Shubman Gill: ಏಷ್ಯಾ ಕಪ್ ತಂಡದಲ್ಲಿ ಶುಭಮನ್ ಗಿಲ್ ಸ್ಥಾನ ಪಡೆಯುವುದು ಕಷ್ಟ
ಭಾರತ ತಂಡದ ಆಟಗಾರರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇದೇ ವೇಳೆ ಎಲ್ಲರ ಕಣ್ಣುಗಳು ಏಷ್ಯಾ ಕಪ್ ತಂಡದ ಮೇಲೆ ನೆಟ್ಟಿವೆ. ಸೆಪ್ಟಂಬರ್ 9ರಿಂದ ಯುಎಇನಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್‌ಗೆ ಭಾರತ ಇನ್ನೇನು ಕೆಲವೇ ದಿನಗಳಲ್ಲಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಯಾರಿಗೆಲ್ಲಾ ತಂಡದಲ್ಲಿ ಅವಕಾಶ ಸಿಗಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಹಲವು ಸ್ಟಾರ್ ಆಟಗಾರರು ಟಿ20 ತಂಡದಲ್ಲಿ ಸ್ಥಾನ ಪಡೆಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಟಿ20 ತಂಡಕ್ಕೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಇವರು ಕಳೆದ ಒಂದು ವರ್ಷದಿಂದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಇವರು ತಂಡದಲ್ಲಿ ಸ್ಥಾನ ಪಡೆದು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಬಿಗ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಈಗಿರುವ ಪ್ರಶ್ನೆ ಶುಭಮನ್ ಗಿಲ್ ಅವರಿಗೆ ಟಿ20 ತಂಡದಲ್ಲಿ ಸ್ಥಾನ ಲಭಿಸುತ್ತದಾ ಎಂಬುದಾಗಿದೆ.

ಇತ್ತೀಚಿಗೆ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿತ್ತು. ಈ ವೇಳೆ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತ್ತು. ರೋಹಿತ್ ಶರ್ಮಾ ಹಠಾತ್ ನಿವೃತ್ತಿಯಿಂದಾಗಿ ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಪಟ್ಟ ಕಟ್ಟಲಾಗಿತ್ತು. ಇವರು ಸಹ ತಮ್ಮ ಮೇಲೆ ಆಯ್ಕೆ ಸಮಿತಿ ಇಟ್ಟ ನಂಬಿಕೆಗೆ ಪೂರಕವಾಗಿ ಪ್ರದರ್ಶನ ನೀಡಿದ್ದರು. ಆಂಡರ್ಸನ್, ತೆಂಡೂಲ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ 2-2ರಿಂದ ಸಮಬಲ ಸಾಧಿಸುವಲ್ಲಿ ಶುಭಮನ್ ಗಿಲ್ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ಈಗ ಇವರು ಒಂದು ವರ್ಷದ ಬಳಿಕ ಮತ್ತೆ ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಶುಭಮನ್ ಗಿಲ್‌ಗೆ ಸ್ಥಾನ ಸಿಗುತ್ತದಾ?
ಮೆಲ್ನೋಟಕ್ಕಂತೂ ಶುಭಮನ್ ಗಿಲ್ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು. ಇದಕ್ಕೆ ಹಲವು ಕಾರಣಗಳಿವೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾವನ್ನು ಸಿದ್ಧಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕರಿಗೆ ಸತತ ಅವಕಾಶಗಳನ್ನು ನೀಡುವ ಪ್ಲ್ಯಾನ್ ಮ್ಯಾನೇಜ್ಮೆಂಟ್‌ನದ್ದಾಗಿದೆ. ಶುಭಮನ್ ಗಿಲ್ ಟಿ20 ಸ್ವರೂಪದಲ್ಲಿ ಭಾರತವನ್ನು ಬಹಳ ದಿನಗಳಿಂದ ಪ್ರತಿನಿಧಿಸಿಲ್ಲ. ಅಲ್ಲದೆ ಇವರು ಆಡುವ ಶೈಲಿ ಸಹ ಇವರಿಗೆ ಅವಕಾಶ ನೀಡುವ ಬಗ್ಗೆ ಬೊಟ್ಟು ತೋರಿಸುತ್ತಿದೆ.

ಶುಭಮನ್ ಗಿಲ್ ಒಬ್ಬ ಪ್ರತಿಭಾನ್ವಿತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಇವರು ತಮ್ಮ ಧಮಾಕೆದಾರ್ ಪ್ರದರ್ಶನದ ಬಲದಿಂದ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಇವರು ಮೈದಾನಕ್ಕೆ ಇಳಿದ ಬಳಿಕ ಸೆಟಲ್ ಆಗಲು ಟೈಮ್ ತೆಗೆದುಕೊಳ್ಳುತ್ತಾರೆ. ಆದರೆ ಸದ್ಯ ಭಾರತ ಟಿ20 ತಂಡದಲ್ಲಿರುವ ಆಟಗಾರರು ಪ್ರೋ ಅಗ್ರೇಸಿವ್ ಆಟವನ್ನು ಆಡುತ್ತಾರೆ. ಮೊದಲ ಎಸೆತದಿಂದಲೇ ಹೊಡಿ ಬಡಿ ಆಟವನ್ನು ಇವರು ಆಡಿ ರನ್ ಸ್ಕೋರ್ ಹೆಚ್ಚಿಸುತ್ತಾರೆ. ಹೀಗಾಗಿ ಈಗ ತಂಡದಲ್ಲಿರುವ ಆಟಗಾರರನ್ನು ಬಿಟ್ಟು ಗಿಲ್‌ಗೆ ಸ್ಥಾನ ನೀಡುವುದು ಕೊಂಚ ಕಷ್ಟ.
ಯಾವ ಕ್ರಮಾಂಕದಲ್ಲಿ ಆಡಬೇಕು?
ಶುಭಮನ್ ಗಿಲ್ ಟಿ20 ಫಾರ್ಮೆಟ್‌ಗೆ ಎಂಟ್ರಿ ನೀಡಿದರೆ ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಇವರು ಮೇಲ್ಪಕ್ತಿಯಲ್ಲಿ ಬ್ಯಾಟ್ ಮಾಡುವ ಪ್ಲೇಯರ್. ಇನ್ನು ಟೀಮ್ ಇಂಡಿಯಾದಲ್ಲಿ ಸದ್ಯ ಆರಂಭಿಕರಾಗಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಮಾಡುತ್ತಾರೆ. ಹೀಗಾಗಿ ಗಿಲ್‌ಗೆ ಅವಕಾಶ ನೀಡಿದರೆ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಎಲ್ಲ ಸಂಗತಿಗಳನ್ನು ನೋಡಿದಾಗ ಭಾರತದ ಟೆಸ್ಟ್ ತಂಡದ ನಾಯಕನಿಗೆ ಟಿ20 ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications