For Quick Alerts
ALLOW NOTIFICATIONS  
For Daily Alerts
 

Rishabh Pant ಫ್ಯಾನ್ಸ್‌ಗೆ ಖುಷಿ ಸುದ್ದಿ, ಈ ಬಾರಿ ಐಪಿಎಲ್‌ನಲ್ಲಿ ಕಣಕ್ಕೆ ಇಳಿಯುವುದು ಫಿಕ್ಸ್

ಟೀಮ್ ಇಂಡಿಯಾದ ಯುವ ಬ್ಯಾಟರ್‌ ಹಾಗೂ ಸ್ಟಾರ್ ವಿಕೆಟ್‌ ಕೀಪರ್‌ ರಿಷಭ್ ಪಂತ್‌ ಕಾರು ಚಲಾಯಿಸುವಾಗ ಅಪಘಾತಕ್ಕೆ ಈಡಾಗಿ, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ಫೋಟ್‌ಗಳನ್ನು ಶೇರ್ ಮಾಡಿದ್ದರು. ಈಗ ಟೀಮ್ ಇಂಡಿಯಾ ಯುವ ಆಟಗಾರನ ಬಗ್ಗೆ ಐಪಿಎಲ್‌ ಫ್ರಾಂಚೈಸಿ ಮಾಹಿತಿಯನ್ನು ನೀಡಿದೆ. ಈ ಸುದ್ದಿ ನಿಜಕ್ಕೂ ರಿಷಭ್ ಪಂತ್ ಅಭಿಮಾನಿಗಳಿಗೆ ಫುಲ್‌ ಖುಷಿ ನೀಡಲಿದೆ.

ಟೀಮ್ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್-2024 ರಿಂದ ಮೈದಾನಕ್ಕೆ ಮರಳಲಿದ್ದಾರೆ. ಫೆಬ್ರವರಿಯಲ್ಲಿ ಪಂತ್ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ ಎಂದು ಅವರ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದಿನ ಋತುವಿನಲ್ಲಿ ಅವರು ಡೆಲ್ಲಿ ತಂಡವನ್ನು ಐಪಿಎಲ್‌ನಲ್ಲಿ ಮುನ್ನಡೆಸಲಿದ್ದಾರೆ. ವಿಕೆಟ್ ಕೀಪಿಂಗ್ ಅಲ್ಲದಿದ್ದರೆ, ಪಂತ್ ಖಂಡಿತವಾಗಿಯೂ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾಡುವುದನ್ನು ಅಭಿಮಾನಿಗಳು ನೋಡಬಹುದು.

Team Indias wicketkeeper batsman Rishabh Pant will return to the field from the IPL

ಪಂತ್ ಅವರ ವಾಪಸಾತಿಯು ಅವರ ಫಿಟ್ನೆಸ್ ಮತ್ತು ಬಿಸಿಸಿಐ ವೈದ್ಯಕೀಯ ತಂಡದಿಂದ ಅನುಮತಿಯನ್ನು ಅವಲಂಬಿಸಿರುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ಮುಂದಿನ ಐಪಿಎಲ್ ಸೀಸನ್ ಮಾರ್ಚ್-ಏಪ್ರಿಲ್ ನಲ್ಲಿ ನಡೆಯಬಹುದು. ಇದಕ್ಕಾಗಿ ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ.

ಒಂದು ವರ್ಷದ ಹಿಂದೆ ಡಿಸೆಂಬರ್ 30 ರಂದು ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದಾಗ ಪಂತ್ ಕಾರು ಅಪಘಾತದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಅವರ ತಲೆ ಮತ್ತು ಕಾಲುಗಳ ಮೇಲೆ ಗಾಯವಾಗಿತ್ತು. ಅವರ ಮೊಣಕಾಲಿಗೆ ಆಪರೇಷನ್ ಕೂಡ ಆಗಿತ್ತು. ಪ್ರಸ್ತುತ, ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ತಜ್ಞರ ಮೇಲ್ವಿಚಾರಣೆಯಲ್ಲಿ ಪುನರ್ವಸತಿ ಮಾಡುತ್ತಿದ್ದಾರೆ.

Team Indias wicketkeeper batsman Rishabh Pant will return to the field from the IPL

ಪಂತ್ ಗಾಯದಿಂದ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. 5 ದಿನಗಳ ಹಿಂದೆ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿರುವಾಗ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ತೂಕವನ್ನು ಎತ್ತುವ ಜೊತೆಗೆ ಸೈಕ್ಲಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಅಪಘಾತದ ನಂತರ ಪಂತ್ ಸುಮಾರು ಒಂದು ವರ್ಷದಿಂದ ರಿಷಭ್ ಪಂತ್ ಕ್ರಿಕೆಟ್‌ನಿಂದ ದೂರವಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 2024 ರ ಐಪಿಎಲ್‌ಗೆ ನಾಯಕನಾಗಿ ಉಳಿಸಿಕೊಂಡಿದೆ.

ಡಿಸೆಂಬರ್ 30 ರಂದು ಕಾರು ಅಪಘಾತ

ಡಿಸೆಂಬರ್ 30 ರಂದು ನಡೆದ ರಸ್ತೆ ಅಪಘಾತದಲ್ಲಿ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಸ್ವಲ್ಪದರಲ್ಲೇ ಪಾರಾಗಿದ್ದರು. ಅವರ ಮರ್ಸಿಡಿಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ಬೆಂಕಿ ಹೊತ್ತಿಕೊಂಡು ಪಲ್ಟಿಯಾಗಿದೆ. ಅಪಘಾತದ ನಂತರ, ಪಂತ್ ಸ್ವತಃ ಬೆಂಕಿಯ ಕಾರಿನ ಕಿಟಕಿಯನ್ನು ಒಡೆದು ಹೊರಬಂದರು. ಜನರು ಅವರನ್ನು ರಕ್ಷಿಸಿದ್ದರು.

Team Indias wicketkeeper batsman Rishabh Pant will return to the field from the IPL

ಫೆಬ್ರವರಿ 10 ರಂದು ಪಂತ್ ಗಾಯದ ನಂತರ ಚೇತರಿಸಿಕೊಂಡ ಮೊದಲ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಕೋಲಿನ ಸಹಾಯದಿಂದ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂತು. ಪಂತ್ ಅವರು ಚೇತರಿಸಿಕೊಂಡ ಬಗ್ಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇದ್ದರು.

Story first published: Tuesday, December 12, 2023, 8:16 [IST]
Other articles published on Dec 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+