ಶಿವಂ ದುಬೆ ಅದ್ಭುತ ಆಟಕ್ಕೆ ನಿರ್ಮಾಣವಾದ ದಾಖಲೆಗಳು
ಭಾರತ ಹಾಗೂ ನೆದರ್‍ಲ್ಯಾಂಡ್ಸ್ ನಡುವಣ ಟಿ20 ವಿಶ್ವಕಪ್ ಲೀಗ್‌ನ ಕೊನೆಯ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು, 17 ರನ್‌ಗಳಿಂದ ನೆದರ್‌ಲ್ಯಾಂಡ್ಸ್ ತಂಡವನ್ನು ಮಣಿಸಿದೆ. ಈ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.
ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 193 ರನ್ ಸೇರಿಸಿತು. ಈ ವೇಳೆ ಆಲ್‌ರೌಂಡರ್ ಶಿವಂ ದುಬೆ ತಂಡಕ್ಕೆ ಆಧಾರವಾದರು. ದುಬೆ 31 ಎಸೆತಗಳಲ್ಲಿ 66 ರನ್ ಗಳಿಸುವ ಮೂಲಕ ಭಾರತ ತಂಡದ ಸ್ಕೋರ್ ಹಿಗ್ಗಿಸಿದರು. ಈ ಕ್ಲಾಸಿಕ್ ಇನಿಂಗ್ಸ್ ಮೂಲಕ ಶಿವಂ ದುಬೆ ದೊಡ್ಡ ದಾಖಲೆಯನ್ನು ಬರೆದರು. 66 ರನ್‌ಗಳ ಆಟದ ಮೂಲಕ ಶಿವಂ ದುಬೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ದಾಖಲೆಯನ್ನು ಅಳಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಬೌಲಿಂಗ್‌ನಲ್ಲಿ ಇವರು 2 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.

ನೆದರ್‌ಲ್ಯಾಂಡ್ಸ್ ವಿರುದ್ಧ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಲು ಬಂದಾಗ, ಸಂಕಷ್ಟದಲ್ಲಿತ್ತು. ಇವರು ಬ್ಯಾಟಿಂಗ್‌ಗೆ ಬಂದಾಗ ಟೀಮ್ ಇಂಡಿಯಾ 3 ವಿಕೆಟ್‌ಗೆ 69 ರನ್ ಸೇರಿಸಿತ್ತು. ಈ ಹಂತದಲ್ಲಿ ತಂಡಕ್ಕೆ ಆಧಾರವಾಗಿದ್ದು, ಆಲ್‌ರೌಂಡರ್ ದುಬೆ. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ದುಬೆ ಬಳಿಕ ಬಿಗ್ ಹಿಟ್‌ಗಳನ್ನು ಬಾರಿಸಿದರು. ಇವರು ಕೇವಲ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಈ ಪಂದ್ಯದಲ್ಲಿ ಇವರು 63 ರನ್ ಬಾರಿಸುತ್ತಿದ್ದಂತೆ ಒಂದು ದಾಖಲೆ ಬರೆದರು.
ಟಿ20 ವಿಶ್ವಕಪ್ ಇತಿಹಾಸದಲ್ಲಿ 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಈ ಮೊದಲು ಈ ದಾಖಲೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಹೆಸರಿನಲ್ಲಿತ್ತು. ಇವರು 2022ರ ಟಿ20 ವಿಶ್ವಕಪ್‌ನಲ್ಲಿ 63 ರನ್ ಸಿಡಿಸಿದ ದಾಖಲೆ ಹೊಂದಿದ್ದರು.
5 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟರ್
ಶಿವಂ ದುಬೆ, 66 ರನ್ (ನೆದರ್‌ಲ್ಯಾಂಡ್ಸ್ 2026)
ಹಾರ್ದಿಕ್ ಪಾಂಡ್ಯ, 63 ರನ್ (ಇಂಗ್ಲೆಂಡ್ 2022)
ಯುವರಾಜ್ ಸಿಂಗ್, 58 ರನ್ (ಇಂಗ್ಲೆಂಡ್ 2007)
ಹಾರ್ದಿಕ್ ಪಾಂಡ್ಯ, 52 ರನ್ (ನಮೀಬಿಯಾ 2026)
ಅಕ್ಷರ್ ಪಟೇಲ್ 47 ರನ್ (ದಕ್ಷಿಣ ಆಫ್ರಿಕಾ 2024)

ವಿರಾಟ್ ದಾಖಲೆ ಅಳಿಸಿದ ದುಬೆ
ಶಿವಂ ದುಬೆ ಈ ಭರ್ಜರಿ ಇನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಿದ್ದಾರೆ. ಇವರು 60ಕ್ಕೂ ಹೆಚ್ಚು ರನ್ ಬಾರಿಸಿ 2 ವಿಕೆಟ್ ಪಡೆದು ಬೀಗಿದರು. ಈ ಮೂಲಕ ದುಬೆ 60ಕ್ಕೂ ಹೆಚ್ಚು ರನ್ ಬಾರಿಸಿ ಒಂದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದರು. ವಿರಾಟ್ 2016ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 89 ರನ್ ಸಿಡಿಸಿ 1 ವಿಕೆಟ್ ಪಡೆದು ಬೀಗಿದ್ದರು.
ದುಬೆ ಸಾಧನೆ
ಶಿವಂ ದುಬೆ 2026 ರ T20 ವಿಶ್ವಕಪ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ, ಅರ್ಧಶತಕ ಸೇರಿದಂತೆ 29 ಸರಾಸರಿಯಲ್ಲಿ 116 ರನ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications