For Quick Alerts
ALLOW NOTIFICATIONS  
For Daily Alerts
 

ಗೆಳೆಯನೇ ಆದ ಶತ್ರು: ಟೀಮ್ ಇಂಡಿಯಾದಲ್ಲಿ ಚಹಾಲ್‌ ಗೇಮ್ ಓವರ್

ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ತಮ್ಮ ಗೆಳೆತನದಿಂದಲೇ ಭಾರೀ ಫೇಮಸ್‌.. ಈ ಜೋಡಿ ಅಂಗಳದಲ್ಲಿ ಇದ್ದಾಗಲೂ ಎದುರಾಳಿ ಬೌಲರ್‌ಗಳನ್ನು ಕಾಡುತ್ತಿತ್ತು. ಆದರೆ ಈಗ ಈ ಜೋಡಿ ಮೈದಾನದಲ್ಲಿ ಒಟ್ಟಿಗೆ ಕಾಣದೇ ವರ್ಷಗಳೇ ಆಗಿವೆ. ಇದರಿಂದ ಅಭಿಮಾನಿಗಳಿಗೆ ನಿರಾಸೆ ಆಗಿದೆ.

ಒಂದು ತುದಿಯಲ್ಲಿ ಲೆಗ್‌ ಸ್ಪಿನ್‌ ಹಾಗೂ ಇನ್ನೊಂದು ತುದಿಯಲ್ಲಿ ಚೈನಾ ಮೆನ್‌ ಶೈಲಿಯ ಬೌಲರ್‌ ಎದುರಾಳಿ ಬ್ಯಾಟರ್‌ಗಳಿಗೆ ಸತತ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದರಿಂದ ಬ್ಯಾಟರ್‌ಗಳಿಗೆ ಕನ್ಫ್ಯೂಸ್ ಆಗುತ್ತಿತ್ತು. ವಿಕೆಟ್‌ಗಳು ಪಟಪಟನೇ ಬೀಳುತ್ತಿದ್ದವು. ಆದರೆ ಈಗ ಮೈದಾನದಲ್ಲಿ ಸ್ನೇಹಿತನಲ್ಲಿದೆ ಏಕಾಂಗಿ ಆಗಿರುವ ಬೌಲರ್‌ ಪೇಚಾಡುತ್ತಿದ್ದಾರೆ.

Team indias Yuzvendra Chahal will have to wait as Kuldeep Yadav grabbed his chance in T20Is

ಈ ಜೋಡಿ ಟೀಮ್ ಇಂಡಿಯಾದ ಹಲವು ಜಯದಲ್ಲಿ ಮಿಂಚಿದೆ. ಈ ಜೋಡಿ ತಮ್ಮ ಗೆಳೆತನದಿಂದಲೇ ಹೆಸರುವಾಸಿ. ಈ ಜೋಡಿ ಸ್ಪಿನ್‌ ಬೌಲರ್ಸ್‌ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲ್‌ದೀಪ್ ಯಾದವ್.. ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್‌ ಯಾದವ್‌ ಅವರ ಸ್ನೇಹವನ್ನು ನೋಡಿದ ಕ್ರಿಕೆಟ್‌ ಜಗತ್ತು ಇವರನ್ನು ಕುಲ್ಚಾ ಎಂದೇ ಕರೆಯುತ್ತಿತ್ತು.

ಒಂದು ಕಡೆ ಚಹಾಲ್‌ ಫ್ಲೈಟೆಡ್‌, ಲೆಗ್‌ ಸ್ಪಿನ್‌ ಎಸೆದು ಎದುರಾಳಿಗಳಿಗೆ ಖೆಡ್ಡಾ ತೋಡುತ್ತಾ ಇದ್ದರೆ, ಇತ್ತ ಕುಲ್‌ದೀಪ್‌ ಯಾದವ್ ತನ್ನ ವಿಶಿಷ್ಠ ಬೌಲಿಂಗ್ ಶೈಲಿಯಿಂದಲೇ ಎದುರಾಳಿ ಬೌಲರ್‌ಗಳನ್ನು ಕಾಡುತ್ತಿದ್ದರು.

ಮೈದಾನದಲ್ಲಿ ಈ ಜೋಡಿಯ ಜುಗಲ್‌ಬಂಧಿ ಸದಾ ಕಾಣಿಸುತ್ತಿತ್ತು. ಮೈದಾನದ ಹೊರಗಂತೂ ಅವರಿಬ್ಬರ ನಡುವೆ ಅಪಾರ ಸ್ನೇಹವಿತ್ತು. ಇವರಿಬ್ಬರಿಲ್ಲದಿದ್ದರೆ ಟೀಂ ಇಂಡಿಯಾ ತಂಡ ಪೂರ್ಣಗೊಳ್ಳುತ್ತಿರಲಿಲ್ಲ, ಆದರೆ ಕಾಲ ಬದಲಾಯಿತು ಮತ್ತು ಅದೃಷ್ಟವೂ ತಿರುವು ಪಡೆಯಿತು.

