ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನಕ್ಕೆ ಮಾತ್ರವಲ್ಲದೆ ಈ ತಂಡಗಳಿಗೂ ಬಾಂಗ್ಲಾದೇಶ ಶಾಕ್
ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಥಿತಿ ಹದಗೆಟ್ಟಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಪಾಕಿಸ್ತಾನ ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಗಿದೆ. ತವರಿನಲ್ಲಿ ಪಾಕಿಸ್ತಾನವನ್ನು ವೈಟ್‌ವಾಶ್ ಮಾಡುವ ಮೂಲಕ ಬಾಂಗ್ಲಾದೇಶ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಮುಂದಾಗುತ್ತಿದೆ.
ಇದಕ್ಕೂ ಮುನ್ನ ಬಾಂಗ್ಲಾದೇಶ ಕೆಲವು ಟೆಸ್ಟ್ ಸರಣಿಗಳಲ್ಲಿ ಇಂತಹ ಸಾಧನೆಗಳನ್ನು ಮಾಡಿದೆ. ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಟೆಸ್ಟ್ ಸರಣಿ ಗೆದ್ದಿರುವುದು ಇದೇ ಮೊದಲು. ಇದು ಬಾಂಗ್ಲಾದೇಶಕ್ಕೆ ಐತಿಹಾಸಿಕ ಜಯವಾಗಲಿದೆ. ಏಕೆಂದರೆ ಪಾಕಿಸ್ತಾನ ತಂಡ ತನ್ನ ನೆಲದಲ್ಲೇ ತೀವ್ರ ಮುಖಭಂಗ ಅನುಭವಿಸಿದೆ.

ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ 10 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸುವ ಮೂಲಕ ದಾಖಲೆ ಬರೆದಿತ್ತು. ಇದಾದ ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಬಾಂಗ್ಲಾದೇಶ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ. ಪಾಕಿಸ್ತಾನ 8ನೇ ಸ್ಥಾನದಲ್ಲಿ ಉಳಿದಿದೆ.
ವೆಸ್ಟ್ ಇಂಡೀಸ್‌ಗೆ ಮೊದಲ ಶಾಕ್
ಮೊದಲ ಬಾರಿಗೆ 2000ರಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ತಂಡವು ತನ್ನ ಟೆಸ್ಟ್ ಅಭಿಯಾನವನ್ನು ಆರಂಭಿಸಿತ್ತು.
ಈ ವೇಳೆ ಟೀಮ್ ಇಂಡಿಯಾ ಎದುರು 1-0 ಅಂತರದಿಂದ ಸೋಲನ್ನು ಎದುರಿಸಬೇಕಾಯಿತು. ಇದಾದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬಾಂಗ್ಲಾದೇಶ ಎರಡು ಬಾರಿ ಸೋಲಿಸಿ ದಾಖಲೆ ಬರೆದಿದೆ.
2009 ರಲ್ಲಿ ಬಾಂಗ್ಲಾದೇಶ ತಂಡವು ವೆಸ್ಟ್ ಇಂಡೀಸ್ ಅನ್ನು 2-0 ಅಂತರದಲ್ಲಿ ಸೋಲಿಸಿತ್ತು. ನಂತರ ಮತ್ತೊಮ್ಮೆ 2018-19 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶ ಗೆಲುವಿನ ನಗೆ ಬೀರಿತ್ತು.
ನ್ಯೂಜಿಲೆಂಡ್‌ಗೆ ಪೈಪೋಟಿ
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಸರಣಿಗಳನ್ನು ಗೆದ್ದಿರುವ ತಂಡಗಳಲ್ಲಿ ಬಾಂಗ್ಲಾದೇಶ ಕೂಡ ಒಂದು. ಆದರೆ ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಪಂದ್ಯದ ಗತಿಯನ್ನೇ ಬದಲಾಯಿಸುವ ಆಟಗಾರರ ದಂಡೆ ಬಾಂಗ್ಲಾ ಪಾಳಯದಲ್ಲಿದೆ. ವೆಸ್ಟ್ ಇಂಡೀಸ್ ಬಳಿಕ ಜಿಂಬಾಬ್ವೆ ಮತ್ತು ಐರ್ಲೆಂಡ್‌ನಂತಹ ತಂಡಗಳ ವಿರುದ್ಧ ಬಾಂಗ್ಲಾ ಮುನ್ನಡೆ ಸಾಧಿಸಿದೆ.
2023ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಹೊಂದಿರುವ ತಂಡ. ಇಂತಹ ತಂಡವನ್ನೇ ಸೋಲಿನ ಸುಳಿಗೆ ಬಾಂಗ್ಲಾ ಸಿಲುಕಿಸಿತ್ತು.
ಇದೀಗ ಪಾಕಿಸ್ತಾನದ ನಂತರ ಟೀಮ್ ಇಂಡಿಯಾಕ್ಕೂ ಬಾಂಗ್ಲಾದೇಶ ರೆಡ್ ಅಲರ್ಟ್ ನೀಡಿದೆ. ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬಾಂಗ್ಲಾದೇಶ ಪ್ರವಾಸ ಕೈ ಗೊಳ್ಳಲಿದೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಬಾಂಗ್ಲಾದೇಶ ತಂಡ ಲಘುವಾಗಿ ತೆಗೆದುಕೊಳ್ಳವಂತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications