ಅಮೆರಿಕ ಮಹಿಳಾ ಕ್ರಿಕೆಟ್ ತಂಡಕ್ಕೆ ತೆಲಂಗಾಣದ ಸಿಂಧೂಜಾ ಆಯ್ಕೆ
ಹೈದರಾಬಾದ್, ಜೂನ್ 28 : ತೆಲಂಗಾಣದ ಯುವ ಕ್ರಿಕೆಟ್ ಆಟಗಾರ್ತಿ ಸಿಂಧೂಜಾ ರೆಡ್ಡಿ ಅವರು ಅಮೆರಿಕ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
26 ವರ್ಷ ವಯಸ್ಸಿನ ಸಿಂಧೂಜಾ ನಲಗೊಂಡ ಜಿಲ್ಲೆಯ ಅಮಂಗಲ್ ಎಂಬ ಹಳ್ಳಿಯವರಾಗಿದ್ದು, ಆಗಸ್ಟ್ ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟಿ-20 ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡಲು ಸಿಂಧೂಜಾ ಈಗಾಗಲೇ ಅಮೆರಿಕ ತಂಡವನ್ನು ಸೇರಿಕೊಂಡಿದ್ದಾರೆ.

ವಿಕೆಟ್ ಕೀಪರ್ ಮತ್ತು ಬ್ಯಾಟಿಂಗ್ ಮಾಡುವ ಸಿಂಧೂಜಾ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹೈದರಾಬಾದ್ ಪರ ಆಡಿದ್ದರು. ಸಿಂಧೂಜಾ 2020ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅಮೆರಿಕ ಮಹಿಳಾ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಬಿಟೆಕ್ ಮತ್ತು ಎಂಬಿಎ ಪದವಿಧರೆಯಾಗಿರುವ ಸಿಂಧೂಜಾ ಶಾಲೆಯಲ್ಲಿ ವ್ಯಾಸಂಗ ಮಾಡುವಾಗಲೇ 19 ವರ್ಷದೊಳಗಿನ ಹೈದರಾಬಾದ್ ತಂಡದ ನಾಯಕಿಯಾಗಿದ್ದರು.
ಸಿಂಧೂಜಾ, ಸಿದ್ಧಾರ್ಥ್ ರೆಡ್ಡಿ ಎಂಬುವವರನ್ನು ಮದುವೆಯಾದ ಬಳಿಕ ಅಮೆರಿಕಕ್ಕೆ ತೆರಳಿದ ಸಿಂಧೂಜಾ, ಅಲ್ಲಿನ ಕ್ಲಬ್‌ಗಳಲ್ಲಿ ಆಡಲು ಆರಂಭಿಸಿದರು. ಈ ಸತತ ಪರಿಶ್ರಮದ ಫಲವಾಗಿ ಸಿಂಧೂಜಾಗೆ ಅಮೆರಿಕ ತಂಡದಲ್ಲಿ ಸ್ಥಾನ ದೊರೆತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications