ಸೋಲಿನ ಸುನಾಮಿಗೆ ಬೆಚ್ಚಿದ ಮ್ಯಾನೇಜ್ಮೆಂಟ್: ಇನ್ನು ಮೈದಾನದಲ್ಲಿ ಶುರುವಾಗುತ್ತೆ ಸುಂಟರಗಾಳಿಯ ಆರ್ಭಟ
ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದೆ. ಬರೀ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಸೋಲಿನ ಸುಳಿಯಲ್ಲಿ ಸಿಕ್ಕಿಕೊಂಡಿದೆ ಎಂದು ಹೇಳಿದರೆ ಅದು ತಪ್ಪಾಗುತ್ತದೆ. ದೇಶ ಹಾಗೂ ವಿದೇಶದಲ್ಲಿ ಭಾರತ ತಂಡದ ಪ್ರದರ್ಶನದ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಸೋಲಿನ ಸುನಾಮಿ ಹೊಡೆತಕ್ಕೆ ನಲುಗಿದೆ. ಪರಿಣಾಮ ಎಲ್ಲರ ಮುಖದಲ್ಲೂ ಚಿಂತೆಯ ಗೆರೆಗಳು ಮೂಡಿವೆ.
ಟೀಮ್ ಇಂಡಿಯಾದಲ್ಲಿ ಈಗ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಗೌತಮ್ ಗಂಭೀರ್ ಅವರು ಕೋಚ್ ಆದ ಮೇಲೆ ಹಲವು ಸಮಸ್ಯೆಗಳನ್ನು ತಂಡ ಎದುರಿಸಿದೆ. ಹೀಗಾಗಿ ಹೆಡ್ ಕೋಚ್ ಸ್ಥಾನದ ಮೇಲೆ ಪ್ರಶ್ನೆಗಳು ಎದ್ದಿವೆ. ಗೌತಮ್ ಗಂಭಿರ್ ತಂಡದ ಹಿತಕ್ಕಾಗಿ ಈಗ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ನಿರ್ಧಾರದಿಂದ ಮೈದಾನದಲ್ಲಿ ಸುಂಟರಗಾಳಿ ಬೀಸುವುದು ಪಕ್ಕಾ.

ಟೀಮ್ ಇಂಡಿಯಾದಲ್ಲಿ ಬದಲಾವಣೆ?
ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ಅವರಿಬ್ಬರ ನಡುವೇ ಎಲ್ಲವೂ ಚೆನ್ನಾಗಿಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತಿದೆ. ರೋಹಿತ್ ಶರ್ಮಾ ಶಾಂತ ಸ್ವಭಾವದ ಆಟಗಾರ. ಆದರೆ ಗೌತಮ್ ಗಂಭೀರ್ ಕೊಂಚ ಅಗ್ರೇಸಿವ್. ಹೀಗಾಗಿ ಇವರಿಬ್ಬರ ನಡುವೆ ಹೊಂದಾಣಿಕೆ ಆಗದೇ ಇರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಗೌತಮ್ ತಮ್ಮ ಆಲೋಚನೆ ಹೊಂದುವ ಆಟಗಾರನನ್ನು ನಾಯಕನಾಗಿ ಮಾಡುವ ಇರಾದೆಯನ್ನು ಹೊಂದಿದಂತೆ ಕಾಣುತ್ತಿದೆ. ಹೀಗಾಗಿ ತಂಡದಲ್ಲಿ ನಾಯಕತ್ವದ ಬದಲಾವಣೆ ಆಗುವ ಸಾಧ್ಯತೆ ಇದೆ.
ತಾಳ ಮೇಳ ಹೊಂದುತ್ತಾ?
ಗೌತಮ್ ಗಂಭೀರ್ ಅಗ್ರೇಸಿವ್ ನೇಚರ್‌ಗೆ ಹೊಂದುವಂತಹ ಪ್ಲೇಯರ್ ಸದ್ಯ ಟೀಮ್ ಇಂಡಿಯಾದ ಕ್ಯಾಂಪ್‌ನಲ್ಲೇ ಇದ್ದಾರೆ. ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಆಟಗಾರ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾದ ಯಾವುದೇ ಐಸಿಸಿ ಪ್ರಶಸ್ತಿಗಳನ್ನು ಗೆಲ್ಲದೇ ಇದ್ದರೂ ಸಹ ತಂಡವನ್ನು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕೊಂಡೊಯ್ದ ನಾಯಕ.

ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಮನಸ್ತಾಪಗಳೇ ಹೆಚ್ಚಾಗಿ ಮಾಧ್ಯಮಗಳ ಮುಂದೆ ಕಂಡು ಬಂದಿವೆ. ಐಪಿಎಲ್ ಪಂದ್ಯಗಳ ವೇಳೆ ಈ ಇಬ್ಬರೂ ಆಟಗಾರರು ತಮ್ಮ ತಮ್ಮ ತಂಡದ ಪರ ಅಬ್ಬರದ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇಷ್ಟೇ ಅಲ್ಲಾ ಮೈದಾನದಲ್ಲೇ ಗಲಾಟೆ ಮಾಡಿಕೊಂಡು ಸುದ್ದಿಯಲ್ಲಿದ್ದಾರೆ. ಹೀಗಾಗಿ ಇವರಿಬ್ಬರ ತಾಳ ಮೇಳ ಹೊಂದಾಣಿಕೆ ಆಗುತ್ತದಾ ಎಂಬ ಪ್ರಶ್ನೆ ಒಂದು ಇತ್ತು. ಆದರೆ ಈಗ ಆ ಪ್ರಶ್ನೆಗಳಿಗೆ ಎಲ್ಲ ಒಂದು ಹಂತದಲ್ಲಿ ಉತ್ತರ ಸಿಕ್ಕಂತೆ ಆಗಿದೆ.
ಟೀಮ್ ಇಂಡಿಯಾದ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಗೌತಮ್ ಗಂಭೀರ್ ತಮ್ಮ ಕುರ್ಚಿಯನ್ನು ಭಧ್ರ ಪಡಿಸಿಕೊಳ್ಳಲು ಮೆಗಾ ಪ್ಲ್ಯಾನ್ ಮಾಡಿದಂತೆ ಕಂಡು ಬರುತ್ತಿದೆ. ಸಿಡ್ನಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವುದು ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications