ಟೀಮ್ ಇಂಡಿಯಾದಲ್ಲಿ ಇದೆ ಗಂಭೀರ ಸಮಸ್ಯೆ: ಕಾರಣ ಏನು?
ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಾಗಿಲ್ಲ. ಅಲ್ಲಲ್ಲಿ ಅಸಮಾಧಾನದ ಹೊಗೆ ಆಡುತ್ತಿದೆ. ಇದರ ಸೂಚನೆ ಬುಧವಾರ ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯದ ವೇಳೆ ಕಂಡು ಬಂದಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಡ್ರಾ ಸಾಧಿಸಿದವು. ಈ ಪಂದ್ಯ ಮುಗಿದ ವೇಳೆ ಟೀಮ್ ಇಂಡಿಯಾದ ಖ್ಯಾತ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿ ಘೋಷಿಸಿದರು. ವಿದಾಯ ಹೇಳಿದ ಅಶ್ವಿನ್ ರೀತಿ ಈಗ ಚರ್ಚೆಗಳು ಆರಂಭ ಮಾಡಿದೆ.
ಟೀಮ್ ಇಂಡಿಯಾದಲ್ಲಿ ಅಶ್ವಿನ್ ಸ್ಥಾನ ಸಿಗುತ್ತಿಲ್ಲ ಎಂದು ಬೇಸರಗೊಂಡು ಹೊರ ನಡೆದರು. ಆದರೆ ತಮ್ಮಲ್ಲಿ ಇನ್ನು ಕ್ರಿಕೆಟ್ ಇದೆ. ಈ ಕ್ರಿಕೆಟ್‌ನ್ನು ನಾನು ಕ್ಲಬ್ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಹೇಳಿಕೆಯಿಂದ ಟೀಮ್ ಇಂಡಿಯಾದಲ್ಲಿ ಅನುಭವಿ ಆಟಗಾರರಿಗೆ ಮನ್ನಣೆ ಇಲ್ಲ ಎಂಬುದು ನಿಶ್ಚಿತವಾಗಿ ಅರಿವು ಆಗುತ್ತಿದೆ.

ಅಶ್ವಿನ್ ನಿವೃತ್ತಿ
ಬಾರ್ಡರ್ ಗವಾಸ್ಕರ್ ಸರಣಿ ಮುಗಿದ ಬಳಿಕ ಒಬ್ಬ ಪ್ಲೇಯರ್ ನಿವೃತ್ತಿ ಆಗುತ್ತಾರೆ ಎಂಬು ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಇನ್ನು ಎರಡು ಟೆಸ್ಟ್ ಪಂದ್ಯಗಳು ಬಾಕಿ ಇರುವಂತೆ ನಿವೃತ್ತಿ ಘೋಷಿಸಬಹುದು ಎಂದ ಯಾರು ಊಹಿಸಿರಲು ಸಾಧ್ಯವೇ ಇಲ್ಲ.ಈ ಬೆಳವಣಿಗೆಗಳನ್ನು ನೋಡಿದಾಗ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಅನಿಸುತ್ತಿದೆ.
ಗಂಭೀರ ಸಮಸ್ಯೆ
ಸಾಮಾನ್ಯವಾಗಿ ಟೀಮ್‌ಗೆ ಹೊಸ ಕೋಚ್ ಆಗಮನವಾದ ಬಳಿಕ, ಅವರು ತಮ್ಮ ಇಚ್ಛೆಯ ಅನುಸಾರ ತಂಡವನ್ನು ಕಟ್ಟುತ್ತಾರೆ. ಈ ನಿಟ್ಟಿನಲ್ಲಿ ನೂತನ ಕೋಚ್ ಗೌತಮ್ ಗಂಭೀರ್ ಸಹ ತಮ್ಮ ಕನಸಿನ ತಂಡವನ್ನು ಕಟ್ಟುವಲ್ಲಿ ನಿರತರಾದಂತೆ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಗಂಭೀರ್ ಯುವ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಾ, ಅನುಭವಿ ಆಟಗಾರರನ್ನು ಕಡೆಗಣನೆ ಮಾಡಿದಂತೆ ಕಾಣುತ್ತಿದೆ.
ಗಂಭೀರ ಹಾಕಿರುವ ಷರತ್ ಏನು?
ಗಂಭೀರ್ ಯುವ ಆಟಗಾರರಿಗೆ ಆದ್ಯತೆ ನೀಡುತ್ತಾರೆ ಎಂಬುದನ್ನು ಮುಚ್ಚಿ ಇಡುವ ಅವಶ್ಯಕತೆ ಇಲ್ಲ. ಇವರು ಕೋಚ್ ಹುದ್ದೆಯನ್ನು ಅಲಂಕರಿಸುವಾಗ ಹಲವು ಷರತ್ತುಗಳನ್ನು ಹಾಕಿದ್ದರು. ಆ ಷರತ್ತಿಗೆ ಬಿಸಿಸಿಐ ಒಪ್ಪಿಗೆ ನೀಡಿದರೆ ಮಾತ್ರ ತಾವು ಕೋಚ್ ಹುದ್ದೆ ಅಲಂಕರಿಸುವುದಾಗಿ ತಿಳಿಸಿದ್ದರು. ಅದರಂತೆ ಬಿಸಿಸಿಐ ಸಹ ಇವರ ಮಾತಿಗೆ ಮನ್ನಣೆ ನೀಡಿ ಇವರಿಗೆ ಸ್ಥಾನ ನೀಡಿತು. ಅದರಂತೆ ಫಾರ್ಮ್‌ನಲ್ಲಿ ಇಲ್ಲದ ಆಟಗಾರರಿಗೆ ಹೆಚ್ಚು ದಿನ ತಂಡದಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ ಎಂದು ಗಂಭೀರ್ ಪರೋಕ್ಷವಾಗಿ ತಿಳಿಸಿದ್ದರು.
ಇದರಂತೆ ಅಶ್ವಿನ್ ಲಯದಲ್ಲಿ ಇರಲಿಲ್ಲ. ಹೀಗಾಗಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಲಿಲ್ಲ. ಈ ಎಲ್ಲ ಸನ್ನಿವೇಶಗಳನ್ನು ನೋಡ್ತಾ ಇದ್ದರೆ ಭಾರತ ತಂಡದಲ್ಲಿ ಗಂಭೀರ ಸಮಸ್ಯೆ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆಯುತ್ತಾರೆ ಎಂಬುವುದು ತೀವ್ರ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications