Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಲ್ಕತ್ತ ಟೆಸ್ಟ್‌ ಗೆದ್ದು ಇತಿಹಾಸ ಬರೆದ ದಕ್ಷಿಣ ಆಫ್ರಿಕಾ ನಾಯಕ ತೆಂಬು ಬವುಮಾ

ದಕ್ಷಿಣ ಆಫ್ರಿಕಾ ಭಾರತದ ಪ್ರವಾಸವನ್ನು ಆರಂಭಿಸುವ ಮುನ್ನ, ಹಲವು ಪ್ರಶ್ನೆಗಳು ಎದ್ದಿದ್ದವು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ದಕ್ಷಿಣ ಆಫ್ರಿಕಾ ಆಟಗಾರರು ಸ್ಪಿನ್ ಪಿಚ್‌ಗಳ ಮೇಲೆ ಹೇಗೆ ಆಡುತ್ತಾರೆ ಎಂಬ ಪ್ರಶ್ನೆಯೂ ಇತ್ತು. ಆದರೆ ಭಾನುವಾರ ಮಧ್ಯಾಹ್ನದ ವೇಳೆಗೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ಸ್ಥಿರ ಪ್ರದರ್ಶನ ನೀಡಿ, ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 30 ರನ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಆಫ್ರಿಕಾ 15 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್‌ ಪಂದ್ಯ ಗೆದ್ದ ದಾಖಲೆ ಬರೆದಿದೆ.

ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರ ಹಿಂದೆ ನಾಯಕನ ಪಾತ್ರ ಬಹಳ ಮುಖ್ಯ. ಇವರು ಎರಡನೇ ಇನಿಂಗ್ಸ್‌ನಲ್ಲಿ ಆಡಿದ ಧಾಟಿಯೇ ಪಂದ್ಯವನ್ನು ಭಾರತದಿಂದ ದಕ್ಷಿಣ ಆಫ್ರಿಕಾ ಕಡೆಗೆ ವಾಲಿಸಿತು. ಬರೀ ಬ್ಯಾಟರ್‌ ಆಗಿ ಸ್ಥಿರ ಪ್ರದರ್ಶನ ನೀಡದ ಬವುಮಾ ಈಗ ನಾಯಕನಾಗಿಯೂ ದೊಡ್ಡ ದಾಖಲೆ ಬರೆದಿದ್ದಾರೆ. ತೆಂಬು ಬವುಮಾ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ತಂಡ ಒಂದೇ ಒಂದು ಸೋಲನ್ನು ಕಂಡಿಲ್ಲ. ಬವುಮಾ ಮುಂದಾಳತ್ವದ ತಂಡದ ದಾಖಲಿಸಿದ 10ನೇ ಗೆಲುವು ಇದಾಗಿದೆ.

Temba Bavuma Breaks Ben Stokes Record Becomes Fastest Captain to 10 Test Wins After Kolkata Victory

ತೆಂಬು ಬವುಮಾ ಕೋಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸುತ್ತಿದ್ದಂತೆ ದೊಡ್ಡ ದಾಖಲೆ ಬರೆದಿದ್ದಾರೆ. ತೆಂಬು ಬವುಮಾ ಟೆಸ್ಟ್‌ ಫಾರ್ಮೆಟ್‌ನಲ್ಲಿ ಅತಿ ವೇಗವಾಗಿ 10 ಪಂದ್ಯಗಳನ್ನು ಗೆದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ಬೆನ್‌ ಸ್ಟೋಕ್ಸ್‌ ಹೆಸರಿನಲ್ಲಿ ಇತ್ತು. ಈಗ ಬವುಮಾ ಆ ದಾಖಲೆಯನ್ನು ಮುರಿದಿದ್ದಾರೆ. ಸ್ಟೋಕ್ಸ್‌ 12 ಪಂದ್ಯಗಳಲ್ಲಿ 10 ಜಯ ಸಾಧಿಸಿದ್ದರು. ಆದರೆ ಬವುಮಾ 11 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇವರ ನಾಯಕತ್ವದಲ್ಲಿ ತಂಡ ಒಂದೇ ಒಂದು ಪಂದ್ಯದಲ್ಲಿ ಡ್ರಾ ಕಂಡಿದೆ. ಹೀಗಾಗಿ ಬವುಮಾ ಸೋಲನ್ನು ಕಾಣದ ನಾಯಕನಾಗಿ ಮುನ್ನುಗುತ್ತಿದ್ದಾರೆ.

ಬವುಮಾ ಸಾಧನೆ

ತೆಂಬು ಬಬುಮಾ 2023ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಚುಕ್ಕಾಣಿಯನ್ನು ಹಿಡಿದರು. ಅಲ್ಲಿಂದ ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಬವುಮಾ ಅಬ್ಬರಿಸುತ್ತಿದ್ದಾರೆ. ಈ ವರೆಗೆ ಬವುಮಾ ಆಡಿದ 11 ಪಂದ್ಯಗಳಲ್ಲಿ 57ರ ಸರಾಸರಿಯಲ್ಲಿ 969 ರನ್‌ ಕಲೆ ಹಾಕಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ನಾಯಕರಾಗಿ 1 ಸಾವಿರ ರನ್‌ ಮೈಲಿಗಲ್ಲು ಮುಟ್ಟುವ ಸಾಧ್ಯತೆ ಇದೆ. ಬವುಮಾ ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯ ಎರಡನೇ ಇನಿಂಗ್ಸ್‌ನಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಮಾಡಿ 55 ರನ್‌ ಬಾರಿಸಿ ಮಿಂಚಿದ್ದರು. ಇವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಎತ್ತಿ ಸಂಭ್ರಮಿಸಿತ್ತು.

Story first published: Monday, November 17, 2025, 21:20 [IST]
Other articles published on Nov 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+