ಕುಲದೀಪ್ ಕಷ್ಟದ ಸಂದರ್ಭಗಳಿಂದ ಹೊರಬಂದು ಎರಡೂ ಕೈಗಳಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದರು. ಚಹಾಲ್ ತನ್ನ ಸ್ಥಾನವನ್ನು ತಂಡದಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ವಿಫಲರಾದರು. ಇಂತಹ ಪರಿಸ್ಥಿತಿಯಲ್ಲಿ ಇದೀಗ ಕುಲದೀಪ್ ನಿರಂತರವಾಗಿ ಟೀಂ ಇಂಡಿಯಾ ಪರ ಆಡುತ್ತಿದ್ದು, ಚಹಾಲ್ ಗೆ ಟೀಂ ಇಂಡಿಯಾಗೆ ವಾಪಸ್‌ ಬರುವುದು ಕಷ್ಟ.

Team indias Yuzvendra Chahal will have to wait as Kuldeep Yadav grabbed his chance in T20Is

ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಡೌಟ್?

ಯುಜ್ವೇಂದ್ರ ಚಹಾಲ್ ವಿಶ್ವದ ಅತ್ಯುತ್ತಮ ಲೆಗ್ ಸ್ಪಿನ್ನರ್‌. ಆದರೆ ಕುಲದೀಪ್ ಯಾದವ್ ಅವರ ಅತ್ಯುತ್ತಮ ಫಾರ್ಮ್‌ನಿಂದಾಗಿ ಅವರು ತಮ್ಮಅವಕಾಶಕ್ಕಾಗಿ ಕಾಯಬೇಕಾಗಿದೆ. ಚೈನಾ ಮೆನ್ ಬೌಲರ್‌ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದ್ದಾರೆ.

ಇದರಿಂದ ಅವರ ಸ್ಥಾನ ತಂಡದಲ್ಲಿ ಭದ್ರವಾಗಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ಗೆ ಚಹಾಲ್ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಕುಲ್‌ದೀಪ್‌ ಅಮೋಘ ಬೌಲಿಂಗ್ ನಡೆಸಿ ಕಾಡಿದರು.

ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಚಹಾಲ್‌ ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡುವುದು ಕಷ್ಟವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದರೂ ಸಹ, ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗುತ್ತಿರುವುದು ಚಹಾಲ್ ಚಿಂತೆ ಹೆಚ್ಚಿಸಿದೆ. ಗಾಯದಿಂದ ತಂಡಕ್ಕೆ ಕಮ್‌ ಬ್ಯಾಕ್ ಮಾಡಿರುವ ಕುಲ್‌ದೀಪ್ ಯಾದವ್ ಅಮೋಘ ಬೌಲಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದಾರೆ. ಸದ್ಯಕ್ಕಂತೂ ಇವರನ್ನು ಹೊರಗಿಟ್ಟು ತಂಡವನ್ನು ಕಟ್ಟುವ ಯೋಚನೆಯನ್ನು ಸಹ ಟೀಮ್ ಇಂಡಿಯಾ ಮಾಡುವ ಯೋಚನೆಯನ್ನು ಸಹ ಮಾಡುವುದಿಲ್ಲ.

ಕುಲ್ಚಾ ಅಂಕಿ ಅಂಶ

ಇನ್ನು ಕುಲ್ಚಾ ಜೋಡಿಯ ಅಂಕಿ ಅಶಂಗಳ ಮೇಲೆ ಕಣ್ಣು ಹಾಯಿಸಿದರೆ ಯಾರು ತಂಡಕ್ಕೆ ಬೆಸ್ಟ್‌ ಅನ್ನೋದು ತಿಳಿಯುತ್ತದೆ. ಟಿ20 ಕ್ರಿಕೆಟ್‌ನಲ್ಲಿ ಚಹಾಲ್ 79 ಪಂದ್ಯಗಳಲ್ಲಿ 96 ವಿಕೆಟ್‌ ಪಡೆದಿದ್ದರೆ, ಕುಲ್‌ದೀಪ್‌ 33 ಟಿ20 ಪಂದ್ಯಗಳಲ್ಲಿ 58 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಚಹಾಲ್‌ 5.36 ಎಕನಾಮಿಯೊಂದಿಗೆ 121 ವಿಕೆಟ್‌ ಪಡೆದರೆ, ಯಾದವ್ 5.55 ಎಕನಾಮಿಯೊಂದಿಗೆ 168 ವಿಕೆಟ್‌ ಉರುಳಿಸಿದ್ದಾರೆ.

Story first published: Thursday, January 11, 2024, 13:30 [IST]
Other articles published on Jan 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+