Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಮೂರು ಕಾರಣ

ಮ್ಯಾಂಚೆಸ್ಟರ್‌: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಎರಡನೇ ಟಿ20 ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿ ಸೋಲು ಕಂಡಿದೆ. 191 ರನ್‌ಗಳ ಸ್ಕೋರ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಭಾರತ ತಂಡ ಎಡವಿದೆ. ಈ ಪಂದ್ಯವನ್ನು ಭಾರತ ಗೆದ್ದ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸಿಗೆ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲ ಶ್ರೇಯಸ್ ಅಯ್ಯರ್ ನಾಯಕರಾಗಿ ಮೊದಲ ಗೆಲುವಿನ ನಗೆ ಬೀರುವ ಪ್ಲ್ಯಾನ್ ಸಹ ಫ್ಲಾಪ್ ಆಗಿದೆ.

ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡಕ್ಕೆ 190 ರನ್‌ಗಳ ಟಾರ್ಗೆಟ್‌ ನೀಡಿತ್ತು. ಆದರೆ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಪಂದ್ಯ ರದ್ದಾಯಿತು. ಹೀಗಾಗಿ ಮೊದಲ ಪಂದ್ಯದಲ್ಲಿ ಫಲಿತಾಂಶ ಹೊರ ಬೀಳಲಿಲ್ಲ. ಎರಡನೇ ಟಿ20 ಪಂದ್ಯದಲ್ಲಿ ಅಬ್ಬರಿಸುವ ಪ್ಲ್ಯಾನ್ ಹಾಕಿಕೊಂಡಿದ್ದ ಶ್ರೇಯಸ್ ಪಡೆಗೆ, ಇಂಗ್ಲೆಂಡ್‌ ಪೆಟ್ಟು ನೀಡಿದೆ.

Team India

ನಿರೀಕ್ಷೆಯಂತೆ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಎರಡನೇ ಟಿ20 ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಯಿತು. ಆದರೆ ಇವರು 14 ರನ್‌ಗಳಿಗೆ ಆಟ ಮುಗಿಸಿದರು. ಆದರೆ ಕಳೆ ಕ್ರಮಾಂಕದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲಿಲ್ಲ.

ಬ್ಯಾಟಿಂಗ್ ಕ್ರಮಾಂಕ ಬದಲಾವಣೆ

ಟೀಮ್ ಇಂಡಿಯಾ 2ನೇ ಟಿ20 ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬದಲಾವಣೆ ಮಾಡಿ ಕೈ ಸುಟ್ಟಿಕೊಂಡಂತೆ ಕಂಡಿದೆ. ಸಾಮಾನ್ಯವಾಗಿ ಉಪನಾಯಕ ತಿಲಕ್ ವರ್ಮಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ ಇಂಗ್ಲೆಂಡ್ ಸ್ಪಿನ್ ಬೌಲರ್‌ಗಳನ್ನು ಬಳಸುತ್ತಿದ್ದರಿಂದ ಶಿವಂ ದುಬೆ ಅವರಿಗೆ ಬಡ್ತಿ ನೀಡಿತು. ಆದರೆ ಶಿವಂ ದುಬೆ 5 ರನ್ ಬಾರಿಸಿ ನಿರಾಸೆ ಅನುಭವಿಸಿದರು. ತಿಲಕ್ ವರ್ಮಾ 17ನೇ ಓವರ್‌ನಲ್ಲಿ ಬ್ಯಾಟ್ ಮಾಡಲು ಬಂದರು. ಇವರು 11 ಎಸೆತಗಳಲ್ಲಿ 24 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರು ತಮ್ಮ ನೈಜ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರೆ ಇನ್ನು ಹೆಚ್ಚು ರನ್ ಬಾರಿಸಬಹುದಿತ್ತು.

ಅರ್ಷದೀಪ್ ಸಿಂಗ್

ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯದಲ್ಲಿ ಭಾರತದ ಪರ ಮೂರು ವಿಕೆಟ್‌ ಪಡೆದ ಬೌಲರ್ ಅರ್ಷದೀಪ್‌ ಸಿಂಗ್, ತಮ್ಮ ಎರಡನೇ ಓವರ್‌ನಲ್ಲಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ಇವರು ಈ ಓವರ್‌ನಲ್ಲಿ ಬರೋಬ್ಬರಿ 27 ರನ್ ಬಿಟ್ಟುಕೊಟ್ಟರು. ಭಾರತದ ಪರ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಅರ್ಷದೀಪ್ ಹಾಗೂ ಪ್ರಸಿದ್ಧ್ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ರವಿ ಬಿಷ್ಣೋಯಿ

ಕೊನೆಯ ಐದು ಓವರ್‌ಗಳಲ್ಲಿ ಇಂಗ್ಲೆಂಡ್‌ಗೆ 49 ರನ್‌ಗಳು ಬೇಕಾಗಿದ್ದವು. ಬಿಷ್ಣೋಯ್ 16 ನೇ ಓವರ್ ಬೌಲ್ ಮಾಡಲು ಮುಂದಾದರು. ಇವರು ಈ ಓವರ್‌ನ ಮೊದಲ ಎಸೆತವನ್ನು ನೋಬಾಲ್ ಮಾಡಿದರು. ಇದರ ಸಂಪೂರ್ಣ ಲಾಭ ಪಡೆದ ಜಾಕೋಬ್ ಬೆಥೆಲ್ ಫ್ರಿ ಹಿಟ್‌ನಲ್ಲಿ ಸಿಕ್ಸರ್ ಬಾರಿಸಿದರು. ಎರಡನೇ ಎಸೆತ ಡಾಟ್ ಆಯಿತು. ಮೂರನೇ ಎಸೆತ ನೋಬಾಲ್ ಆಗಿತ್ತು. ಮತ್ತೆ ಬೆಥೆಲ್‌ ಸಿಕ್ಸರ್ ಸಿಡಿಸಿದರು. ಈ ಓವರ್‌ನಲ್ಲಿ ಬಿಷ್ಣೋಯಿ 9 ಎಸೆತ ಎಸೆದು 29 ರನ್‌ ಬಿಟ್ಟುಕೊಟ್ಟರು. ಇಲ್ಲಿಂದ ಇಂಗ್ಲೆಂಡ್ ಪಂದ್ಯದ ಮೇಲೆ ಬಿಗಿ ಹಿಡಿತವನ್ನು ಸಾಧಿಸಿ ಪಂದ್ಯವನ್ನು ಗೆದ್ದಿತು.

ಮೂರನೇ ಟಿ20 ಪಂದ್ಯ ಗೆಲ್ಲುವ ಅನಿವಾರ್ಯತೆ

ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಅನಿವಾರ್ಯತೆ ಇದೆ. ಈಗಾಗಲೇ ಇಂಗ್ಲೆಂಡ್‌ 1-0 ಮುನ್ನಡೆ ಸಾಧಿಸಿದ್ದು, ಭಾರತ ಸರಣಿಯನ್ನು ಗೆಲ್ಲುವ ಕನಸು ಕಂಡಿದ್ದರೆ ಉಳಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸುವುದು ಅನಿವಾರ್ಯವಾಗಿದೆ.

Story first published: Sunday, July 5, 2026, 0:08 [IST]
Other articles published on Jul 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+