WTC Final ತಲುಪಲು ಟೀಮ್ ಇಂಡಿಯಾ ಇನ್ನು ಎಷ್ಟು ಗೆಲುವು ಸಾಧಿಸಬೇಕು?
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಫೈನಲ್ ತಲುಪುವ ಕನಸಿನೊಂದಿಗೆ ಎಲ್ಲ ತಂಡಗಳು ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾ ಸಹ ಬೆವರು ಹರಿಸುತ್ತಿದೆ. ಈಗಾಗಲೇ ಎರಡು ಬಾರಿ ಡಬ್ಲ್ಯುಟಿಸಿ ಫೈನಲ್ ತಲುಪಿರುವ ಟೀಮ್ ಇಂಡಿಯಾ, ಸತತ ಮೂರನೇ ಬಾರಿ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ಹೊಂದಿದೆ. ಭಾರತ ಮುಂದಿನ ತಿಂಗಳಿನಿಂದ ಸಾಲು ಸಾಲು ಟೆಸ್ಟ್ ಸರಣಿಗಳಲ್ಲಿ ಆಡಲಿದೆ. ಈ ಸರಣಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾದಲ್ಲಿ ಮತ್ತೊಮ್ಮೆ ಫೈನಲ್ ಕನಸು ನನಸಾಗುತ್ತದೆ.
2025ರಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ ದಿನಾಂಕವನ್ನು ಪ್ರಕಟಿಸಲಾಗಿಲ್ಲ. ಆದರೆ ಈ ಬಾರಿಯು ಜೂನ್‌ನಲ್ಲಿ ನಡೆಯುವ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ವಿವಿಧ ದೇಶಗಳ ನಡುವಿನ ಟೆಸ್ಟ್ ಸರಣಿ 24 ಜನವರಿ 2025 ರವರೆಗೆ ನಡೆಯಲಿದೆ. ಇದಾದ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗುತ್ತವೆ. ಈ ಬಾರಿಯ WTC 2025 ಫೈನಲ್ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಡಲಾಗುತ್ತದೆ. ಫೈನಲ್ ತಲುಪಲು ತಂಡಗಳ ಮುಂದಿರುವ ದಾರಿಯ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾ ಅಗ್ರ ಸ್ಥಾನ
ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಸದ್ಯ ಟೀಮ್ ಇಂಡಿಯಾ ಅಗ್ರ ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಆಡಿರುವ 9 ಪಂದ್ಯಗಲ್ಲಿ 6 ಜಯ, 2 ಸೋಲು, 1 ಡ್ರಾ ಸಾಧಿಸಿರುವ ಟೀಮ್ ಇಂಡಿಯಾ 68.51 ಗೆಲುವಿನ ಸರಾಸರಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಜಯ ದಾಖಲಿಸಿ, 62.5 ಗೆಲುವಿನ ಸರಾಸರಿಯನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 36 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ 4, ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ.
ಭಾರತ ಫೈನಲ್ ಪ್ರವೇಶಿಸುವುದು ಹೇಗೆ?
ಭಾರತ ಇನ್ನು 10 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಇದರಲ್ಲಿ ತವರಿನಲ್ಲಿ ಬಾಂಗ್ಲಾ ವಿರುದ್ಧ 2, ನ್ಯೂಜಿಲೆಂಡ್ ವಿರುದ್ಧ 3, ಆಸ್ಟ್ರೇಲಿಯಾ ಪ್ರವಾಸದಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಇನ್ನು ಟೀಮ್ ಇಂಡಿಯಾ ಆಡುವ 10 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ, ಸತತ ಮೂರನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ನನಸಾಗುತ್ತದೆ. ಇನ್ನು ಆಸೀಸ್ ಉಳಿದ ಏಳು ಪಂದ್ಯಗಳಲ್ಲಿ 4 ಪಂದ್ಯ ಗೆದ್ದರೂ ಫೈನಲ್ ಟಿಕೆಟ್ ಫಿಕ್ಸ್.

ಇನ್ನುಳಿದಂತೆ ದಕ್ಷಿಣ ಆಫ್ರಿಕಾ 8 ರಲ್ಲಿ 7 ಪಂದ್ಯಗಳನ್ನು ಗೆಲ್ಲಲೇ ಬೇಕು. ನ್ಯೂಜಿಲೆಂಡ್ 8 ರಲ್ಲಿ 6, ಪಾಕಿಸ್ತಾನ 9 ರಲ್ಲಿ 7, ಇಂಗ್ಲೆಂಡ್ 9 ರಲ್ಲಿ 9, ಶ್ರೀಲಂಕಾ 9 ರಲ್ಲಿ 6, ಬಾಂಗ್ಲಾದೇಶ 9 ರಲ್ಲಿ 7 ಗೆಲ್ಲಬೇಕು ಅಂದಾಗ ಮಾತ್ರ ಮುಂದಿನ ಹಂತದ ಕನಸು ನನಸಾಗುತ್ತದೆ.
ಮುಂದಿನ ಸರಣಿಯ ವೇಳಾಪಟ್ಟಿ
ಟೀಮ್ ಇಂಡಿಯಾ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧ ಸರಣಿಯನ್ನು ಆಡಲಿದೆ. ಈ ಸರಣಿ ಸೆಪ್ಟಂಬರ್ 19 ರಿಂದ ಆರಂಭವಾಗಲಿದೆ. ಬಳಿಕ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ, ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಆಡಲಿದೆ. ಆಸೀಸ್ ನೆಲದಲ್ಲಿ ನಡೆಯುವ ಬಾರ್ಡರ್ ಗವಾಸ್ಕರ್ ಟ್ರೋಫಿ ಮುಗಿಯುವ ವೇಳೆಗೆ ಯಾವ ತಂಡಗಳು ಫೈನಲ್‌ನಲ್ಲಿ ಕಾದಾಟ ನಡೆಸಬಹುದು ಎಂಬ ಅಂದಾಜು ಸಿಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications