For Quick Alerts
ALLOW NOTIFICATIONS  
For Daily Alerts
 

Gongadi Trisha: ತವರಿನ ಪ್ರತಿಭೆಗೆ ಪ್ರೋತ್ಸಾಹಿಸಿದ ತೆಲಂಗಾಣ ಸರ್ಕಾರ: ಬಿಸಿಸಿಐಕ್ಕಿಂತ ಹೆಚ್ಚಿನ ಬಹುಮಾನ

ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತ ತಂಡ ಎರಡನೇ ಬಾರಿಗೆ ಐಸಿಸಿ ಅಂಡರ್ -19 ಮಹಿಳಾ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತು. ಈ ಐತಿಹಾಸಿಕ ಗೆಲುವಿನಲ್ಲಿ ತೆಲಂಗಾಣದ ಸ್ಟಾರ್ ಆಲ್‌ರೌಂಡರ್ ಗೊಂಗಡಿ ತ್ರಿಶಾ ದೊಡ್ಡ ಪಾತ್ರ ವಹಿಸಿದ್ದರು. ಅವರು ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ತವರಿನ ಪ್ರತಿಭೆಗೆ ಸನ್ಮಾನಿಸಿ ಭಾರೀ ನಗದು ಬಹುಮಾನ ನೀಡುವ ಮೂಲಕ ಮೂಲಕ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ರಾಜ್ಯ ಸರ್ಕಾರ ಅವರಿಗೆ ಪ್ರೋತ್ಸಾಹಿಸಿದೆ.

Telangana Government Encourages Gongadi Trisha by Awarding a Higher Prize Than BCCI

ಫೆಬ್ರವರಿ 5 ರಂದು ಗೊಂಗಡಿ ತ್ರಿಶಾ ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಜುಬಿಲಿ ಹಿಲ್ಸ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಗೊಂಗಡಿ ತ್ರಿಶಾ ಅವರ ಸಾಧನೆಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿ, 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದರು.

ಈ ಸಂದರ್ಭದಲ್ಲಿ ತೆಲಂಗಾಣ ಅಂಡರ್ -19 ವಿಶ್ವಕಪ್ ತಂಡದ ಸದಸ್ಯೆ ಧೃತಿ ಕೇಸರಿ, ಅಂಡರ್ -19 ವಿಶ್ವಕಪ್ ತಂಡದ ಮುಖ್ಯ ಕೋಚ್ ನೌಶೀನ್ ಅಲ್ ಖಾದೀರ್ ಮತ್ತು ತರಬೇತುದಾರಿ ಶಾಲಿನಿ ಅವರಿಗೆ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಿಎಂ ಘೋಷಿಸಿದರು. ಇದಕ್ಕೂ ಮುನ್ನ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಲೇಷ್ಯಾದಲ್ಲಿ ನಡೆದ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ನಿಕಿ ಪ್ರಸಾದ್ ನೇತೃತ್ವದ ಭಾರತ ತಂಡದ 15 ಸದಸ್ಯರ ಮಹಿಳಾ ತಂಡ ಮತ್ತು ಮುಖ್ಯ ಕೋಚ್ ನುಶೀನ್ ಅಲ್ ಖಾದೀರ್ ನೇತೃತ್ವದ ಸಹಾಯಕ ಸಿಬ್ಬಂದಿಗೆ ಒಟ್ಟು 5 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿತ್ತು.

ಬಿಸಿಸಿಐಕ್ಕಿಂತ ಹೆಚ್ಚಿನ ಬಹುಮಾನ

ಬಿಸಿಸಿಐ ನೀಡಿರುವ ನಗದು ಬಹುಮಾನವನ್ನು ಇಡೀ ಭಾರತ ತಂಡ ಮತ್ತು ಕೋಚಿಂಗ್ ಸಿಬ್ಬಂದಿಗೆ ಸಮಾನವಾಗಿ ಹಂಚಿದರೆ, ಗೊಂಗಡಿ ತ್ರಿಷಾಗೆ ಕೆಲವೇ ಲಕ್ಷ ರೂ.ಗಳು ಸಿಗುತ್ತವೆ. ಇಂತಹ ಸಂದರ್ಭದಲ್ಲಿ ತೆಲಂಗಾಣ ಸರ್ಕಾರ ಗೊಂಗಡಿ ತ್ರಿಷಾ ಅವರನ್ನು ಕೇವಲ 19ನೇ ವಯಸ್ಸಿನಲ್ಲಿ 1 ಕೋಟಿ ರೂಪಾಯಿ ನಗದು ಬಹುಮಾನ ನೀಡುವ ಮೂಲಕ ಕೋಟ್ಯಾಧಿಪತಿಯನ್ನಾಗಿ ಮಾಡಿದೆ.

ತ್ರಿಷಾ ಪ್ರದರ್ಶನ

ಭಾರತದ ಉದಯೋನ್ಮುಖ ಪ್ರತಿಭೆ ತ್ರಿಷಾ ಐಸಿಸಿ ಅಂಡರ್ -19 ಮಹಿಳಾ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದು, ಸರಾಸರಿ 77.25 ಮತ್ತು 147.14 ಸ್ಟ್ರೈಕ್ ರೇಟ್‌ನಲ್ಲಿ 309 ರನ್ ಕಲೆ ಹಾಕಿದ್ದಾರೆ. ಅವರು ಅಂಡರ್ -19 ಮಹಿಳಾ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಕೇವಲ ಬ್ಯಾಟಿಂಗ್ ಮಾತವಲ್ಲದೆ, ಬೌಲಿಂಗ್‌fನಲ್ಲಿಯೂ ಮಿಂಚಿದ ಅವರು 3.75 ರ ಎಕಾನಮಿ ದರದಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದರು. ಎರಡು ಬಾರಿ 3 ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ತ್ರಿಶಾ 3 ವಿಕೆಟ್‌ಗಳನ್ನು ಕಬಳಿಸಿದರೆ, ನಂತರ ಬ್ಯಾಟಿಂಗ್‌ನಲ್ಲಿಯೂ 33 ಎಸೆತಗಳಲ್ಲಿ ಅಜೇಯ 44 ರನ್‌ಗಳನ್ನು ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರಿ. ಅಲ್ಲದೆ, ಟೂರ್ನಿಯುದ್ದಕ್ಕೂ ನೀಡಿದ ಅಮೋಘ ಪ್ರದರ್ಶನಕ್ಕಾಗಿ ಅವರಿಗೆ ಮ್ಯಾನ್ ಆಫ್ ಸೀರಿಸ್ ಪ್ರಶಸ್ತಿಯನ್ನು ನೀಡಲಾಯಿತು.

Story first published: Thursday, February 6, 2025, 19:13 [IST]
Other articles published on Feb 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+