ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

142 ವರ್ಷಗಳ ಹಿಂದಿನ ಟೆಸ್ಟ್‌ ಕ್ರಿಕೆಟ್‌ ಸಂಪ್ರದಾಯವೊಂದು ಕೊನೆಗೊಳ್ಳಲಿದೆ!

Test cricket attire set to be changed after 142 years

ಲಂಡನ್, ಮಾರ್ಚ್ 22: ದೀರ್ಘ ಮಾದರಿಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸುಮಾರು ನೂರಾರು ವರ್ಷಗಳಿಂದಲೂ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವೊಂದು ಕೊನೆಗೊಳ್ಳುವುದರಲ್ಲಿದೆ. ಟೆಸ್ಟ್ ಜೆರ್ಸಿ ಇನ್ಮುಂದೆ ಬರಿ ಬಿಳಿಯ ಬಣ್ಣದಲ್ಲಿರೋಲ್ಲ, ಬದಲಿಗೆ ಟೆಸ್ಟ್ ಜೆರ್ಸಿಯಲ್ಲಿ ಅಪರೂಪದ ಬದಲಾವಣೆ ಇನ್ಮುಂದೆ ಕಾಣಸಿಗಲಿದೆ.

25 ಎಸೆತಗಳಿಗೆ ಶತಕ, ಓವರ್‌ಗೆ 6 ಸಿಕ್ಸ್ ಚಚ್ಚಿದ ವಿಲ್ ಜ್ಯಾಕ್ಸ್: ವಿಡಿಯೋ25 ಎಸೆತಗಳಿಗೆ ಶತಕ, ಓವರ್‌ಗೆ 6 ಸಿಕ್ಸ್ ಚಚ್ಚಿದ ವಿಲ್ ಜ್ಯಾಕ್ಸ್: ವಿಡಿಯೋ

ಏಕದಿನ ಕ್ರಿಕೆಟ್ ಮತ್ತು ಟಿ20 ಮಾದರಿಗಿಂತ ಟೆಸ್ಟ್ ಕ್ರಿಕೆಟ್ ಕೊಂಚ ಭಿನ್ನ. ಆದರೆ ಟೆಸ್ಟ್ ಕ್ರಿಕೆಟ್‌ಗೆ ಅದರದ್ದೇ ಮಹತ್ವವಿದೆ. ದೀರ್ಘ ಇತಿಹಾಸವೂ ಇದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬಿಳಿಯ ಬಣ್ಣದ ಜೆರ್ಸಿ ಬಳಸಲಾಗುತ್ತಿತ್ತು. ಏಕದಿನ, ಟಿ20ಯಲ್ಲಿರುವಂತೆ ಟೆಸ್ಟ್ ಜೆರ್ಸಿಯಲ್ಲಿ ಆಟಗಾರರ ಹೆಸರಾಗಲಿ, ಅವರ ಜೆರ್ಸಿ ಸಂಖ್ಯೆಯಾಗಲಿ ಇರುತ್ತಿರಲಿಲ್ಲ.

IPL 2019: ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರಕ್ಕೆ ನಿಷೇಧ, ಭಾರತಕ್ಕೆ ನಷ್ಟ?!IPL 2019: ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರಕ್ಕೆ ನಿಷೇಧ, ಭಾರತಕ್ಕೆ ನಷ್ಟ?!

ಆದರೆ ಇನ್ಮುಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮಹತ್ತರ ಬದಲಾವಣೆ ಕಾಣುವ ಸಾಧ್ಯತೆಗಳಿವೆ. ಬದಲಾವಣೆಯ ಹೊಸ ಪ್ರಸ್ತಾಪಕ್ಕೆ ಐಸಿಸಿಯಿಂದ ಒಪ್ಪಿಗೆ ಲಭಿಸಿದರೆ ಟೆಸ್ಟ್ ಜೆರ್ಸಿಯ ಹಳೆಯ ಸಂಪ್ರದಾಯ ಮುರಿದು ಬೀಳಲಿದೆ.

142 ವರ್ಷಗಳ ಇತಿಹಾಸ

142 ವರ್ಷಗಳ ಇತಿಹಾಸ

ಬರೀ ಬಿಳಿ ಬಣ್ಣದಲ್ಲಿರುವ ಟೆಸ್ಟ್ ಜೆರ್ಸಿಯಲ್ಲಿ ಬದಲಾವಣೆ ತರಲು ಪ್ರಸ್ತಾಪ ಸಲ್ಲಿಸಲಾಗಿರುವುದರಿಂದ ಇನ್ಮುಂದೆ ಟೆಸ್ಟ್ ಜೆರ್ಸಿಯಲ್ಲೂ ಏಕದಿನ ದಿನ ಮತ್ತು ಟಿ20ಯಲ್ಲಿರುವಂತೆ ಆಟಗಾರರ ಹೆಸರು ಮತ್ತು ಜೆರ್ಸಿ ಸಂಖ್ಯೆ ಕಾಣಸಿಗಲಿದೆ. ಒಟ್ಟಿನಲ್ಲಿ 1877ರಲ್ಲಿ ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಿಂದಲೂ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವೊಂದು ಕೊನೆಗೊಳ್ಳುವುದರಲ್ಲಿದೆ.

ಇಂಗ್ಲೆಂಡ್-ಆಸ್ಟ್ರೇಲಿಯಾದಿಂದ ಪ್ರಸ್ತಾಪ

ಇಂಗ್ಲೆಂಡ್-ಆಸ್ಟ್ರೇಲಿಯಾದಿಂದ ಪ್ರಸ್ತಾಪ

ಟೆಸ್ಟ್ ಕ್ರಿಕೆಟ್ ಆರಂಭಿಕ ಪಂದ್ಯದಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳೇ ಟೆಸ್ಟ್ ಕ್ರಿಕೆಟ್‌ನ ಈ ಸಂಪ್ರದಾಯ ಮುರಿಯಲು ಸಜ್ಜಾಗಿವೆ. ಎರಡೂ ತಂಡಗಳು ಟೆಸ್ಟ್ ಜೆರ್ಸಿ ಮೇಲೆ ಆಟಗಾರರ ಹೆಸರು, ಜೆರ್ಸಿ ಸಂಖ್ಯೆ ತರುವ ಬಗ್ಗೆ ಐಸಿಸಿಗೆ ಪ್ರಸ್ತಾಪ ಸಲ್ಲಿಸಿವೆ.

ಇನ್ನೂ ಒಪ್ಪಿಗೆ ಸಿಕ್ಕಿಲ್ಲ

ಇನ್ನೂ ಒಪ್ಪಿಗೆ ಸಿಕ್ಕಿಲ್ಲ

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸಲ್ಲಿಸಿರುವ ಈ ಪ್ರಸ್ತಾಪಕ್ಕೆ ಐಸಿಸಿಯಿಂದ ಇನ್ನೂ ಒಪ್ಪಿಗೆ ಲಭಿಸಿಲ್ಲ. ಆದರೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಒಂದು ವೇಳೆ ಟೆಸ್ಟ್‌ ಜೆರ್ಸಿಯಲ್ಲಿ ಬದಲಾವಣೆ ತರಲು ಐಸಿಸಿಯಿಂದ ಒಪ್ಪಿಗೆ ಸಿಕ್ಕರೆ, ಆಗಸ್ಟ್ 1ರಿಂದ ಆರಂಭಗೊಳ್ಳಲಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್ ಮತ್ತು ಆಸೀಸ್ ತಂಡಗಳು ನೂತನ ಜೆರ್ಸಿಯೊಂದಿಗೆ ಪ್ರಥಮ ಬಾರಿಗೆ ಮೈದಾನಕ್ಕಿಳಿಯಲಿದೆ.

ಬದಲಾವಣೆ ಯಾಕೆ ಬೇಕು?

ಬದಲಾವಣೆ ಯಾಕೆ ಬೇಕು?

ಟೆಸ್ಟ್ ಕ್ರಿಕೆಟ್‌ಗಳ ಬಗ್ಗೆ ಒಲವನ್ನು ಹೊಂದಿರುವ ಕ್ರಿಕೆಟ್ ಅಭಿಮಾನಿಗಳು ಈಗಲೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಿಳಿಯ ಬಣ್ಣದ ಜೆರ್ಸಿಯಲ್ಲಿ ಆಟಗಾರರ ಹೆಸರು ಮತ್ತು ಸಂಖ್ಯೆಯನ್ನು ನಮೂದಿಸಿದರೆ ಮೈದಾನದಲ್ಲಿರುವ ಆಟಗಾರರನ್ನು ಗುರುತಿಸೋದು ಸುಲಭವಾಗಲಿದೆ. ಹೀಗಾಗಿ ಜೆರ್ಸಿಯಲ್ಲಿ ಬದಲಾವಣೆ ತರುವ ಪ್ರಸ್ತಾಪಕ್ಕೆ ಐಸಿಸಿಯಿಂದ ಒಪ್ಪಿಗೆಯೂ ಸಿಗುವುದರಲ್ಲಿದೆ.

Story first published: Friday, March 22, 2019, 13:16 [IST]
Other articles published on Mar 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X