯಾನೇಜ್ಮೆಂಟ್‌ ಇವರನ್ನು ಅಂಗಳಕ್ಕೆ ಇಳಿಸಲಿಲ್ಲ. ಇವರು ಈಗಾಗಲೇ ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಬಂಗಾಲ್‌ ತಂಡದ ಪರ ಆರ್ಭಟಿಸಿದ್ದ ಅಭಿಮನ್ಯು ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇವರ ಬದಲಿಗೆ ಕರುಣ್‌ ನಾಯರ್‌, ಸಾಯಿ ಸುದರ್ಶನ್‌ ಅವರ ಮೇಲೆ ಮ್ಯಾನೇಜ್ಮೆಂಟ್ ವಿಶ್ವಾಸ ಇಟ್ಟಿತು.

Team India s Oval Test Kuldeep Yadav Abhimanyu Easwaran Jagadeesan Benched Again

ಬೆಂಚ್‌ ಕಾಯ್ದ ಪ್ಲೇಯರ್ಸ್‌

ಟೀಮ್ ಇಂಡಿಯಾ ಪರ ಟಿ20 ವಿಶ್ವಕಪ್‌ ವಿಜೇತ ತಂಡದ ಸದಸ್ಯ ಅರ್ಷದೀಪ್ ಸಿಂಗ್ (arshdeep singh) ಸಹ ಈ ಸರಣಿಯಲ್ಲಿ ಬೆಂಚ್ ಕಾಯ್ದು ಕಾಯ್ದು ಸುಸ್ತಾದರು. ಇವರಿಗೆ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶ ಲಭಿಸುವ ಚಾನ್ಸ್ ಇತ್ತು. ಆದರೆ ಈ ವೇಳೆ ಇವರಿಗೆ ಗಾಯವಾಗಿದ್ದರಿಂದ ಫಿಟ್ ಇರಲಿಲ್ಲ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಆಡಬೇಕಾಯಿತು.

ಇನ್ನು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಹರ್ಷಿತ್ ರಾಣಾ (Harshit Rana) ಅವರನ್ನು ಸಹ ತಂಡ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಹರ್ಷಿತ್ ರಾಣಾ ಅವರು ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ತಂಡದ ಭಾಗವಾಗಿದ್ದರು. ಆ ಬಳಿಕ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಉಳಿದ ನಾಲ್ಕು ಟೆಸ್ಟ್‌ ಪಂದ್ಯಗಳಿಗೆ ಇವರು ತಂಡದ ಭಾಗವಾಗಿರಲಿಲ್ಲ.

ಟೀಮ್ ಇಂಡಿಯಾದ ಉಪನಯಾಕ ರಿಷಭ್‌ ಪಂತ್‌ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕ್ರಿಸ್‌ ವೋಕ್ಸ್‌ ಅವರ ಎಸೆತದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಇವರ ಪಾದದ ಗಾಯ ಗುಣವಾಗಿದ್ದರಿಂದ ಇವರ ಬದಲಿಗೆ ಎರಡನೇ ವಿಕೆಟ್‌ ಕೀಪರ್ ಆಗಿ ನಾರಾಯಣ್‌ ಜಗದೀಶನ್‌ (Narayan Jagadeesan) ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಇವರಿಗೆ ಪ್ಲೇಯಿಂಗ್ ಇಲೆವೆನ್ ತಂಡದಲ್ಲಿ ಸ್ಥಾನ ಲಭಿಸಲಿಲ್ಲ. ಪಂತ್‌ ಬದಲಿಗೆ ಧ್ರುವ್‌ ಜುರೇಲ್ ಅವರಿಗೆ ಸ್ಥಾನ ನೀಡಿದೆ.

Story first published: Thursday, July 31, 2025, 16:14 [IST]
Other articles published on Jul 31, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+