For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದಲ್ಲಿ ಈ ಸ್ಥಾನಕ್ಕೆ ಇನ್ನು ಸಿಗದ ಉತ್ತರಾಧಿಕಾರಿ..

ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಆತಿಥೇಯ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲೂ ಟೀಮ್ ಇಂಡಿಯಾಗೆ ಆ ಒಂದು ಸ್ಥಾನದ ಚಿಂತೆ ಬಹುವಾಗಿ ಕಾಡುತ್ತಿದೆ. ಈ ಸ್ಥಾನವನ್ನು ತುಂಬ ಬಲ್ಲ ಪ್ಲೇಯರ್ ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಹಾಗಿದ್ದರೆ ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾವನ್ನು ಕಾಡುತ್ತಿರುವ ಆ ಚಿಂತೆಯಾದ್ರೂ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಮ್ಯಾಂಚೆಸ್ಟರ್‌ ಮೈದಾನದಲ್ಲಿ ಜುಲೈ 23 ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾ ಭರದ ಸಿದ್ಧತೆಗಳನ್ನು ಆರಂಭಿಸಿದೆ. ಆದರೆ ಆ ಒಂದು ಸ್ಥಾನದ ಚಿಂತೆ ಟೀಮ್ ಇಂಡಿಯಾವನ್ನು ಬಹುವಾಗಿ ಕಾಡುತ್ತಿದೆ. ಈ ಸ್ಥಾನದ ಅಧಿಪತಿ ಸರಿಸುಮಾರು 406 ದಿನಗಳಿಂದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದ್ರೂ ಅವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಆ ಸ್ಥಾನ ಯಾವುದು?

Team India s Persistent No 3 Conundrum Who Will Fill Pujara s Shoes

ಟೀಮ್ ಇಂಡಿಯಾದಲ್ಲಿ ಸದ್ಯ ಜನರೇಷನ್‌ ಚೇಂಜ್‌ ಕಾಣಿಸಿಕೊಳ್ಳುತ್ತಿದೆ. ಈ ವೇಳೆ ಹಲವು ಸ್ಥಾನಗಳು ಖಾಳಿ ಆಗಿದ್ದವು. ಇದರ ಮೇಲೆ ಟೀಮ್ ಇಂಡಿಯಾದ ಯುವ ಆಟಗಾರರು ಕಣ್ಣು ನೆಟ್ಟಿದ್ದರು. ವಿರಾಟ್‌ ಕೊಹ್ಲಿ ಅವರಿಂದ ತೆರವಾದ ಸ್ಥಾನಕ್ಕೆ ನಾಯಕ ಶುಭಮನ್‌ ಗಿಲ್‌ ಬ್ಯಾಟ್ ಮಾಡುತ್ತಿದ್ದಾರೆ. ಇವರ ಮೂರನೇ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಉತ್ತರಾಧಿಕಾರಿ ಯಾರು?

ಅಂದಹಾಗೆ ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕವನ್ನು ತನ್ನದೇ ಎನ್ನುವ ರೀತಿ ಮೆರೆದ ಆಟಗಾರರಲ್ಲಿ ರಾಹುಲ್‌ ದ್ರಾವಿಡ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ನಂತರ ಈ ಸ್ಥಾನವನ್ನು ಸೌರಾಷ್ಟ್ರದ ಚೇತೇಶ್ವರ್ ಪೂಜಾರ ತುಂಬಿದ್ದರು. ಆದರೆ ಚೇತೇಶ್ವರ್‌ ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನ್ನು ಕೊನೆಯ ಬಾರಿಗೆ ಜೂನ್‌ 7 2024ರಂದು ಆಡಿದ್ದರು. ಅಲ್ಲಿಂದ ಈ ಸ್ಥಾನದಲ್ಲಿ ಹಲವು ಆಟಗಾರರು ಆಡಿದರು. ಯಾರೊಬ್ಬರೂ ಸಹ ಈ ಸ್ಥಾನಕ್ಕೆ ಹೊಂದಿಕೊಳ್ಳಲಿಲ್ಲ.

Team India s Persistent No 3 Conundrum Who Will Fill Pujara s Shoes

ಟೀಮ್ ಇಂಡಿಯಾದ ನಾಯಕ ಶುಭಮನ್‌ ಗಿಲ್ ಸಹ ಈ ಸ್ಥಾನದಲ್ಲಿ 16 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ 972 ರನ್‌ ಕಲೆ ಹಾಕಿದ್ದಾರೆ. ಇವರು ಈ ಸ್ಥಾನದಲ್ಲಿ ಬ್ಯಾಟ್ ಮಾಡಿದರೂ ಸಹ ಈ ಸ್ಥಾನವನ್ನು ತುಂಬ ಬಲ್ಲ ಪ್ಲೇಯರ್ ಎಂದು ಅನಿಸಲೇ ಇಲ್ಲ. ಇದಾದ ಬಳಿಕ ಕರುಣ್ ನಾಯರ್‌ ಈಗ ಇಂಗ್ಲೆಂಡ್ ಪ್ರವಾಸದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಇವರು ಆಡಿರುವ 2 ಟೆಸ್ಟ್ ಪಂದ್ಯಗಳ 4 ಇನಿಂಗ್ಸ್‌ನಲ್ಲಿ 111 ರನ್‌ ಕಲೆ ಹಾಕಿ ನಿರಾಸೆ ಅನುಭವಿಸಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಇನ್ನು ಉತ್ತರಾಧಿಕಾರಿ ಸಿಗದಂತೆ ಆಗಿದೆ. ಈಗಾಗಲೇ ಈ ಸ್ಥಾನದಲ್ಲಿ ಐಪಿಎಲ್‌ನಲ್ಲಿ ಮಿಂಚಿರುವ ಸಾಯಿ ಸುದರ್ಶನ್‌ ಅವರು ಬ್ಯಾಟ್ ಮಾಡಿದ್ದರು. ಆದರೆ ಇವರು ಸಹ ನಿರಾಸೆಯ ಕಡಲಲ್ಲಿ ಪ್ರಯಾಣ ಬೆಳೆಸಿದವರೇ ಆಗಿದ್ದಾರೆ.

Story first published: Friday, July 18, 2025, 18:44 [IST]
Other articles published on Jul 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+