Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇರ್ಫಾನ್ ಪಠಾಣ್, ವಿಕ್ರಮ್ ಅಭಿನಯದ 'ಕೋಬ್ರಾ' ಟೀಸರ್ ರಿಲೀಸ್

Teaser of Irfan Pathan and Chiyaan Vikram starrer Cobra released

ನವದೆಹಲಿ: ಭಾರತದ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ಚಿಯಾನ್ ವಿಕ್ರಮ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ 'ಕೋಬ್ರಾ' ತಮಿಳು ಚಿತ್ರದಲ್ಲಿ ಪಠಾಣ್ ಪಾತ್ರವಹಿಸಿದ್ದಾರೆ. ಚಿತ್ರದ ಟೀಸರ್ ಶನಿವಾರ (ಜನವರಿ 9) ಬೆಳಗ್ಗೆ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ವೀಕ್ಷಣೆಗೂ ಒಳಗಾಗಿದೆ.

ಕೋಬ್ರಾ ಸಿನಿಮಾವನ್ನು ಬ್ಲಾಕ್‌ಬಾಸ್ಟರ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಅಜಯ್ ಜ್ಞಾನಮುತ್ತು ಅವರು ನಿರ್ದೇಶಿಸಿದ್ದಾರೆ. ಇರ್ಫಾನ್ ಪಠಾಣ್ ಅವರು ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ಚಿತ್ರ ತಂಡ ಕಳೆದ ವರ್ಷವೇ ಸುಳಿವು ನೀಡಿತ್ತು. ಹೀಗಾಗಿ ಕಳೆದ ವರ್ಷದಿಂದಲೇ ಸಿನಿಪ್ರಿಯರು ಚಿತ್ರದ ಬಗ್ಗೆ ಕುತೂಹಲವನ್ನಿರಿಸಿಕೊಂಡಿದ್ದರು.

ಲೀಡ್‌ ರೋಲ್‌ನಲ್ಲಿರುವ ನಾಯಕ ವಿಕ್ರಮ್ ಜೀನಿಯಸ್ ಗಣಿತಜ್ಞರಾಗಿದ್ದರೆ, ಅವರ ನಂತರದ ಪ್ರಮುಖ ಪಾತ್ರದಲ್ಲಿರುವ ಕ್ರಿಕೆಟರ್ ಇರ್ಫಾನ್‌ ಪಠಾಣ್ ಅವರು ಟರ್ಕಿಯ ಇಂಟರ್‌ಪೂಲ್ ಆಫಿಸರ್ ಆಗಿ ನಟಿಸಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಆರ್‌ ರೆಹ್ಮಾನ್ ಅವರು ಸಂಗೀತ ನೀಡಿದ್ದಾರೆ.

2020ರ ಜನವರಿ 4ಕ್ಕೆ ಇರ್ಫಾನ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆಡುತ್ತಿದ್ದಾಗ ಭಾರತದ ಪ್ರಮುಖ ಬೌಲಿಂಗ್‌ ಆಲ್‌ ರೌಂಡರ್‌ಗಳಲ್ಲಿ ಗುರುತಿಸಿಕೊಂಡಿದ್ದ ಇರ್ಫಾನ್, 29 ಟೆಸ್ಟ್ ಪಂದ್ಯಗಳಲ್ಲಿ 1105 ರನ್, 100 ವಿಕೆಟ್‌, 120 ಏಕದಿನ ಪಂದ್ಯಗಳಲ್ಲಿ 1544 ರನ್, 173 ವಿಕೆಟ್‌, 24 ಟಿ20ಐ ಪಂದ್ಯಗಳಲ್ಲಿ 172 ರನ್, 28 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Saturday, January 9, 2021, 15:36 [IST]
Other articles published on Jan 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+