IND vs AUS 3rd Test: ಬಂದು ಹೋಗುವ ಸಂಪ್ರದಾಯ ಮುಗಿಸಿದ ಭರವಸೆಯ ಬ್ಯಾಟರ್ಸ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಕಂಬ್ಯಾಕ್ ಮಾಡುವ ಕನಸು ಹೊಂದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರರು ಪುಟಿದೇಳುವ ಸೂಚನೆಯನ್ನು ವ್ಯಕ್ತ ಪಡಿಸಿದ್ದರು. ಆದರೆ ಮತ್ತೊಮ್ಮೆ ಟೀಮ್ ಇಂಡಿಯಾ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಭರವಸೆ ಮೂಡಿಸಿದ್ದ ಸ್ಟಾರ್ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದು ತಂಡಕ್ಕೆ ಪೆಟ್ಟು ನೀಡಿದಂತೆ ಆಗಿದೆ.
ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾವನ್ನು 445 ರನ್‌ಗಳಿಗೆ ಕಟ್ಟಿ ಹಾಕಿತು. ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ದೊಡ್ಡ ಮೊತ್ತದ ಭರವಸೆಯ ಕನಸನ್ನು ಹೊತ್ತು ಅಂಗಳಕ್ಕೆ ಇಳಿದರು. ಯಶಸ್ವಿ ಜೈಸ್ವಾಲ್ ತಾವು ಎದುರಿಸಿದ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ಭರವಸೆ ಮೂಡಿಸಿದರು. ಆದರೆ ಮಿಚೆಲ್ ಸ್ಟಾರ್ಕ್ ಎಸೆದ ಎರಡನೇ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಶುಭ ಸುದ್ದಿ ನೀಡದ ಗಿಲ್
ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶವನ್ನು ಪಡೆದ ಶುಭಮನ್ ಗಿಲ್, ಮೈದಾನಕ್ಕೆ ಇಳಿಯುವಾಗಲೇ ಕಾನ್ಫಿಡೆಂಟ್ ಆಗಿದ್ದರು. ಇವರು ಸೋಮವಾರ ಬಿಗ್ ಇನಿಂಗ್ಸ್ ಕಟ್ಟುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ ಕನಸು ಇವರು ಎದುರಿಸಿದ ಮೂರನೇ ಎಸೆತದಲ್ಲೇ ಸುಳ್ಳು ಎಂದು ಸಾಬೀತು ಆಯಿತು. ಗಿಲ್ ಸ್ಟಾರ್ಕ್ ಎಸೆದ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಗಲ್ಲಿಯಲ್ಲಿ ಫೀಲ್ಡ್ ಮಾಡುತ್ತಿದ್ದ ಮಿಚೆಲ್ ಮಾರ್ಷ್‌ಗೆ ಬಲಿಯಾದರು.
ಹಳೆ ಚಾಳಿ ಮುಂದುವರಿಸಿದ ವಿರಾಟ್
ವಿರಾಟ್ ಕೊಹ್ಲಿ ಅವರಿಗೆ ನಾಲ್ಕನೇ ಹಾಗೂ ಐದನೇ ಸ್ಟಾಂಪ್ ಮೇಲಿನ ಚೆಂಡನ್ನು ಆಡುವುದು ಕಷ್ಟ ಎಂದು ಎಲ್ಲರಿಗೂ ತಿಳಿದಿದೆ. ಈ ಚೆಂಡನ್ನು ಬಿಡುವುದು ಬಿಟ್ಟು ಡ್ರೈವ್ ಮಾಡಲು ಹೋಗಿ ಪದೇ ಪದೇ ಕೀಪರ್ ಇಲ್ಲ, ಸ್ಲೀಪ್‌ನಲ್ಲಿ ಕ್ಯಾಚ್ ನೀಡುತ್ತಾರೆ. ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೂ ಇದೇ ರೀತಿ ಆಯಿತು. ಆರ್‌ಸಿಬಿ ವೇಗಿ ಜೋಶ್ ಹ್ಯಾಜಲ್‌ವುಡ್ ಎಸೆತವನ್ನು ತಪ್ಪಾಗಿ ಗ್ರಹಿಸಿದ ವಿರಾಟ್, ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು.
ಗಬ್ಬಾದಲ್ಲಿ ರಿಷಭ್ ಮಂಕು
ಕಳೆದ ಪ್ರವಾಸದಲ್ಲಿ ಗಬ್ಬಾ ಅಂಗಳದಲ್ಲೇ ಮನಮೋಕ ಇನಿಂಗ್ಸ್ ಕಟ್ಟಿ ಎಲ್ಲರ ಗಮನ ಸೆಳೆದಿದ್ದ ರಿಷಭ್ ಪಂತ್ ಮಹತ್ವದ ಪಂದ್ಯದಲ್ಲಿ ಮಂಕಾದರು. ಇವರು ತಮ್ಮ ಧಾಟಿಗೆ ವಿರುದ್ಧವಾಗಿ ಸೋಮವಾರ ಬ್ಯಾಟ್ ಮಾಡಿದರು. ಆದರೆ ತಾವು ಎದುರಿಸಿದ 12 ಎಸೆತದಲ್ಲಿ ಔಟ್ ಆದರು. ಪ್ಯಾಟ್ ಕಮಿನ್ಸ್ ಔಟ್ ಸೈಡ್ ಆಫ್ ಸ್ಟಂಪ್ ಎಸೆತವನ್ನು ಕೆಣಕಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು.
ಮಂಗಳವಾರ ಟೀಮ್ ಇಂಡಿಯಾದ ಪರ ಬ್ಯಾಟಿಂಗ್ ಜವಾಬ್ದಾರಿಯನ್ನು ಕೆಎಲ್ ರಾಹುಲ್, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಹೊರಲಿದ್ದು ದೊಡ್ಡ ಇನಿಂಗ್ಸ್ ಕಟ್ಟುವುದು ಅನಿವಾರ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications