Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 RCB: ಲೀಗ್‌ ಹಂತದಲ್ಲಿ ಹೇಗಿದೆ ಆರ್‌ಸಿಬಿ ತಂಡದ ಪ್ರದರ್ಶನ?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರಸಕ್ತ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಈ ವೇಳೆ ಒಟ್ಟಾರೆ ತಂಡದ ಪ್ರದರ್ಶನ ಅಮೋಘವಾಗಿದೆ. ಆರ್‌ಸಿಬಿ ತಂಡ ಗೆದ್ದಿರುವ 9 ಪಂದ್ಯಗಳಲ್ಲಿ, 8 ವಿಭಿನ್ನ ಆಟಗಾರರಿಗೆ ಪಂದ್ಯ ಶ್ರೇಷ್ಠ ಲಭಿಸಿರುವುದು ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆರ್‌ಸಿಬಿ ಈ ಬಾರಿ ಒನ್ ಮ್ಯಾನ್‌ ಶೋ ನಡೆಸುತ್ತಿಲ್ಲ. ಬದಲಿಗೆ ಈ ತಂಡ ಟೀಮ್ ಶೋ ನಡೆಸುತ್ತಿದೆ ಎಂಬ ಸಮಾಧಾನ ಅಭಿಮಾನಿಗಳ ಮನದಲ್ಲಿ ಮೂಡಿದೆ. ಆರ್‌ಸಿಬಿ ಆಟಗಾರರ ಪ್ರದರ್ಶನ ಹೇಗಿದೆ ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಆರ್‌ಸಿಬಿ ಆಡಿರುವ 14 ಪಂದ್ಯಗಳಲ್ಲಿ 9 ಜಯ ಸಾಧಿಸಿದ್ದು, 19 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್‌ಸಿವಿ ದಾಖಲೆಯ ಮೊತ್ತವನ್ನು ಚೇಸ್ ಮಾಡಿ ಗೆದ್ದಿದೆ. ತಂಡ ಸಂಘಟಿತ ಆಟದ ಪ್ರದರ್ಶನ ನೀಡಿರುವುದೇ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಆರ್‌ಸಿಬಿ ಈ ಸಂಘಟಿತ ಆಟದಲ್ಲಿ ಎದ್ದು ಕಾಣುವ ಪ್ರದರ್ಶದ ಬಗ್ಗೆ ಮಾಹಿತಿ ಇಲ್ಲಿದೆ.

Team Show Not One-Man Show RCB s All-Round Brilliance in League Stage

ಆರಂಭಿಕರು

ಆರ್‌ಸಿಬಿ ತಂಡದ ಆರಂಭಿಕರು, ಲೀಗ್‌ ಉದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದಾರೆ. ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದು, ಜಯದಲ್ಲಿ ಮಿಂಚಿದ್ದಾರೆ. ಈ ಲೀಗ್‌ನಲ್ಲಿ ಒಟ್ಟು ಮೂವುರು ಆಟಗಾರರು ಆರಂಭಿಕರಾಗಿ ಕಾಣಿಸಿಕೊಂಡಿದ್ದಾರೆ. ಈ ಆರಂಭಿಕ ಆಟಗಾರರ ಪ್ರದರ್ಶನ ಅಮೋಘವಾಗಿದೆ. ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಭರವಸೆಯ ಓಪನರ್‌ ಆಗಿ ಕಾಣಿಸಿಕೊಂಡರೆ, ಸಾಲ್ಟ್ ಗಾಯಕ್ಕೆ ತುತ್ತಾದ ಜಾಕಬ್‌ ಬೇತೆಲ್‌ ಸಹ ಕಣಕ್ಕೆ ಇಳಿದು ಅಬ್ಬರಿಸಿದ್ದಾರೆ. ವಿರಾಟ್ ಈ ಲೀಗ್‌ನಲ್ಲಿ 8 ಅರ್ಧಶತಕಗಳನ್ನು ಬಾರಿಸಿದ್ದು ಭರವಸೆ ಮೂಡಿಸಿದ್ದಾರೆ.

ಫಿಲ್‌ ಸಾಲ್ಟ್‌, 11 ಪಂದ್ಯ, 331 ರನ್‌, 3 ಅರ್ಧಶತಕ
ವಿರಾಟ್ ಕೊಹ್ಲಿ, 13 ಪಂದ್ಯ, 602 ರನ್‌, 8 ಅರ್ಧಶತಕ
ಜಾಕಬ್‌ ಬೆತೆಲ್, 2 ಪಂದ್ಯ, 67 ರನ್‌, 1 ಅರ್ಧಶತಕ

ಮಿಡ್ಲ್ ಆರ್ಡರ್‌

ಆರ್‌ಸಿಬಿ ತಂಡದ ಮಿಡ್ಲ್ ಆರ್ಡರ್‌ ಸಹ ಬಲಾಢ್ಯವಾಗಿದೆ. ಟಾಪ್‌ ಆರ್ಡರ್‌ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿದಾಗ, ಮಿಡ್ಲ್ ಆರ್ಡರ್‌ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ನಾಯಕ ರಜತ್‌ ಪಾಟಿದಾರ್‌, ಮಯಾಂಕ್‌ ಅಗರ್‌ವಾಲ್‌ ಸೇರಿದಂತೆ ಸ್ಟಾರ್ ಆಟಗಾರರು ರನ್‌ ಕಲೆ ಹಾಕುತ್ತಿದ್ದಾರೆ.

ರಜತ್‌ ಪಾಟಿದಾರ್‌, 13 ಪಂದ್ಯ, 271 ರನ್‌
ಮಯಾಂಕ್‌ ಅಗರ್‌ವಾಲ್‌, 2 ಪಂದ್ಯ, 52 ರನ್‌
ಕೃನಾಲ್‌ ಪಾಂಡ್ಯ, 13 ಪಂದ್ಯ, 105 ರನ್‌

ಫಿನಿಷರ್‌

ಆರ್‌ಸಿಬಿ ತಂಡದಲ್ಲಿ ಈ ಬಾರಿ ಫಿನಿಷರ್‌ಗಳ ದಂಡೇ ಇದೆ. ಈ ಆಟಗಾರರು ತಂಡದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಿ ತಂಡಕ್ಕೆ ನೆರವಾಗಬಲ್ಲರು. ಇವರು ಡೆತ್‌ ಓವರ್‌ಗಳಲ್ಲಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲರು. ಅಲ್ಲದೆ ತಂಡ ಬೃಹತ್ ಮೊತ್ತವನ್ನು ಕಲೆ ಹಾಕುವುದಿರಲಿ ಅಥವಾ ಬಿಗ್‌ ಸ್ಕೋರ್‌ ಚೇಸ್‌ ಮಾಡುವುದಿರಲಿ ಇವರ ಪಾತ್ರ ಮುಖ್ಯ.

ಟೀಮ್ ಡೇವಿಡ್‌, 12 ಪಂದ್ಯ, 187 ರನ್‌, 1 ಅರ್ಧಶತಕ
ಜಿತೇಶ್‌ ಶರ್ಮಾ, 13 ಪಂದ್ಯ, 237 ರನ್‌, 1 ಅರ್ಧಶತಕ
ರೊಮಾರಿಯೊ ಶೆಫರ್ಡ್‌, 6 ಪಂದ್ಯ, 53, 1 ಅರ್ಧಶತಕ

Team Show Not One-Man Show RCB s All-Round Brilliance in League Stage

ಪೇಸರ್ಸ್‌

ಆರ್‌ಸಿಬಿ ತಂಡದ ಪೇಸರ್‌ಗಳು ಬಿಗುವಿ ದಾಳಿಯನ್ನು ನಡೆಸಬಲ್ಲರು. ಈ ವೇಗಿಗಳು ತಮ್ಮ ಕರಾರುವಕ್ ದಾಳಿಯಿಂದ ಬ್ಯಾಟರ್‌ಗಳನ್ನು ಕಾಡಬಲ್ಲರು. ಇವರು ಪವರ್‌ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬಲ್ಲರು.

ಜೋಶ್‌ ಹ್ಯಾಜಲ್‌ವುಡ್, 10 ಪಂದ್ಯ, 18 ವಿಕೆಟ್‌
ಭುವನೇಶರ್ ಕುಮಾರ್‌, 12 ಪಂದ್ಯ, 14 ವಿಕೆಟ್‌
ಯಶ್‌ ದಯಾಳ್‌, 13 ಪಂದ್ಯ, 10 ವಿಕೆಟ್‌
ರೊಮಾರಿಯೊ ಶೆಫರ್ಡ್‌, 6 ಪಂದ್ಯ, 4 ವಿಕೆಟ್‌

ಸ್ಪಿನ್ ಬೌಲರ್ಸ್‌

ಆರ್‌ಸಿಬಿ ತಂಡದ ಸ್ಪಿನ್ ಬೌಲರ್‌ಗಳು ಶಿಸ್ತು ಬದ್ಧ ದಾಳಿ ನಡೆಸುತ್ತಿದ್ದಾರೆ. ಇವರು ಮಿಡ್ಲ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಇವರು ತಮ್ಮ ಪಿರ್ಕಿಯಿಂದ ಎದುರಾಳಿಗಳನ್ನು ಕಾಡಬಲ್ಲರು.

ಕೃನಾಲ್‌ ಪಾಂಡ್ಯ, 13 ಪಂದ್ಯ, 15 ವಿಕೆಟ್‌
ಸುಯೇಶ್ ಶರ್ಮಾ, 12 ಪಂದ್ಯ, 5 ವಿಕೆಟ್‌

Story first published: Wednesday, May 28, 2025, 21:23 [IST]
Other articles published on May 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+